ನೀಟ್-1 ಬರೆದವರಿಗೆ ನೀಟ್-2ಗೆ ಪ್ರವೇಶವಿಲ್ಲ
ನೀಟ್-1 ಬರೆದವರಿಗೆ ನೀಟ್-2ಗೆ ಪ್ರವೇಶವಿಲ್ಲ
ವಿಜಯವಾಣಿ ನ್ಯೂಸ್ · MAY 7, 2016
ನವದೆಹಲಿ: ಮೇ 1ರಂದು ನಡೆದ ನೀಟ್-1 ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಜುಲೈ 24ರಂದು ನಡೆಯಲಿರುವ ನೀಟ್-2ನಲ್ಲಿ ಪುನಃ ಪರೀಕ್ಷೆ ಬರೆಯುವಂತಿಲ್ಲ. ಆದರೆ ನೀಟ್-1ಗೆ ಹಾಜರಾಗದ ವಿದ್ಯಾರ್ಥಿಗಳು ನೀಟ್-2 ಪರೀಕ್ಷೆ ಬರೆಯಬಹುದು ಎಂದು ಸುಪ್ರೀಂಕೋರ್ಟ್ ಶುಕ್ರವಾರ ಸ್ಪಷ್ಟಪಡಿಸಿದೆ.
(PSGadyal teacher Vijaypur)
ಇದೇ ವೇಳೆ ದೇಶದ ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ನೀಟ್ ಪ್ರವೇಶ ಪರೀಕ್ಷಾ ಪದ್ಧತಿಯಿಂದ ಈ ವರ್ಷ ವಿನಾಯಿತಿ ನೀಡಬೇಕೆ ಬೇಡವೇ ಎಂಬ ಕುರಿತ ತೀರ್ಪು ಸೋಮವಾರ ನಿರ್ಧಾರವಾಗುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರ ಈ ವಿಚಾರದ ಬಗ್ಗೆ ವಾರಾಂತ್ಯದಲ್ಲಿ ರಾಜ್ಯ ಸರ್ಕಾರಗಳ ಪ್ರತಿನಿಧಿಗಳೊಂದಿಗೆ ಉನ್ನತಮಟ್ಟದ ಸಭೆ ನಡೆಸಲಿದ್ದು, ಸೋಮವಾರ ತನ್ನ ಅಭಿಪ್ರಾಯವನ್ನು ಸುಪ್ರೀಂಕೋರ್ಟ್ಗೆ ಸಲ್ಲಿಸಲಿದೆ. ಇದನ್ನು ಪರಿಶೀಲಿಸಿ ನಾವು ಅಂತಿಮ ಆದೇಶ ಪ್ರಕಟಿಸಲಿದ್ದೇವೆ ಎಂದು ನ್ಯಾ. ಅನಿಲ್ ದವೆ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.
ವಿಚಾರಣೆಯ ಒಂದು ಹಂತದಲ್ಲಿ ಸರ್ಕಾರಿ ಕಾಲೇಜುಗಳಿಗೆ ಈ ವರ್ಷ ನೀಟ್ ಪರೀಕ್ಷೆಯಿಂದ ವಿನಾಯಿತಿ ನೀಡುವ ಬಗ್ಗೆ ಕೋರ್ಟ್ ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿತ್ತಾದರೂ, ಯಾವುದೇ ಆದೇಶ ನೀಡಲು ಮುಂದಾಗಲಿಲ್ಲ.
