ಜೊಕೊವಿಕ್ ನೊವಾಕ್ಗೆ ಆರನೇ ಆಸ್ಟ್ರೇಲಿಯಾ ಕಿರೀಟ:-


ನೊವಾಕ್ಗೆ ಆರನೇ ಆಸ್ಟ್ರೇಲಿಯಾ ಕಿರೀಟ
ಏಜೆನ್ಸೀಸ್ | Feb 1, 2016, 04.30 AM IST
3101-2-2-NOVAK
A A A
-ರಾಯ್ ಎಮರ್ಸನ್ ದಾಖಲೆ ಸರಿಗಟ್ಟಿದ
ಜೊಕೊವಿಕ್ ಐದನೇ ಬಾರಿ ಫೈನಲ್ನಲ್ಲಿ
ಮುಗ್ಗರಿಸಿದ ಬ್ರಿಟನ್ನ ಆಂಡಿ ಮರ್ರೆ-
ಮೆಲ್ಬೋರ್ನ್: ಅಕ್ಷರಶಃ ಅಬ್ಬರದ ಆಟವಾಡಿದ ವಿಶ್ವದ ನಂ.1
ಆಟಗಾರ ಸರ್ಬಿಯಾದ ನೊವಾಕ್
ಜೊಕೊವಿಕ್, ಇಲ್ಲಿ
ಮುಕ್ತಾಯಗೊಂಡ ಆಸ್ಟ್ರೇಲಿಯಾ ಓಪನ್
ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯ ಪುರುಷರ ಸಿಂಗಲ್ಸ್
ಫೈನಲ್ನಲ್ಲಿ ಬ್ರಿಟನ್ನ ಆ್ಯಂಡಿ ಮರ್ರೆ ಅವರನ್ನು ಬಗ್ಗು
ಬಡಿದು ಚಾಂಪಿಯನ್ ಪಟ್ಟ ಅಲಂಕರಿಸಿದರು.
ಇಲ್ಲಿನ ರಾಡ್ ಲೆವರ್ ಅರೆನಾದಲ್ಲಿ ಭಾನುವಾರ ನಡೆದ
ಹೊನಲು ಬೆಳಕಿನ ಫೈನಲ್ ಪಂದ್ಯದಲ್ಲಿ
ಮಿಂಚಿದ ಹಾಲಿ ಚಾಂಪಿಯನ್ ನೊವಾಕ್,
6-1, 7-5, 7-6(7/3)ರ ನೇರ ಸೆಟ್ಗಳಿಂದ ಐದನೇ ಬಾರಿ
ಆಸ್ಟ್ರೇಲಿಯಾ ಓಪನ್ ಫೈನಲ್ ಪಂದ್ಯವನ್ನಾಡುತ್ತಿದ್ದ
ಆ್ಯಂಡಿ ಮರ್ರೆಗೆ ಸೋಲುಣಿಸಿದರು.
ಎರಡು ಗಂಟೆ 53 ನಿಮಿಷಗಳ ಕಾಲ ನಡೆದ ಫೈನಲ್ ಕದನದಲ್ಲಿ
ಸಿಕ್ಕಂತಹ ಅಮೋಘ ಗೆಲುವಿನೊಂದಿಗೆ ವೃತ್ತಿ
ಬದುಕಿನ ಆರನೇ ಆಸ್ಟ್ರೇಲಿಯಾ ಓಪನ್ ಗ್ರ್ಯಾನ್ ಸ್ಲ್ಯಾಮ್ ಗೆದ್ದ
ನೊವಾಕ್ ಜೊಕೊವಿಕ್,
ಅತಿ ಹೆಚ್ಚು ಬಾರಿ ಆಸೀಸ್ ಚಾಂಪಿಯನ್ ಪಟ್ಟ
ಅಲಂಕರಿಸಿದ ರಾಯ್ ಎಮರ್ಸನ್ (6 ಪ್ರಶಸ್ತಿ) ಅವರ
ದಾಖಲೆಯನ್ನು ಸರಿಗಟ್ಟಿದರು.
