ಇ– ಮೇಲ್ ಸೃಷ್ಟಿಕರ್ತ ರೇ ಟಾಮ್ಲಿನ್ಸನ್ ಇನ್ನಿಲ್
ವಾಷಿಂಗ್ಟನ್ ( ಎಎಫ್ಪಿ) : ಇ – ಮೇಲ್ ಆಧುನಿಕ
ಸೃಷ್ಟಿಕರ್ತ ಎಂಬ ಕೀರ್ತಿಗೆ ಪಾತ್ರರಾಗಿದ್ದ
ರೇ ಟಾಮ್ಲಿನ್ಸನ್ ಅವರು
ವಿಧಿವಶರಾಗಿದ್ದಾರೆ. ಅವರಿಗೆ 74 ವರ್ಷ
ವಯಸ್ಸಾಗಿತ್ತು .
ಯೂಸರ್ನೆಟ್ ಜತೆಗೆ @ ಸಂಕೇತವನ್ನು ಬಳಸಿದ
ಮೊದಲಿಗ ಎಂಬ ಕೀರ್ತಿ ಕೂಡ ರೇ
ಅವರದ್ದು.
ಟಾಮ್ಲಿನ್ಸನ್ ಅವರು ಇ – ಮೇಲ್ಗೂ
ಮೊದಲು 1971 ರಲ್ಲಿ ಸೀಮಿತ ನೆಟ್ವರ್ಕ್
ಅಡಿಯಲ್ಲಿ ಬೇರೆ – ಬೇರೆ ಯಂತ್ರಗಳ
ಮೂಲಕ ಎಲೆಕ್ಟ್ರಾನಿಕ್ ಸಂದೇಶ
ಕಳುಹಿಸುವ ವ್ಯವಸ್ಥೆಯನ್ನು ಕಂಡು
ಹಿಡಿದಿದ್ದರು . ಅದಕ್ಕೂ ಮೊದಲು
ಒಂದೇ ಗಣಕಯಂತ್ರ ಬಳಸಿ ಸಂದೇಶ
ಕಳುಹಿಸುವ ಸೌಲಭ್ಯ ಮಾತ್ರವೇ
ಜಾರಿಯಲ್ಲಿತ್ತು .
' ನೆಟ್ವರ್ಕ್ ಕಂಪ್ಯೂಟರ್ಗಳ ಕಾಲದ ಆರಂಭಿಕ
ದಿನಗಳಲ್ಲಿ ಮೇಲ್ ಪರಿಚಯಿಸಿದ ರೇ ಅವರು
ತಂತ್ರಜ್ಞಾನದ ನಿಜವಾದ ಆದಿಶೋಧಕ. ಅವರ
ಕೊಡುಗೆ ವಿಶ್ವದ ಸಂವಹನವನ್ನು ಬದಲಿಸಿದೆ '
ಎಂದು ರೇಥೆಯಾನ್ ಕಂಪೆನಿ ಪ್ರಕಟಣೆಯಲ್ಲಿ
ತಿಳಿಸಿದೆ .
ಟಾಮ್ಲಿನ್ಸನ್ ಅವರು ಶನಿವಾರ
ವಿಧಿವಶರಾಗಿದ್ದಾರೆ ಎಂದು ರೇಥೆಯಾನ್
ಕಂಪೆನಿ ವಕ್ತಾರ ತಿಳಿಸಿದ್ದಾರೆ . ಆದರೆ, ಅವರ
ಸಾವಿಗೆ ಕಾರಣ ಮಾತ್ರ ಇನ್ನಷ್ಟೇ
ತಿಳಿಯಬೇಕಿದೆ .
ರೇ ಅವರ ನಿಧನಕ್ಕೆ ಆನ್ಲೈನ್ ಜಗತ್ತು ಕಂಬನಿ
ಮಿಡಿದಿದೆ .
' ಇಮೇಲ್ ಸಂಶೋಧನೆ ಮಾಡಿದ್ದಕ್ಕಾಗಿ
ಹಾಗೂ @ ಸಂಕೇತವನ್ನು
ಯೂಸರ್ನೇಮ್ ಬೆಸದಿದ್ದಕ್ಕೆ ಧನ್ಯವಾದಗಳು
ರೇ ಟಾಮ್ಲಿನ್ಸನ್' ಎಂದು ಇಂಟರ್ನೆಟ್
ದಿಗ್ಗಜ ಗೋಗಲ್ನ ಜಿಮೇಲ್ ತಂಡ ಟ್ವೀಟ್
ಮಾಡಿದೆ.
ಇಂಟರನೆಟ್ ಅನ್ವೇಷಕರ
ಪಿತಾಮಹರಲ್ಲೊಬ್ಬ ಎಂದು
ಗುರುತಿಸಲಾಗುವ ವಿಂಟ್ ಸೆರ್ಪ್ ಅವರು ರೇ
ಅವರ ನಿಧನಕ್ಕೆ ತೀವ್ರ ಸಂತಾಪ
ವ್ಯಕ್ತಪಡಿಸಿದ್ದಾರೆ . ' ಅತಿ ದುಃಖದ ಸುದ್ದಿ '
ಎಂದು ಪ್ರತಿಕ್ರಿಯಿಸಿದ್ದಾರೆ .
ಯಾರೀತ ರೇ ಟ್ಲಾಮಿನ್ಸನ್?: ಇವರ
ಪೂರ್ಣ ಹೆಸರು ರೇಮಂಡ್ ಸಾಮ್ಯುಲ್ಸ್
ಟಾಮ್ಲಿನ್ಸನ್. 1941 ರಲ್ಲಿ ಅಮೆರಿಕದ
ನ್ಯೂಯಾರ್ಕ್ನ ಅಮಸ್ಟರ್ಡಮ್ನಲ್ಲಿ ಜನನ.
ರೆನ್ಸೆಲರ್ ಪಾಲಿಟೆಕ್ನಿಕ್ ಇನ್ಸ್ಟಿಟ್ಯೂಟ್ನಲ್ಲಿ
ಕಾಲೇಜು ಶಿಕ್ಷಣ . ಬಳಿಕ ಐಬಿಎಂನಲ್ಲಿ
ಇಂಟರ್ನ್ಶಿಪ್. 1963 ರಲ್ಲಿ ಎಲೆಕ್ಟ್ರಿಕ್
ಎಂಜಿನಿಯರಿಂಗ್ನಲ್ಲಿ ಪದವಿ. ಎಂಐಟಿಯಲ್ಲಿ
ಉನ್ನತ ಅಧ್ಯಯನ.
Comments
Post a Comment