ರಾಜ್ಯ ಸರ್ಕಾರಗಳೊಂದಿಗೆ ಸಭೆ ನಡೆಸಲು ನಮಗೆ 2 ದಿನಗಳ ಕಾಲಾವಕಾಶ ಬೇಕು. ಅಲ್ಲಿಯವರೆಗೆ ನ್ಯಾಯಾಲಯ ಯಾವುದೇ ತೀರ್ವನಕ್ಕೆ ಬರಬಾರದು ಎಂದು ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ವಿನಂತಿಗೆ ಸಮ್ಮತಿ ಸೂಚಿಸಿದ ನ್ಯಾಯಪೀಠ, ಸೋಮವಾರ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಲಿದ್ದೇವೆ ಎಂದು ತಿಳಿಸಿತು. ಮೇ 1ರಂದು ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಜು.24ರಂದು ನಡೆಯಲಿ ರುವ 2ನೇ ಹಂತದ ನೀಟ್ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನೀಡಬೇಕೆ ಬೇಡವೇ ಎಂಬ ಬಗ್ಗೆಯೂ ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಅಭಿಪ್ರಾಯ ಸಲ್ಲಿಸುವುದಾಗಿ ಹೇಳಿತು.
ಇದೇ ವೇಳೆ ಖಾಸಗಿ ಶಿಕ್ಷಣ ಸಂಸ್ಥೆಗಳು, ಡೀಮ್್ಡ ವಿಶ್ವವಿದ್ಯಾಲಯಗಳು ಮತ್ತು ಅಸೋಸಿಯೇಷನ್ಗಳು ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪ್ರವೇಶಕ್ಕೆ ಪ್ರತ್ಯೇಕ ಸಿಇಟಿ ಪರೀಕ್ಷೆ ನಡೆಸುವಂತಿಲ್ಲ. ನೀಟ್ ಪರೀಕ್ಷಾ ಪದ್ಧತಿಯನ್ನು ನೀವು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನ್ಯಾಯಪೀಠ ಪುನರುಚ್ಚರಿಸಿತು. ಆದರೆ ನ್ಯಾಯಾಲಯದ ಕ್ರಮಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳ ವಕೀಲರು ಅತೀವ ಅಸಮಾಧಾನ ವ್ಯಕ್ತಪಡಿಸಿದರು.
ಖಾಸಗಿ ವೈದ್ಯಕೀಯ ಕಾಲೇಜುಗಳು ನೀಟ್ ಪರೀಕ್ಷಾ ಪದ್ಧತಿ ಅಳವಡಿಕೊಳ್ಳಬೇಕು ಎಂದು ಒತ್ತಡ ಹೇರಿದರೆ ಸೀಟು ಹಂಚಿಕೆಯಲ್ಲಿ ಅನುಸರಿಸಲಾಗುವ ಶೇ.50 ಮೀಸಲಾತಿಯನ್ನು ಹಿಂತೆಗೆದುಕೊಳ್ಳಬೇಕಾಗುತ್ತದೆ. ಆಗ ತೊಂದರೆಯಾಗುವುದು ಬಡ ವಿದ್ಯಾರ್ಥಿಗಳಿಗೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಪರ ವಕೀಲ ರಾಜೀವ್ ಧವನ್ ನ್ಯಾಯಪೀಠದ ಮುಂದೆ ಆತಂಕ ವ್ಯಕ್ತಪಡಿಸಿದರು.
**ವಿನಾಯಿತಿ ಪರ ನಿಂತ ಎಂಸಿಐ
ಈ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ನೀಟ್ನಿಂದ ವಿನಾಯಿತಿ ನೀಡಿ, ಸಿಇಟಿ ಪರೀಕ್ಷೆಗಳನ್ನೇ ನಡೆಸಲು ಅವಕಾಶ ನೀಡಬೇಕು. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಯಾವುದೇ ಕಾರಣಕ್ಕೂ ಈ ವಿನಾಯಿತಿ ಅನ್ವಯವಾಗಕೂಡದು ಎಂದು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ವಕೀಲ ವಿಕಾಸ್ ಸಿಂಗ್ ವಾದಿಸಿದರು. ಎಂಸಿಐ ವಾದಕ್ಕೆ ಪೂರಕವಾಗಿ ಅಭಿಪ್ರಾಯ ಹೊರಹಾಕಿದ ನ್ಯಾಯಪೀಠ, ಹೆಚ್ಚು ಕಡಿಮೆ ನಮ್ಮ ಅಭಿಪ್ರಾಯವೂ ಇದೇ ಆಗಿದೆ ಎಂದು ತಿಳಿಸಿ, ವಿಚಾರಣೆಯನ್ನು ಮೇ 10ಕ್ಕೆ ಮೂಂದೂಡಿತು.
