ಕಿರಾಣಿ ವ್ಯಾಪಾರಿ ಮಗ ಯುಪಿಎಸ್ಸಿ ಸಾಧಕ ಕಿಶೋರ್
ಬಾಗಲಕೋಟೆ, ಮೇ 12: ಜಮಖಂಡಿ ತಾಲೂಕಿನ ಬನಹಟ್ಟಿ- ರಬಕವಿ ನಗರದ ಕಿರಾಣಿ ವ್ಯಾಪಾರಸ್ಥ ಬದ್ರಿನಾರಾಯಣ ಭಟ್ಟಡ ಹಾಗು ಉಮಾ ದಂಪತಿ ಮಗ ಕಿಶೋರ ಈಗ ಬಾಗಲಕೋಟೆ ಜಿಲ್ಲೆಯ ಹೆಮ್ಮೆಯ ಪುತ್ರನಾಗಿ ಹೆಸರು ಗಳಿಸಿದ್ದಾರೆ. ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ ಸಿ) ವು ಮಂಗಳವಾರ ಪ್ರಕಟಿಸಿದ ಫಲಿತಾಂಶದಲ್ಲಿ ರಾಷ್ಟ್ರಕ್ಕೆ 808ನೇ rank ಪಡೆಯುವದರ ಮೂಲಕ ಸಾಧನೆ ಮಾಡಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ಜತೆ ಮಾತನಾಡಿದ ಕಿಶೋರ, ಕಳೆದ ವರ್ಷವು ಈ ಪರೀಕ್ಷೆಯನ್ನು ಎದುರಿಸಿದ್ದೆ, ಇದು ನನ್ನ ಎರಡನೇಯ ಪ್ರಯತ್ನ ಈ ಭಾರಿ 808 ನೇ ಸ್ಥಾನ ಪಡೆದುಕೊಂಡಿದ್ದೇನೆ. ಫಲಿತಾಂಶವನ್ನು ಕೇಳಿ ತುಂಬಾ ಸಂತೋಷವಾಗಿದೆ. ಇದು ನನಗೆ ತೃಪ್ತಿ ನೀಡಿದೆ ಮುಂದಿನ ಸಲ ಹೆಚ್ಚಿನ ಶ್ರೇಯಾಂಕ ಸ್ಥಾನ ಇನ್ನಷ್ಟು ಹೆಚ್ಚಿಸಿಕೊಳ್ಳಲು ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು. ಪ್ರತಿ ದಿನ 10 ಗಂಟೆಗಳ ಕಾಲ ಓದುತ್ತಿದ್ದೆ, ಭೂಗೋಳ ಶಾಸ್ತ್ರ ನನ್ನ ವಿಷಯವಾಗಿತ್ತು ಎಂದು ತಿಳಿಸಿದರು. ಕಿಶೋರ ಪ್ರತಿಭಾವಂತ: ಇವರು ಆರಂಭದಿಂದಲೂ ಪ್ರತಿಭಾವಂತ ವಿದ್ಯಾರ್ಥಿ, ಎಸ್‍ಎಸ್‍ಎಲ್ಸಿ ಪರೀಕ್ಷೆಯಲ್ಲಿ ಶೇ.95.2 ಅಂಕಗಳೊಂದಿಗೆ ರಾಮಪೂರದ ಪೂರ್ಣಪ್ರಜ್ಞ ಶಾಲೆಗೆ ದ್ವಿತೀಯ ಸ್ಥಾನ ಪಡೆದಿದ್ದರು. ಕಿಶೋರ ಭಟ್ಟಡ ಬನಹಟ್ಟಿಯ ಎಸ್‍ಆರ್‍ಎ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪ್ರವೇಶ ಪಡೆದು ದ್ವಿತೀಯ ಪರೀಕ್ಷೆಯಲ್ಲಿ ಶೇ.91.83 ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದರು. ನಂತರ ಸಿಇಟಿ ಪರೀಕ್ಷೆಯಲ್ಲಿ ವೈದ್ಯಕೀಯ ವಿಭಾಗದಲ್ಲಿ ಮಹತ್ವದ ಸ್ಥಾನ ಅಂದರೆ ರಾಜ್ಯಕ್ಕೆ 6 ನೇ rank ಪಡೆದು ದಾಖಲೆ ನಿರ್ಮಿಸಿದ್ದರು.ನಂತರ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಷಾನ ಸಂಸ್ಥೆಯಿಂದ 2013ರಲ್ಲಿ ಎಂಬಿಬಿಎಸ್ ಪದವಿ ಪಡೆದು ಭಾರತೀಯ ಲೋಕಸೇವಾ ಆಯೋಗದ ಪರೀಕ್ಷೆ ತಯಾರಿ ನಡೆಸಿದರು. ಈಗ ತಮ್ಮ ಎರಡನೇಯ ಪ್ರಯತ್ನದಲ್ಲಿ 808 ನೇ ಸ್ಥಾನ ಪಡೆದು ರಬಕವಿ-ಬನಹಟ್ಟಿ ನಗರಕ್ಕೆ ಕೀರ್ತಿ ತಂದಿದ್ದಾರೆ. ನನ್ನ ಸಾಧನೆಗೆ ತಂದೆ-ತಾಯಿ ಹಾಗು ಚಿಕ್ಕಪ್ಪಂದಿರು, ಸಹೋದರರ ಸಹಾಯ ಅನನ್ಯ. ಅದರೊಂದಿಗೆ ಪ್ರೊ. ಕೆ.ಎಚ್. ಸಿನ್ನೂರ ಹಾಗು ಪ್ರಾಚಾರ್ಯ ಬಸವರಾಜ ಕೊಣ್ಣೂರರು ವಿದ್ಯಾರ್ಜನೆಗೆ ಬೆನ್ನೆಲುಬಾಗಿ ಶ್ರಮಿಸಿದ್ದಾರೆ..ಪ್ರೊ. ಕೆ.ಎಚ್. ಸಿನ್ನೂರ. ಭೌತಶಾಸ್ತ್ರ ಉಪನ್ಯಾಸಕರು : ಕಿಶೋರ ಭಟ್ಟಡ ಓರ್ವ ಛಲಗಾರ. ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ ಅವರದಾಗಿತ್ತು. ತುಂಬಾ ಪರಿಶ್ರಮದಿಂದ ದೇಶದ ಮಹತ್ವದ ಪರೀಕ್ಷೆಯಲ್ಲೊಂದಾದ ಯುಪಿಎಸ್ಸಿಯಲ್ಲಿ 808 ನೇ ಸ್ಥಾನದ ಸಾಧನೆ ಮಹತ್ವದ್ದು' ಎಂದಿದ್ದಾರೆ.
Read more at: http://kannada.oneindia.com/news/karnataka/bagalkot-grocery-shop-owner-son-kishore-bhattad-upsc-rank-holder-103391.html
Read more at: http://kannada.oneindia.com/news/karnataka/bagalkot-grocery-shop-owner-son-kishore-bhattad-upsc-rank-holder-103391.html
Comments
Post a Comment