ಅಕ್ಕಿ ರಫ್ತು: ಭಾರತ ನಂ.1
ಅಕ್ಕಿ ರಫ್ತು: ಭಾರತ ನಂ.1
1 Feb, 2016
ಬ್ಯಾಂಕಾಕ್ (ಐಎಎನ್ಎಸ್): ಕಳೆದ ವರ್ಷ ಅತಿ ಹೆಚ್ಚು ಅಕ್ಕಿ
ರಫ್ತು ಮಾಡಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಅಗ್ರ
ಸ್ಥಾನದಲ್ಲಿದೆ.
2015ರಲ್ಲಿ ಭಾರತವು ಜಾಗತಿಕ ಮಾರುಕಟ್ಟೆಗೆ 1.2 ಕೋಟಿ ಟನ್ ಅಕ್ಕಿ
ರಫ್ತು ಮಾಡಿದ್ದು, ಇಲ್ಲಿಯವರೆಗೆ ಮೊದಲ
ಸ್ಥಾನದಲ್ಲಿದ್ದ ಥಾಯ್ಲೆಂಡ್ ಎರಡನೇ ಸ್ಥಾನಕ್ಕೆ ಕುಸಿದಿದೆ.
2014ರಲ್ಲಿ 1.09 ಕೋಟಿ ಟನ್ ಅಕ್ಕಿ ರಫ್ತು ಮಾಡಿದ್ದ
ಥಾಯ್ಲೆಂಡ್ನ ಸಾಮರ್ಥ್ಯ 2015ರಲ್ಲಿ 98 ಲಕ್ಷ ಟನ್ಗೆ
ಕುಸಿದಿದೆ ಎಂದು ಥಾಯ್ ಅಕ್ಕಿ ರಫ್ತು ಸಂಘದ ಮುಖ್ಯಸ್ಥ
ಚಾರೋನ್ ಲೌಥಮ್ಥಾಟ್ ತಿಳಿಸಿದ್ದಾರೆ.
Comments
Post a Comment