ಬಾಳೆ ಹಣ್ಣು ಮಾರುವಾತನ ಮಗಳು ಅನಿತಾ ಬಸಪ್ಪ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್
- Get link
- X
- Other Apps
ಕಡುಬಡತನದಲ್ಲಿ ಹುಟ್ಟಿ ಬೆಳೆದ ಅನಿತಾ ಬಸಪ್ಪ ಕಲಾ ವಿಭಾಗದಲ್ಲಿ 585 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಟ್ಯೂಷನ್'ಗೆ ಹೋಗಿ ಅತಿ ಹೆಚ್ಚು ಅಂಕ ಪಡೆಯುವುದು ದೊಡ್ಡ ಸಾಧನೆಯೇನಲ್ಲ. ಆದರೆ ತನ್ನ ಸ್ವಂತ ಪರಿಶ್ರಮದಿಂದಲೇ ಓದಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ ಅನಿತಾ ಬಸಪ್ಪ ಸಾಧನೆ ಎಂಥವರಲ್ಲೂ ಸ್ಪೂರ್ತಿ ಮೂಡಿಸುವುದರಲ್ಲಿ ಅನುಮಾನವೇ ಇಲ್ಲ.
ಪ್ರತಿದಿನ ಬೆಳಗ್ಗೆ ಐದು ಗಂಟೆಗೆ ಎದ್ದು ತನ್ನ ತಾಯಿಯ ದಿನನಿತ್ಯದ ಕೆಲಸಗಳಿಗೆ ನೆರವಾಗುತ್ತಿದ್ದ ಅನಿತಾ ಇಂದು ಎಲ್ಲರು ಹುಬ್ಬೇರಿಸುವಂತಹ ಸಾಧನೆ ಮಾಡಿದ್ದಾಳೆ. ಈ ಕುರಿತಂತೆ ಸುವರ್ಣ ನ್ಯೂಸ್-ಕನ್ನಡ ಪ್ರಭದೊಂದಿಗೆ ತನ್ನ ಸಂತೊಷವನ್ನು ಹಂಚಿಕೊಂಡಿದ್ದಾಳೆ.
ನಾನು ಇಡೀ ರಾಜ್ಯಕ್ಕೆ ಕಲಾ ವಿಭಾಗದಲ್ಲಿ ಟಾಪರ್ಆಗಿರುವ ವಿಷಯ ತಿಳಿದು ಖುಷಿ ಆಗ್ತಾ ಇದೆ. ಹೆಚ್ಚುಅಂಕ ಬರುತ್ತೆ ಎಂದು ಅಂದುಕೊಂಡಿದ್ದೆ ಆದರೆರಾಜ್ಯಕ್ಕೆ ಮೊದಲು ಬರುತ್ತೇನೆಂದು ನಿರೀಕ್ಷಿಸಿರಲಿಲ್ಲ.ನನ್ನ ಅಣ್ಣ ನನಗೆ ತುಂಬಾ ಓದೋಕೆ ತುಂಬಾ ಹೆಲ್ಪ್ಮಾಡ್ತಾ ಇದ್ದ. ಕೆಎಎಸ್ ಪರೀಕ್ಷೆ ಪಾಸ್ ಮಾಡಿತಹಶೀಲ್ದಾರ್ ಆಗಬೇಕೆಂದಿದ್ದೇನೆ ಎಂದು ಅನಿತಾಬಸಪ್ಪ ತನ್ನ ಮುಂದಿನ ಗುರಿಯನ್ನು ನಮ್ಮೊಂದಿಗೆಹಂಚಿಕೊಂಡಿದ್ದಾಳೆ.
ದಿನನಿತ್ಯ ಗುರುಗಳು ಮಾಡಿದ ಪಾಠವನ್ನುಮನೆಯಲ್ಲಿ ಪುನರಾವರ್ತನೆ ಮಾಡುತ್ತಿದ್ದೆ. ನಮ್ಮ ಕಾಲೇಜಿನ ಉಪನ್ಯಾಸಕರು ನನಗೆ ಸಾಕಷ್ಟು ಉಪಯುಕ್ತ ಸಲಹೆಗಳನ್ನು ನೀಡುತ್ತಿದ್ದರು. ಪರೀಕ್ಷೆಗೂ ಕೆಲವು ದಿನಗಳ ಹಿಂದೆ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುತ್ತಿದ್ದೆ. ನನಗೆ ರಾಜ್ಯಶಾಸ್ತ್ರ ಅಂದ್ರೆ ತುಂಬಾ ಇಷ್ಟ. ಇದು ಸಂವಿಧಾನದ ಬಗ್ಗೆ ಒಲವು ಜಾಸ್ತಿ ಎಂದು ಕಲಾ ವಿಭಾಗದ ಟಾಪರ್ ಅನಿತಾ ಬಸಪ್ಪ ತಿಳಿಸಿದ್ದಾರೆ.
ತಮ್ಮ ತಂದೆ ನನ್ನನ್ನು ಹಾಗೂ ಅಣ್ಣನನ್ನು ತುಂಬಾ ಕಷ್ಟಪಟ್ಟು ಓದಿಸುತ್ತಿದ್ದಾರೆ, ನನಗೆ ಇಷ್ಟು ಅಂಕ ಬಂದಿರುವುದು ಕೇಳಿ ಅವರಿಗೂ ಖುಷಿಯಾಗಿದೆ ಎಂದು ಅನಿತಾ ಸಂತೋಷ ವ್ಯಕ್ತಪಡಿಸಿದ್ದಾರೆ.
Comments
Post a Comment