ಇನ್ಕ್ರೆಡಿಬಲ್ ಇಂಡಿಯಾ:ಅಮಿತಾಭ್, ಪ್ರಿಯಾಂಕಾ ಬ್ರಾಂಡ್ ಅಂಬಾಸಡರ್*
ಉದಯವಾಣಿ, Jan 21, 2016, 3:24 PM IST
ಮುಂಬಯಿ: ಇನ್ಕ್ರೆಡಿಬಲ್ ಇಂಡಿಯಾ ಅಭಿಯಾನದ
ಹೊಸ ಬ್ರಾಂಡ್ ಅಂಬಾಸಡರ್ಗಳಾಗಿ
ಬಾಲಿವುಡ್ನ ಬಿಗ್ ಬಿ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಮತ್ತು ನಟಿ
ಪ್ರಿಯಾಂಕಾ ಚೋಪ್ರಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು
ತಾಜಾ ವರದಿಗಳು ತಿಳಿಸಿವೆ.
ಕಳೆದ ಕೆಲವು ವರ್ಷಗಳಲ್ಲಿ ಇನ್ಕ್ರೆಡಿಬಲ್ ಇಂಡಿಯಾದ
ಬ್ರಾಂಡ್ ಅಂಬಾಸಡರ್ ಆಗಿ ಬಾಲಿವುಡ್ ಸೂಪರ್ ಸ್ಟಾರ್
ಆಮೀರ್ ಖಾನ್ ಕೆಲಸ ಮಾಡುತ್ತಿದ್ದರು. ಈ ಅಭಿಯಾನ
ನಡೆಸುತ್ತಿದ್ದ ಕಂಪೆನಿಯಿಂದ ಗುತ್ತಿಗೆ ಮುಗಿದ ತರುವಾಯ
ನಿರ್ಗಮಿಸಿರುವ ಆಮೀರ್ ಅವರ ಸ್ಥಾನಕ್ಕೆ ಇದೀಗ
ನೂತನ ಬ್ರಾಂಡ್ ಅಂಬಾಸಡರ್ಗಳಾಗಿ ಅಮಿತಾಭ್ ಬಚ್ಚನ್
ಮತ್ತು ಮಾಜಿ ಮಿಸ್ ವರ್ಲ್ಡ್ ಆಗಿರುವ ಪ್ರಿಯಾಂಕಾ ಚೋಪ್ರಾ ಮೂಡಿ
ಬರಲಿದ್ದಾರೆ.
ಮೂರು ವರ್ಷಗಳ ಈ ಗುತ್ತಿಗೆಗೆ ನೂತನ ಅಂಬಾಸಡರ್ಗಳಾಗಿ ಕೆಲಸ
ಮಾಡುವ ಅಮಿತಾಭ್ ಬಚ್ಚನ್ ಮತ್ತು ಪ್ರಿಯಾಂಕಾ ಚೋಪ್ರಾ ಅವರು
ಚಿಕ್ಕಾಸನ್ನೂ ಚಾರ್ಜ್ ಮಾಡಿಲ್ಲ. ಇನ್ಕ್ರೆಡಿಬಲ್ ಇಂಡಿಯಾ
ಅಭಿಯಾನದ ಅಂಬಾಸಡರ್ಗಳಾಗಿ ಈ ತಾರೆಯರು
ಭಾರತೀಯ ಪ್ರವಾಸೋದ್ಯಮಕ್ಕಾಗಿ ಪ್ರಚಾರ ಕಾರ್ಯ
ನಡೆಸಲಿದ್ದಾರೆ.
ಇನ್ಕ್ರೆಡಿಬಲ್ ಇಂಡಿಯಾ ಅಭಿಯಾನದ ಬ್ರಾಂಡ್
ಅಂಬಾಸಡರ್ ಆಗಿದ್ದ ಆಮೀರ್ ಖಾನ್ ಅವರು
ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ
ನೀಡಿದ ಫಲಶ್ರುತಿಯಾಗಿ ಈ ಅಭಿಯಾನದಿಂದ
ಹೊರಬಿದ್ದಿದ್ದರು ಎಂದು ತಪ್ಪಾಗಿ ಭಾವಿಸಲಾಗಿತ್ತು.
ಇನ್ಕೆಡಿಬಲ್ ಇಂಡಿಯಾ ಅಭಿಯಾನದ ಗುತ್ತಿಗೆ ಪಡೆದಿದ್ದ
ಜಾಹೀರಾತು ಸಂಸ್ಥೆಯಿಂದ ನಿಯೋಜಿತರಾಗಿದ್ದ
ಆಮೀರ್ ಅವರ ಒಳ ಗುತ್ತಿಗೆಯು ಮುಗಿದ ಪರಿಣಾಮವಾಗಿ
ಅವರು ಈ ಅಭಿಯಾನದಿಂದ ನಿರ್ಗಮಿಸಿದ್ದರು ಎನ್ನುವುದು
ವಾಸ್ತವ.
Comments
Post a Comment