ಗೂಗಲ್ ಸರ್ಚ್ನಲ್ಲಿ ಪ್ರಾಣಿಗಳ ದನಿಯನ್ನೂ ಕೇಳಬಹುದು!:-
ನವದೆಹಲಿ: ಗೂಗಲ್ ಸರ್ಚ್ನಲ್ಲಿ ಪ್ರಾಣಿಗಳ ಚಿತ್ರಗಳನ್ನು
ಹುಡುಕಿದರೆ ಕ್ಷಣ ಮಾತ್ರಕ್ಕೆ ಅದರ ಬಗ್ಗೆ ಮಾಹಿತಿ
ಸಿಗುತ್ತದೆ. ಆದರೆ ಇದೀಗ ಪ್ರಾಣಿಗಳ ದನಿಯನ್ನೂ
ಕೇಳುವಂಥಾ ಸೌಲಭ್ಯವನ್ನು ಗೂಗಲ್ ಒದಗಿಸಿದೆ.
ಪ್ರಾಣಿಗಳ ದನಿ ಹೇಗಿರುತ್ತದೆ ಎಂಬುದನ್ನು
ಮಕ್ಕಳಿಗೆ ಹೇಳಿಕೊಡುವುದಕ್ಕಾಗಿ ಗೂಗಲ್ ಈ
ಸೌಲಭ್ಯವನ್ನು ಒದಗಿಸಿದೆ.
ಉದಾಹರಣೆಗೆ ಬಳಕೆದಾರರು ಗೂಗಲ್ ನಲ್ಲಿ ಈ
ಪ್ರಾಣಿಯ ದನಿ ಯಾವುದು ಎಂಬ ಪ್ರಶ್ನೆ
ಕೇಳಿದರೆ, ಸರ್ಚ್ ಇಂಜಿನ್ ಆ ಪ್ರಾಣಿಯ
ಇಲ್ಯುಸ್ಟ್ರೇಷನ್, ಪ್ರಾಣಿಯ ಹೆಸರು ಜತೆ ಆ
ಪ್ರಾಣಿಯ ದನಿಯ ಸ್ಯಾಂಪಲ್ ನ್ನೂ
ತೋರಿಸುತ್ತದೆ.
ವರದಿಗಳ ಪ್ರಕಾರ ಈಗಾಗಲೇ ಗೂಗಲ್ ಸರ್ಚ್
ಇಂಜಿನ್ನಲ್ಲಿ ಜೀಬ್ರಾ, ಕೋತಿ, ಬೆಕ್ಕು, ಸಿಂಹ,
ಹಂದಿ, ಆನೆ, ಕುದುರೆ ಮೊದಲಾದ 19 ಪ್ರಾಣಿಗಳ
ದನಿ ಲಭ್ಯವಾಗುತ್ತಿದೆ.
Comments
Post a Comment