11ನೇ ಗ್ರ್ಯಾನ್ ಸ್ಲ್ಯಾಮ್ ಗೆಲುವು
ಬ್ರಿಟನ್ನ ತಾರೆ ಆ್ಯಂಡಿ ಮರ್ರೆ ಈ ವರೆಗೆ ಐದು ಬಾರಿ
ಆಸ್ಟ್ರೇಲಿಯಾ ಓಪನ್ ಫೈನಲ್ ತಲುಪಿದ್ದು ಒಮ್ಮೆಯೂ ಯಶಸ್ಸು
ಕಾಣಲು ಸಾಧ್ಯವಾಗಿಲ್ಲ. ಇದರಲ್ಲಿ ನಾಲ್ಕು ಬಾರಿ
ಜೊಕೊವಿಕ್ ಎದುರು ಮುಗ್ಗರಿಸಿರುವುದು
ವಿಶೇಷ. ಇದೇ ವೇಳೆ ವೃತ್ತಿ ಜೀವನದ 11ನೇ ಗ್ರ್ಯಾನ್
ಸ್ಲ್ಯಾಮ್ ಗೆದ್ದ ಸರ್ಬಿಯಾದ ಚಾಂಪಿಯನ್ ಆಟಗಾರ
ನೊವಾಕ್, ಆಸ್ಟ್ರೇಲಿಯಾದ ರಾಡ್ ಲೆವರ್ ಮತ್ತು
ಸ್ವೀಡನ್ನ ಜೊರ್ನ್ ಬೊರ್ಗ್
ಅವರ 11 ಪ್ರಶಸ್ತಿಗಳ ದಾಖಲೆಯನ್ನೂ ಸರಿಗಟ್ಟಿದರು.
ಆರಂಭದಿಂದಲೇ ಅಬ್ಬರದ ಆಟ
ಸೆಮಿಫೈನಲ್ ಹಣಾಹಣಿಯಲ್ಲಿ ಶರವೇಗದಲ್ಲಿ ಎರಡು ಸೆಟ್ ಗೆದ್ದು
ಎದುರಾಳಿಯ ಮೇಲೆ ಸಂಪೂರ್ಣ ಒತ್ತಡ ಹೇರಿ ಜಯ ದಾಖಲಿಸಿದ್ದ
ನೊವಾಕ್ ಜೊಕೊವಿಕ್,
ಫೈನಲ್ ಪಂದ್ಯದಲ್ಲಿಯೂ ಇದೇ ತಂತ್ರ ಬಳಸಿ
ಮತ್ತೊಮ್ಮೆ ಯಶಸ್ಸು ಕಂಡರು.
ಮೊದಲ ಗೇಮ್ನಿಂದಲೇ ಆಕ್ರಮಣಕಾರಿ ಆಟಕ್ಕೆ
ಮುಂದಾದ ನೊವಾಕ್, ಎರಡು ಬಾರಿ ಎದುರಾಳಿಯ
ಸರ್ವ್ ಮುರಿದು ಕೇವಲ 30 ನಿಮಿಷಗಳ ಅಂತರದಲ್ಲಿ 6-1
ಗೇಮ್ಗಳಿಂದ ಮೊದಲ ಸೆಟ್
ವಶಪಡಿಸಿಕೊಂಡರು.
2ನೇ ಸೆಟ್ನಲ್ಲಿ ಮ್ಯಾರಥಾನ್ ಹೋರಾಟ
ಮೊದಲ ಸೆಟ್ನಲ್ಲಿ ಮಿಂಚಿನ
ಗೆಲುವಿನೊಂದಿಗೆ ನೊವಾಕ್ 1-0
ಅಂತರದಲ್ಲಿ ಮುನ್ನಡೆ ಪಡೆದರು. ಆದರೆ, 2ನೇ ಸೆಟ್ನಲ್ಲಿ
ಜಿದ್ದಾಜಿದ್ದಿನ ಹೋರಾಟ ನಡೆಸಿದ ಮರ್ರೆ 5-5ರಲ್ಲಿ ಸಮಬಲ
ತಂದುಕೊಂಡರು. ಆದರೆ, ಈ
ಹಂತದಲ್ಲಿ ಮರ್ರೆ ಸರ್ವ್ ಮುರಿಯುವಲ್ಲಿ ಸಫಲರಾದ
ಜೊಕೊವಿಕ್ 7-5ರಲ್ಲಿ 2ನೇ ಸೆಟ್ ಗೆದ್ದು
2-0 ಅಂತರದಲ್ಲಿ ಮೇಲುಗೈ ಕಂಡರು. ಬರೋಬ್ಬರಿ 80
ನಿಮಿಷಗಳ ಕಾಲ ನಡೆದ ಈ ಸೆಟ್ನಲ್ಲಿ ಅಂತ್ಯದಲ್ಲಿ ಮಾಡಿದ
ಸಣ್ಣ ತಪ್ಪಿನಿಂದಾಗಿ ಮರ್ರೆ ಹಿನ್ನಡೆ
ಅನುಭವಿಸುವಂತಾಯಿತು.
