2014 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ.

2014 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ.
ಸಂಚಾರಿ ವಿಜಯ್, ವಿಜಯಲಕ್ಷ್ಮಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ.
@educationgknews

ಬೆಂಗಳೂರು: 2014-15 ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದೆ. ನಾನು ಅವನಲ್ಲ ಅವಳು ಚಿತ್ರದ ನಟನೆಗೆ ಸಂಚಾರಿ ವಿಜಯ್‍ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ವಿದಾಯ ಚಿತ್ರದಲ್ಲಿನ ಅಭಿನಯಕ್ಕಾಗಿ ಲಕ್ಷ್ಮೀ ಗೋಪಾಲಸ್ವಾಮಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬರಗೂರು ರಾಮಚಂದ್ರಪ್ಪ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಬಸಂತ್ ಕುಮಾರ್ ಪಾಟೀಲ್ ಅವರಿಗೆ ಡಾ.ರಾಜ್‍ಕುಮಾರ್ ಪ್ರಶಸ್ತಿ ಮತ್ತು ಸುರೇಶ್ ಕೃಷ್ಣ ಅರಸ್ ಅವರಿಗೆ ಡಾ. ವಿಷ್ಣುವರ್ಧನ್ ಪ್ರಶಸ್ತಿ ಲಭಿಸಿದೆ.

ಅತ್ಯುತ್ತಮ ಚಿತ್ರ: ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಹರಿವು ಚಿತ್ರಕ್ಕೆ ಮೊದಲನೇ ಸ್ಥಾನ, ಅಭಿಮನ್ಯು ಚಿತ್ರಕ್ಕೆ ದ್ವೀತೀಯ ಸ್ಥಾನ ಮತ್ತು ಹಗ್ಗದ ಕೊನೆ ಚಿತ್ರಕ್ಕೆ ತೃತೀಯ ಸ್ಥಾನ ಸಿಕ್ಕಿದೆ.

ಯಾವ ಚಿತ್ರಕ್ಕೆ ಯಾರಿಗೆ ಯಾವ ಪ್ರಶಸ್ತಿ?
ಅತ್ಯುತ್ತಮ ಪೋಷಕ ನಟ – ಅರುಣ್ ದೇವಸ್ಯ
ಅತ್ಯುತ್ತಮ ಪೋಷಕ ನಟಿ – ಬಿ ಜಯಶ್ರೀ, (ಕೌದಿ)
ಅತ್ಯುತ್ತಮ ಕಥೆ – ವಿದ್ಯಾ (`ನಾನು ಅವನಲ್ಲ ಅವಳು')
ಅತ್ಯುತ್ತಮ ಚಿತ್ರಕಥೆ – ಪಿ.ಶೇಷಾದ್ರಿ (ವಿದಾಯ)
ಅತ್ಯುತ್ತಮ ಸಂಭಾಷಣೆ – ವೇಣು (ತಿಪ್ಪಜ್ಜಿ ಸರ್ಕಲ್)
ಅತ್ಯುತ್ತಮ ಛಾಯಾಗ್ರಹಣ -ಸತ್ಯ ಹೆಗಡೆ (ರಾಟೆ)
ಅತ್ಯುತ್ತಮ ಸಂಗೀತ ನಿರ್ದೇಶನ – ಅಜನೀಶ್ ಲೋಕನಾಥ್ (ಉಳಿದವರು ಕಂಡಂತೆ)
ಅತ್ಯುತ್ತಮ ಸಂಕಲನ – ಶ್ರೀಕಾಂತ್ (ಉಗ್ರಂ)
ಅತ್ಯುತ್ತಮ ಬಾಲನಟ – ಮಾಸ್ಟರ್ ಸ್ನೇಹಿತ್ (ಸಚಿನ್ ತೆಂಡೂಲ್ಕರ್ ಅಲ್ಲ)
ಅತ್ಯುತ್ತಮ ಕಲಾ ನಿರ್ದೇಶನ- ಚಂದ್ರಕಾಂತ್ (143)
ಅತ್ಯುತ್ತಮ ಗೀತರಚನೆ – ಹುಲಿಕುಂಟೆ ಮೂರ್ತಿ (ಕೌದಿ)
ಅತ್ಯುತ್ತಮ ಹಿನ್ನೆಲೆ ಗಾಯಕ – ಚಿಂತನ್ (ಗಜಕೇಸರಿ)
ಅತ್ಯುತ್ತಮ ಹಿನ್ನೆಲೆ ಗಾಯಕಿ – ವಿದ್ಯಾ ಮೋಹನ್ (ಸಚಿನ್ ತೆಂಡೂಲ್ಕರ್ ಅಲ್ಲ)

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು