ವಿಶ್ವದ ಅತಿ ಎತ್ತರದ ಗಡಿಯಾರ ಗೋಪುರ: ಇನ್ಫಿ ಸಜ್ಜು


ವಿಕ ಸುದ್ದಿಲೋಕ | Feb 3, 2016, 04.00 AM IST
Patni was where NR Narayana Murthy and most of
the other founders of Infosys met.
A A A
ಮೈಸೂರಿನ ಇನ್ಫೋಸಿಸ್ನ ಗ್ಲೋಬಲ್ ಎಜ್ಯುಕೇಶನ್ ಸೆಂಟರ್ನಲ್ಲಿ
135 ಅಡಿ ಎತ್ತರದ ಕ್ಲಾಕ್ ಟವರ್ ಅಂದಾಜು 60 ಕೋಟಿ ರೂ.
ವೆಚ್ಚ
ಬೆಂಗಳೂರು: ಸಾಂಸ್ಕೃತಿ ರಾಜಧಾನಿ ಮೈಸೂರಿನಲ್ಲಿ
ದೊಡ್ಡ ಗಡಿಯಾರ, ಚಿಕ್ಕ ಗಡಿಯಾರ ಎಂಬ
ಐತಿಹಾಸಿಕ ಅವಳಿ ಗೋಪುರಗಳು ತನ್ನ ಅಂದ
ಚೆಂದಗಳಿಂದ ಪ್ರಸಿದ್ಧವಾಗಿದೆ. ಮೈಸೂರು ವಿಶ್ವ
ವಿದ್ಯಾಲಯದ ಶತಮಾನೋತ್ಸವ ಸಂಭ್ರಮದ ಪ್ರಯುಕ್ತ
ಮಾನಸಗಂಗೋತ್ರಿಯಲ್ಲೂ ಕಳೆದ ವರ್ಷ
ಮತ್ತೊಂದು ಗಡಿಯಾರ ಗೋಪುರ ನಿರ್ಮಾಣವಾಗಿತ್ತು.
ಈಗ ಐಸಿ ದಿಗ್ಗಜ ಇನ್ಫೋಸಿಸ್ ಮೈಸೂರಿನಲ್ಲಿರುವ ತನ್ನ
ಕ್ಯಾಂಪಸ್ನಲ್ಲಿ ವಿಶ್ವದಲ್ಲೇ ಅತಿ ಎತ್ತರದ ಗಡಿಯಾರ
ಗೋಪುರವನ್ನು ನಿರ್ಮಿಸಲು ಸಜ್ಜಾಗಿದೆ.
ಸುಮಾರು 345 ಎಕರೆ ಪ್ರದೇಶಗಳಲ್ಲಿ ಹರಡಿರುವ ಇನ್ಫೋಸಿಸ್ನ ಗ್ಲೋಬಲ್
ಎಜ್ಯುಕೇಶನ್ ಸೆಂಟರ್ನಲ್ಲಿ 135 ಮೀಟರ್
ಎತ್ತರದ ಗಡಿಯಾರ ಗೋಪುರವನ್ನು ನಿರ್ಮಿಸಲು ಇನ್ಫೋಸಿಸ್
ಉದ್ದೇಶಿಸಿದೆ. ಇದು ಲಂಡನ್ನಲ್ಲಿರುವ ಬಿಗ್ ಬೆನ್ (96
ಮೀಟರ್), ಕ್ಯಾಲಿಫೋರ್ನಿಯಾದ ಹೋವರ್ ಟವರ್ಗಿಂತಲೂ
(87 ಮೀಟರ್) ಎತ್ತರಕ್ಕೇರಲಿದೆ. ಗೋಥಿಕ್ ಶೈಲಿಯಲ್ಲಿ
ನಿರ್ಮಾಣವಾಗಲಿರುವ ಈ ಗೋಪುರ ಕಟ್ಟಲು ಸುಮಾರು 60 ಕೋಟಿ ರೂ.