ನಿರ್ಣಾಯಕ ಸೆಟ್ನಲ್ಲಿ ಮಿಂಚಿನ ಸರ್ವ್
ಪಂದ್ಯದಲ್ಲಿ ಮರ್ರೆ ಒಟ್ಟಾರೆ 12 ಏಸ್ಗಳನ್ನು ಸಿಡಿಸಿದರೂ
ಜೊಕೊವಿಕ್ ಅಬ್ಬರಕ್ಕೆಬ್ರೇಕ್ ಹಾಕಲು
ಸಾಧ್ಯವಾಗಲಿಲ್ಲ. ಮೂರನೇ ಸೆಟ್ನಲ್ಲಿ ಮರ್ರೆ ಸರ್ವ್ ಹಿಡಿತ ಸಾಧಿಸಿ
6-6ರ ಸಮಬಲದೊಂದಿಗೆ ಟೈಬ್ರೇಕರ್ಗೆ
ಕರೆದೊಯ್ಯುವಲ್ಲಿ ಯಶಸ್ವಿಯಾದರು. ಆದರೆ, ಈ
ಹಂತದಲ್ಲಿ ಭರ್ಜರಿಯ ಏಸ್ ಸಿಡಿಸಿದ
ಜೊಕೊವಿಕ್ 7/3
ಅಂಕಗಳಿಂದ ಚಾಂಪಿಯನ್ ಪಟ್ಟ
ಗೆದ್ದುಕೊಂಡರು.
---
ಆಂಡಿ, ನೀವು ಚಾಂಪಿಯನ್ ಆಟಗಾರ, ಅಮೋಘ
ವ್ಯಕ್ತ ಮತ್ತು ಅಮೋಘ ಸ್ನೇಹಿತ. ಈ ಪ್ರಶಸ್ತಿ ಗೆಲುವಿಗಾಗಿ
ಮತ್ತೊಮ್ಮೆ ಪೈಪೋಟಿ ನಡೆಸುವ ಅವಕಾಶ ನಿಮಗೆ
ಖಂಡಿತಾ ಸಿಗಲಿದೆ. ಇನ್ನೂ ಲಾಡ್ ಲೆವರ್ ಹಾಗೂ ರಾಯ್ ಎಮರ್ಸನ್
ಅವರಂತಹ ಅದ್ಭುತ ಆಟಗಾರರ ದಾಖಲೆ ಸರಿಗಟ್ಟಿರುವುದು ನನಗೆ
ಸಿಕ್ಕ ಗೌರವವಾಗಿದೆ.
- ನೊವಾಕ್ ಜೊಕೊವಿಕ್
ಸರ್ಬಿಯಾದ ಟೆನಿಸ್ ತಾರೆ
ನೊವಾಕ್, ಧನ್ಯವಾದಗಳು. ಆರುಬಾರಿ ಆಸ್ಟ್ರೇಲಿಯಾ
ಓಪನ್ ಪ್ರಶಸ್ತಿ ಗೆದ್ದಿರುವುದು ಅಮೋಘ ಸಾಧನೆ. ಕಳೆದ ವರ್ಷದ ಸಾಧನೆ
ಹಾಗೂ ಈ ಬಾರಿ ಪ್ರಶಸ್ತಿ ಗೆದ್ದರುವುದು ನಿಮ್ಮಲ್ಲಿನ ಅದ್ಭುತ
ಸ್ಥಿರತೆಯನ್ನು ಸಾರಿ ಹೇಳುತ್ತದೆ
- ಆಂಡಿ ಮರ್ರೆ ಬ್ರಿಟನ್ನ ಟೆನಿಸ್ ತಾರೆ
ಫೈನಲ್ ಪಂದ್ಯದ ಸೆಟ್ಗಳ ವಿವರ 6-1, 7-5, 7-6(7/3)
ನೊವಾಕ್ ಗ್ರ್ಯಾನ್ ಸ್ಲ್ಯಾಮ್ ಸಾಧನೆ
ಟೂರ್ನಿಪ್ರಶಸ್ತಿ ಗೆದ್ದ ವರ್ಷ
ಆಸ್ಟ್ರೇಲಿಯಾ ಓಪನ್2008, 2011, 2012, 2013, 2015,
2016
ವಿಂಬಲ್ಡನ್2011, 2014, 2015
ಅಮೆರಿಕ ಓಪನ್2011, 2015 ----
ಆಸ್ಟ್ರೇಲಿಯಾ ಓಪನ್ ಬಳಿಕ ಎಟಿಪಿ ರ್ಯಾಂಕಿಂಗ್(ಟಾಪ್ 5)
ರಾಂಕಿಂಗ್ಆಟಗಾರರಾಷ್ಟ್ರ ಅಂಕಗಳು
1.ನೊವಾಕ್
ಜೊಕೊವಿಕ್ಸರ್ಬಿಯಾ16,790
2.ಆಂಡಿ ಮರ್ರೆಬ್ರಿಟನ್8,945
3.ರೋಜರ್ ಫೆಡರರ್ಸ್ವಿಜರ್ಲೆಂಡ್8,165
4.ಸ್ಟ್ಯಾನ್ ವಾವ್ರಿಂಕಾಸ್ವಿಜರ್ಲೆಂಡ್6,865
5.ರಾಫೆಲ್ ನಡಾಲ್ಸ್ಪೇನ್5,230

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು