ಮ್ಯಾನ್ಮಾರ್ನಲ್ಲಿ ಮೊದಲ ಪ್ರಜಾಸತ್ತೆ ಸರಕಾರ:*
-ಅರ್ಧ ಶತಮಾನದ ಸೇನಾಡಳಿತ ವಿರೋಧಿಸಿ ಸೂಚಿ ನಡೆಸಿದ ದಶಕಗಳ ಕಾಲದ
ಹೋರಾಟಕ್ಕೆ ಸಂದ ಫಲ-
ನೇಪಿತಾ(ಮ್ಯಾನ್ಮಾರ್): ಮ್ಯಾನ್ಮಾರ್ನಲ್ಲಿ ಅರ್ಧ ಶತಮಾನದ
ಸೇನಾಡಳಿತದ ನಂತರ ಇದೇ ಮೊದಲ ಬಾರಿಗೆ
ಔಂಗ್ ಸಾನ್ ಸೂಚಿ ನೇತೃತ್ವದ ರಾಷ್ಟ್ರೀಯ
ಪ್ರಜಾಸತ್ತಾತ್ಮಕ ಸಂಘಟನೆ 'ಎನ್ಎಲ್ಡಿ' ಪಕ್ಷದ
ಹೊಸ ಸರಕಾರ ತನ್ನ ಕಾರ್ಯ ಕಲಾಪಗಳನ್ನು
ಆರಂಭಿಸಿದೆ.
ನವೆಂಬರ್ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ
ಪ್ರಚಂಡ ಬಹುಮತ ಗಳಿಸಿದ ಎನ್ಎಲ್ಡಿ ಮ್ಯಾನ್ಮಾರ್ನಲ್ಲಿ
ಇದೇ ಮೊದಲ ಬಾರಿಗೆ ಪ್ರಜಾಸತ್ತಾತ್ಮಕವಾಗಿ
ಆಯ್ಕೆಯಾದ ಸರಕಾರವಾಗಿ
ಹೊರಹೊಮ್ಮಿದ್ದು, ನೂತನ ಚುನಾಯಿತ
ಸದಸ್ಯರು ಸೋಮವಾರ ಸಂಸತ್ತಿನ ಕಲಾಪಗಳಲ್ಲಿ
ಪಾಲ್ಗೊಂಡರು.
ಅರ್ಧ ಶತಮಾನದ ಕಾಲ ನಿರಂತರ ಸೇನಾಡಳಿತದ ದಬ್ಬಾಳಿಕೆಗೆ
ಒಳಗಾಗಿದ್ದ ಮ್ಯಾನ್ಮಾರ್ ಸಂಸತ್ತಿನ ಪಾಲಿಗೆ ಸೋಮವಾರ
ಐತಿಹಾಸಿಕ ದಿನ. ಔಂಗ್ ಸಾನ್ ಸೂಚಿ ಅವರು ಮ್ಯಾನ್ಮಾರ್ನಲ್ಲಿ
ಪ್ರಜಾಸತ್ತೆ ಮರಳಿ ತರಲು ಮಾಡಿದ ತ್ಯಾಗ ಮತ್ತು ಕಠಿಣ ಹೋರಾಟಗಳ
ಫಲವಾಗಿ ಜನರಿಂದ ಆಯ್ಕೆಯಾದ ಪ್ರಜಾಸತ್ತಾತ್ಮಕ
ಸರಕಾರವೊಂದು ಇದೀಗ ಕಾರ್ಯಭಾರ
ಆರಂಭಿಸಿದೆ.
ಸೂಚಿ ಅವರು ನವೆಂಬರ್ನಲ್ಲಿ ನಡೆದ ಚುನಾವಣೆಯಲ್ಲಿ
ಪ್ರಚಂಡ ಬಹುಮತ ಗಳಿಸಿದ್ದರೂ, ಅವರ ಎನ್ಎಲ್ಡಿ ಪಕ್ಷ ಸೇನೆ
ಜತೆ ಅಧಿಕಾರ ಹಂಚಿಕೆ ಮಾಡಿಕೊಳ್ಳಬೇಕಾಗುತ್ತದೆ.
ಏಕೆಂದರೆ, ಮ್ಯಾನ್ಮಾರ್ ಸಂವಿಧಾನವು ಸೇನೆಗೆ ಶೇ 25ರಷ್ಟು
ಸ್ಥಾನಗಳನ್ನು ಸಂಸತ್ತಿನಲ್ಲಿ ಮೀಸಲಿರಿಸಲು ಅವಕಾಶ
ಕಲ್ಪಿಸಿದೆ.
ಈ ನಿಟ್ಟಿನಲ್ಲಿ ಸೂಚಿ ಅವರು ಸೇನೆಯ ಉನ್ನಾಧಿಕಾರಿಗಳ ಜತೆ
ಉತ್ತಮ ಸಂಪರ್ಕ ಸಾಧಿಸುವ ಪ್ರಯತ್ನ ನಡೆಸಿದ್ದಾರೆ.
ಹೊಸ ಸರಕಾರಕ್ಕೆ ಸಂಪೂರ್ಣ ಸಹಕಾರ
ನೀಡುವಂತೆ ಕೋರಿದ್ದಾರೆ. ಹೊಸ ಸರಕಾರದ
ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಮ್ಯಾನ್ಮಾರ್
ಸೇನೆ ಸೂಚಿ ಅವರಿಗೆ ಭರವಸೆ ನೀಡಿದೆ.
Comments
Post a Comment