ಪೃಥ್ವಿ -2 ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ
ಹೊಸದಿಲ್ಲಿ:
ದೇಶಿಯವಾಗಿ ಅಭಿವೃದ್ಧಿಪಡಿಸಲಾದ
ಅಣ್ವಸ್ತ್ರ ಸಿಡಿತಲೆಗಳನ್ನು
ಹೊತ್ತೊಯ್ಯಬಲ್ಲ
ಹಾಗೂ ನೆಲದಿಂದ-ನೆಲಕ್ಕೆ
ಚಿಮ್ಮುವ ಕಡಿಮೆ ಅಂತರದ
'ಪೃಥ್ವಿ-2' ಕ್ಷಿಪಣಿಯ
ಪರೀಕ್ಷಾರ್ಥ ಪ್ರಯೋಗ
ಯಶಸ್ವಿಯಾಗಿ ಬುಧವಾರ ಒಡಿಶಾದ
ಚಾಂಡಿಪುರದಲ್ಲಿ ನಡೆಯಿತು.
2003ರಲ್ಲೇ ಭಾರತದ ಸೇನೆ ಸೇರಿರುವ
ಪೃಥ್ವಿ -2 ಅನ್ನು ಡಿಆರ್ಡಿಒ ಅಭಿವೃದ್ಧಿ
ಪಡಿಸಿತ್ತು. 2 ಇಂಜಿನ್ಗಳನ್ನು
ಹೊಂದಿರುವ
'ಪೃಥ್ವಿ-2' ಕ್ಷಿಪಣಿ 8.56
ಮೀಟರ್ ಉದ್ದ ಇದ್ದು, 1.1
ಮೀಟರ್ ಸುತ್ತಳತೆ
ಹೊಂದಿದೆ. 4,600
ಕೆ.ಜಿ. ತೂಕವಿದ್ದು, 500 ರಿಂದ
1000 ಕೆ.ಜಿ.
ಸ್ಫೋಟಕಗಳನ್ನು
ಹೊತ್ತು 350
ಕಿ.ಮೀ. ದೂರದ ಗುರಿ ತಲುಪುವ
ಸಾಮರ್ಥ್ಯ
ಹೊಂದಿದೆ. ಜತೆಗೆ
ವೈರಿ ಪಡೆಯ ಕ್ಷಿಪಣಿಗಳನ್ನು
ಹೊಡೆದುರುಳಿಸುವ
ಸಾಮರ್ಥ್ಯ
ಹೊಂದಿದೆ. ಈ
ಕ್ಷಿಪಣಿಯು ಗರಿಷ್ಠ 43.5 ಕಿ.ಮಿ.
ಎತ್ತರದಲ್ಲಿ 483 ಸೆಕೆಂಡ್ಗಳ
ವರೆಗೆ ಹಾರಾಟ ನಡೆಸಿ ಗುರಿ ತಲುಪುವ
ಸಾಮರ್ಥ್ಯ
ಹೊಂದಿದೆ.
ಪೃಥ್ವಿ-2 ಕ್ಷಿಪಣಿ ಘನ ಮತ್ತು ದ್ರವ
ಇಂಧನ ಗಳನ್ನು ಬಳಕೆ
ಮಾಡಿಕೊಂಡು
ಕಾರ್ಯ ನಿರ್ವಹಿಸುತ್ತದೆ. ಈ
ಕ್ಷಿಪಣಿಯು
ಸ್ಫೋಟಕಗಳನ್ನು
ಮತ್ತು ಅಣ್ವಸ್ತ್ರಗಳನ್ನು
ಹೊತ್ತೊಯ್ಯುವ
ಸಾಮರ್ಥ್ಯ
ಹೊಂದಿದೆ.
Comments
Post a Comment