ಯುಪಿಎಸ್ಸಿ ಫಲಿತಾಂಶ : ಕರ್ನಾಟಕದ ಗೌಡಗೆ 105ನೇ ಸ್ಥಾನ!;-
ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್ಸಿ) ಪರೀಕ್ಷೆ 2015ಯ ಅಂತಿಮ ಫಲಿತಾಂಶ ಮಂಗಳವಾರ (ಮೇ 10) ಅಂದರೆ ನಿನ್ನೆ ಸಂಜೆ ಪ್ರಕಟವಾಗಿದೆ. ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಾಗಲು ಬಯಸಿರುವ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಿದೆ. ಟೀನಾ ಡಬಿ(0256747) ಪ್ರಥಮ ಶ್ರೇಯಾಂಕ ಪಡೆದುಕೊಂಡಿದ್ದಾರೆ. ಅತಾರ್ ಉಲ್ ಶಫಿ ಖಾನ್(ರೋಲ್ ನಂಬರ್ 0058239), ಜಸ್ಮೀರ್ ಸಿಂಗ್ ಸಂಧು (0010512), ಆರ್ತಿಕಾ ಶುಕ್ಲಾ(0000123), ಶಶಾಂಕ್ ತ್ರಿಪಾಠಿ(0015876) ಮೊದಲ 5 ಸ್ಥಾನ ಗಳಿಸಿದ್ದಾರೆ. ಕರ್ನಾಟಕದ ಶ್ರೀನಿವಾಸ್ ಗೌಡ ಎ. ಆರ್ (0535527) ಅವರು 105ನೇ ಸ್ಥಾನ ಗಳಿಸಿದ್ದಾರೆ.
ಐಎಎಸ್, ಐಪಿಎಸ್ ಹಾಗೂ ಐಎಫ್ಎಸ್ ಗಾಗಿ ನಡೆಯುವ ಈ ಪರೀಕ್ಷೆಗಳು ಪ್ರಿಮಿಲಿನರಿ, ಅಂತಿಮ ಹಾಗೂ ಸಂದರ್ಶನ ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಸುಮಾರು 15.008 ಅಭ್ಯರ್ಥಿಗಳು ಅಂತಿಮ ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದರು. ಅಂತಿಮ ಪರೀಕ್ಷಾ ಫಲಿತಾಂಶ www.upsc.gov.in ನಲ್ಲಿ ಪಡೆದುಕೊಳ್ಳಬಹುದು.
ಕರ್ನಾಟಕದ ಅಭ್ಯರ್ಥಿಗಳ ಫಲಿತಾಂಶ;
* ಶ್ರೀನಿವಾಸಗೌಡ 105
* ನಿವ್ಯಾ ಶೆಟ್ಟಿ 274
* ಪವನ್ ಕುಮಾರ್ ಗಿರಿಯಪ್ಪ 420
* ಪ್ರಮೋದ್ ನಾಯಕ್ 779
* ಡಿಎಲ್ ನಾಗೇಶ್ 782
* ಆಕಾಶ್ ಎಸ್ 959
* ಭೈರಪ್ಪ 1035
Comments
Post a Comment