ಪಿಯುಸಿ ಫಲಿತಾಂಶ ೨೦೧೬ ಮೇ 25ಕ್ಕೆ ಜಾಲತಾಣಗಳಲ್ಲಿ, ಮೇ 26ಕ್ಕೆ ಕಾಲೇಜುಗಳಲ್ಲಿ
ಬೆಂಗಳೂರು: ಕಳೆದ ಮಾರ್ಚ್ ತಿಂಗಳಲ್ಲಿ
ನಡೆಸಲಾಗಿದ್ದ ದ್ವಿತೀಯ ಪಿಯುಸಿ
ಪರೀಕ್ಷೆ ಫಲಿತಾಂಶ ಇದೇ ಬುಧವಾರ
ಪ್ರಕಟಗೊಳ್ಳಲಿದೆ. ಆಯಾ ಪದವಿ
ಪೂರ್ವ ಕಾಲೇಜುಗಳಲ್ಲಿ ಮೇ 26ರಂದು
ಫಲಿತಾಂಶ ಲಭ್ಯವಾಗಲಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆ ಫಲಿತಾಂಶ
ದಿನಾಂಕವನ್ನು ಇಂದು ಅಧಿಕೃತವಾಗಿ ಘೋಷಣೆ
ಮಾಡಿದೆ. ಈ ಬಗ್ಗೆ ಮಾಹಿತಿ ನೀಡಿದ ಇಲಾಖೆ
ನಿರ್ದೇಶಕ ಡಾ.ರಾಮೇಗೌಡ, ಮೇ 25ರಂದು ಬೆಳಗ್ಗೆ
11 ಗಂಟೆಗೆ ಫಲಿತಾಂಶ ಪ್ರಕಟವಾಗಲಿದ್ದು,
ಮಧ್ಯಾಹ್ನ 12 ಗಂಟೆ ನಂತರ
ಜಾಲತಾಣಗಳಲ್ಲಿ ಸಿಗಲಿದೆ. ವಿದ್ಯಾರ್ಥಿಗಳು ತಮ್ಮ
ಫಲಿತಾಂಶವನ್ನು www.karresults.nic.in
ಮತ್ತು www.puc.kar.nic.in ನಲ್ಲಿ ನೋಡಬಹುದು.
ಈ ವರ್ಷ ಮೊದಲ ಬಾರಿಗೆ, ಇಲಾಖೆ
ಉತ್ತರ ಪತ್ರಿಕೆಗಳನ್ನು ಅಂಚೆ ಮೂಲಕ
ಕಳುಹಿಸುವ ಬದಲು ಆನ್ ಲೈನ್ ನಲ್ಲಿ ಜೆರಾಕ್ಸ್
ಪ್ರತಿಯನ್ನು ಪ್ರಕಟಿಸಲಿದೆ. ಇದೇ
ಸಂದರ್ಭದಲ್ಲಿ ಖಾಸಗಿ ವೆಬ್ ಸೈಟ್ ಗಳು
ಫಲಿತಾಂಶ ಪ್ರಕಟಿಸುವುದನ್ನು ಕೂಡ ಇಲಾಖೆ
ನಿಷೇಧಿಸಿದೆ.
Comments
Post a Comment