SUCCESS STORY: From remote village (kalatippi) to KIMS HUBLI
Learnt in a Govt LPS Kalatippi (1-5), and Govt HPS Kalatippi(6-7)
and led to KIMS on HIS effort..
ಹಾಲು ಮಾರಿ ಮಗನ್ನ ಡಾಕ್ಟ್ರು ಮಾಡೇನ್ರಿ '
ಹುಬ್ಬಳ್ಳಿ: ' ಮುಂಜಾನಿ, ಸಂಜೆ ತಲಾ ನಾಲ್ಕು
ಲೀಟರ್ ಹಾಲು ಮಾರಿ ಮಗನ್ನ ಡಾಕ್ಟರ್ ಓದಿಸೇನ್ರಿ .
ಅವನ ಸಾಧನೆ ನೋಡಾಕ ಬಂದೇನ್ರಿ ' ಎಂದು ಬಾಗಲಕೋಟೆ
ಜಿಲ್ಲೆ ಜಮಖಂಡಿ ತಾಲ್ಲೂ ಕಿನ ತೇರದಾಳ ಬಳಿಯ
ಕಾಲತಿಪ್ಪಿಯ ಯಮನಪ್ಪ ಲಕ್ಷ್ಮಣ ಕಂಬಾಗಿ
' ಪ್ರಜಾವಾಣಿ' ಎದುರು ಸಂಭ್ರಮ
ಹಂಚಿಕೊಂಡರು .
ಯಮನಪ್ಪ ಅವರ ಪುತ್ರ ಡಾ . ಕಾಶಿನಾಥ
ವೈದ್ಯಕೀಯ ಪದವಿ ಮುಗಿಸಿದ್ದು ,
ಮನೆಯವರಲ್ಲಿ ಹರ್ಷಕ್ಕೆ ಕಾರಣವಾಗಿತ್ತು . ಪತ್ನಿ ಅಕ್ಕವ್ವ
ಅವರೊಂದಿಗೆ ಮುಂಜಾನೆಯೇ ಕಿಮ್ಸ್
ಆವರಣಕ್ಕೆ ಬಂದಿದ್ದರು .
ಯಮನಪ್ಪ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು,
ಇರುವ ಒಂದು ಎಕರೆ ಜಮೀನಿನಲ್ಲಿ ಹಿರಿಯ
ಮಗನೊಂದಿಗೆ ಅವರು ಕೃಷಿಯಲ್ಲಿ
ತೊಡಗಿಕೊಂಡಿ ದ್ದಾರೆ.
ಕಿರಿಯ ಮಗ ಕಾಶೀನಾಥ ಅವರ
ವೈದ್ಯಕೀಯ ಅಭ್ಯಾಸದ ಖರ್ಚು ನಿಭಾಯಿಸಲು
ಹೈನುಗಾರಿಕೆಯಲ್ಲಿ ತೊಡಗಿದ್ದಾಗಿ ಯಮನಪ್ಪ
ಹೇಳಿದರು.
ಆರು ಚಿನ್ನದ ಪದಕಗಳೊಂದಿಗೆ
ಇನ್ಫೊಸಿಸ್ನ ಡಾ. ಸುಧಾಮೂರ್ತಿ ಅವರು ತಮ್ಮ
ತಾಯಿಯ ನೆನಪಿಗೆ ನೀಡುವ ₹ 10 ಸಾವಿರ ನಗದು
ಪುರಸ್ಕಾರವನ್ನು ಪಡೆದ ಡಾ. ಚೇತನ್ ಘಂಟಪ್ಪನವರ್
ಅವರಿಗೆ ಪೋಷಕರು ಹಾಗೂ ಸ್ನೇಹಿತರು ಅಭಿನಂದನೆ
ಸಲ್ಲಿಸಿದರು .
ಹುಬ್ಬಳ್ಳಿಯ ಸಾಯಿನಗರದ ನಿವಾಸಿಯಾದ ಚೇತನ್ ಅವರ
ತಂದೆ ಕಾಂತೇಶ್ ಎಲ್ಐಸಿಯ ನಿವೃತ್ತ ಉದ್ಯೋಗಿ.
ಸ್ನಾತಕೋತ್ತರ ಪದವಿ ಪಡೆದು ಗ್ರಾಮೀಣ ಭಾಗದಲ್ಲಿ
ಸೇವೆ ಸಲ್ಲಿಸುವ ಕನಸು ಇದ್ದು , ಅದನ್ನು ಈಡೇ
ರಿಸಿಕೊಳ್ಳಲು ಪಿಜಿ ಪ್ರವೇಶಕ್ಕೆ ಸಿದ್ಧತೆ
ನಡೆಸುವುದಾಗಿ ಚೇತನ್ ತಿಳಿಸಿದರು .
ಬೆಂಗಳೂರಿನ ಕೆಂಗೇರಿ ನಿವಾಸಿ
ಚಂದ್ರಶೇಖರಯ್ಯ ಅವರ ಪುತ್ರ ಡಾ . ಶ್ರೇಯಸ್
ಕಮ್ಯುನಿಟಿ ಮೆಡಿಸನ್ ಎರಡು ಹಾಗೂ
ಮೈಕ್ರೊಬಯಾಲಜಿ ವಿಷಯದಲ್ಲಿ ಒಂದು
ಚಿನ್ನದ ಪದಕ ಪಡೆ ದಿದ್ದರೆ , ಜಮಖಂಡಿಯ ಡಾ. ಸಾಗರ್
ತುಂಗಳ ಮೂರು ಚಿನ್ನದ ಪದಕ ಪಡೆದರು
Comments
Post a Comment