**ಕಾಮೆಡ್-ಕೆ ರದ್ದು
ಬೆಂಗಳೂರು: ಸುಪ್ರೀಂಕೋರ್ಟ್ನ 'ನೀಟ್' ಸೂತ್ರಕ್ಕೆ ಕಾಮೆಡ್-ಕೆ ಕೊನೆಗೂ ಮಣಿದಿದೆ. ಸುಪ್ರೀಂಕೋರ್ಟ್ ಮೌಖಿಕ ಸೂಚನೆಯಿಂದಾಗಿ ಎಚ್ಚೆತ್ತುಕೊಂಡ ಕಾಮೆಡ್-ಕೆ ಮೇ 8ರಂದು ವೈದ್ಯಕೀಯ ಮತ್ತು ದಂತವೈದ್ಯಕೀಯ ಹೊರತು ಪಡಿಸಿ ಕೇವಲ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾತ್ರವೇ ಪರೀಕ್ಷೆ ನಡೆಸಲು ತೀರ್ವನಿಸಿದೆ.
ಭಾನುವಾರ ನಡೆಯಲಿ ರುವ ಕಾಮೆಡ್-ಕೆ ಯುಜಿಇಟಿ ಪರೀಕ್ಷೆ ದೇಶದ 729 ಕೇಂದ್ರಗಳಲ್ಲಿ ನಡೆಯಲಿದ್ದು, 1.72 ಲಕ್ಷ ವಿದ್ಯಾರ್ಥಿಗಳು ಹಾಗೂ ರಾಜ್ಯದ 150 ಕೇಂದ್ರಗಳಲ್ಲಿ 32,500ಕ್ಕೂ ಅಧಿಕ ವಿದ್ಯಾರ್ಥಿಗಳು
ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿಕೊಂಡಿದ್ದರು. ಈ ಪೈಕಿ 1.5 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನು ಡೌನ್ಲೋಡ್ ಕೂಡ ಮಾಡಿಕೊಂಡಿದ್ದರು.
ಈ ಮಧ್ಯೆ ಸುಪ್ರೀಂ ಕೋರ್ಟ್ ಮೌಖಿಕ ಆದೇಶ ನೀಡಿದ ಬಳಿಕ ಕಾಮೆಡ್-ಕೆ ಕೊನೆ ಕ್ಷಣದಲ್ಲಿ ತನ್ನ ನಿರ್ಧಾರವನ್ನು ಬದಲಾಯಿಸಿಕೊಂಡು ಕೇವಲ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾತ್ರವೇ ಪರೀಕ್ಷೆ ನಡೆಸಲು ತೀರ್ವನಿಸಿದೆ. ಪರೀಕ್ಷಾ ವೇಳಾಪಟ್ಟಿ ಹಾಗೂ ಪ್ರವೇಶ ಶುಲ್ಕ ಕುರಿತು ಶೀಘ್ರದಲ್ಲೇ ವೆಬ್ಸೈಟ್ನಲ್ಲಿ ಪ್ರಕಟಿಸಲಿದೆ. ಅಲ್ಲದೆ, ವಿದ್ಯಾರ್ಥಿಗಳ ಮೊಬೈಲ್ಗೆ ಸಂದೇಶ ಕಳುಹಿಸುವ ಮೂಲಕ ಪರೀಕ್ಷೆಯ ವೇಳಾಪಟ್ಟಿಯನ್ನು ತಿಳಿಸಲಾಗುವುದು ಎಂದು ಕಾಮೆಡ್-ಕೆ ಕಾರ್ಯನಿರ್ವಹಣಾಧಿಕಾರಿ ಕೆ.ಶ್ರೀಕಾಂತ್ ಸ್ಪಷ್ಟಪಡಿಸಿದ್ದಾರೆ
Comments
Post a Comment