ವೆಚ್ಚವಾಗಲಿದೆ. ಇದರಲ್ಲಿ 19 ಅಂತಸ್ತುಗಳು ಇರಲಿದ್ದು, 20
ತಿಂಗಳಿನಲ್ಲಿ ಕ್ಲಾಕ್ ಟವರ್ ತಲೆ ಎತ್ತಿಕೊಳ್ಳುವ
ನಿರೀಕ್ಷೆ ಇದೆ. ಇನ್ಫೋಸಿಸ್ ಸಹ ಸಂಸ್ಥಾಪಕ ಎನ್ಆರ್
ನಾರಾಯಣಮೂರ್ತಿ ಈ ವಿಷಯವನ್ನು ದೃಢಪಡಿಸಿದ್ದಾರೆ.
''ಗಡಿಯಾರ ಗೋಪುರ ಇಲ್ಲದೆ ಮೈಸೂರಿನ ಇನ್ಫೋಸಿಸ್ ತರಬೇತಿ ಕೇಂದ್ರ
ಪರಿಪೂರ್ಣವಾಗುವುದಿಲ್ಲ. ಕ್ಲಾಕ್ ಟವರ್ ಇರುವುದರಿಂದ
ಕ್ಯಾಂಪಸ್ಗೆ ಅಕಾಡೆಮಿಕ್ ಭವ್ಯತೆಯ ಮೆರುಗು
ಸಿಕ್ಕಂತಾಗುತ್ತದೆ. ವಿಶಾಲ್ ಸಿಕ್ಕಾ ಕೂಡ
ಇದೊಂದು ಉತ್ತಮ ಐಡಿಯಾ''
ಎಂದಿರುವುದಾಗಿ ಮೂರ್ತಿ ಹೇಳಿದರು.
ಇನ್ಫೋಸಿಸ್ನ ಮೈಸೂರಿನ ಕ್ಯಾಂಪಸ್ ವಿನ್ಯಾಸವನ್ನು ರೂಪಿಸಿದ್ದ
ಮುಂಬಯಿ ಮೂಲದ ಹಫೀಜ್ ಕಾಂಟ್ರಾಕ್ಟರ್
ಅವರೇ ಈ ಗೋಪುರದ ವಿನ್ಯಾಸವನ್ನೂ ರಚಿಸಲಿದ್ದಾರೆ. ಬೆಂಗಳೂರು
ಮೂಲದ ಕೆಇಎಫ್ ಇನ್ಫ್ರಾ ನಿರ್ಮಿಸಲಿದೆ.
ಈ ಯೋಜನೆಗೆ ಸಂಬಂಧಿಸಿದ ಬಹುತೇಕ ಅನುಮೋದನೆಗಳನ್ನು
ಪಡೆಯಲಾಗಿದೆ ಎಂದು ಕಂಪನಿಯ ಕಾರ್ಯಕಾರಿ
ಉಪಾಧ್ಯಕ್ಷ ರಾಮದಾಸ್ ಕಾಮತ್ ತಿಳಿಸಿದ್ದಾರೆ. ''
ಸಾಂಪ್ರದಾಯಿಕತೆ ಮತ್ತು ಆಧುನಿಕ ತಂತ್ರಜ್ಞಾನವನ್ನು
ಗಡಿಯಾರ ಗೋಪುರದಲ್ಲಿ ಸಂಯೋಜಿಸಲಗುವುದು. ಗೋಪುರದ ನಾಲ್ಕು
ಬದಿಗಳಲ್ಲಿ ದೊಡದ್ಡ ಡಿಜಿಟಲ್
ಸ್ಕ್ರೀನ್ಗಳನ್ನು ಅಳವಡಿಸಲಾಗುವುದು. ಪ್ರಮುಖ
ವಿದ್ಯಮಾನಗಳ ಸಂದೇಶಗಳನ್ನು ಈ ಸ್ಕ್ರೀನ್ನಲ್ಲಿ
ಬಿತ್ತರಿಸಲಾಗುವುದು ಎಂದು ಕಂಪನಿಯ
ಸ್ಥಳೀಯ ಆರ್ಕಿಟೆಕ್ಟ್ ಕೆ.ಪಿ ನಾಗರಾಜ್ ತಿಳಿಸಿದ್ದಾರೆ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು