ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ ; ತಿಥಿ ಅತ್ಯುತ್ತಮ ಚಿತ್ರ


ಉದಯವಾಣಿ,
May 17, 2016,
4:54 PM IST
ಬೆಂಗಳೂರು : 2015 ನೇ ಸಾಲಿನ ರಾಜ್ಯ
ಚಲನಚಿತ್ರ ಪ್ರಶಸ್ತಿ ಮಂಗಳವಾರ
ಪ್ರಕಟವಾಗಿದ್ದು , ಕನ್ನಡದ ತಿಥಿ
ಮೊದಲ ಅತ್ಯುತ್ತಮ ಚಿತ್ರ
ಪ್ರಶಸ್ತಿಯನ್ನು
ಗಿಟ್ಟಿಸಿಕೊಂಡಿದೆ ,
ದ್ವಿತೀಯ ಅತ್ಯುತ್ತಮ ಚಿತ್ರ
" ಮಾರಿಕೊಂಡವರು" .
ತೃತೀಯ ಅತ್ಯುತ್ತಮ ಚಿತ್ರ
ಪ್ರಶಸ್ತಿ ಮೈತ್ರಿ , ಅತ್ಯುತ್ತಮ ಜನಪ್ರಿಯ
ಮನರಂಜನಾ ಚಿತ್ರ ಪ್ರಶಸ್ತಿ
ಕೃಷ್ಣಲೀಲಾಕ್ಕೆ ಲಭಿಸಿದೆ. ಮನೆ
ಮೊದಲ ಪಾಠ ಶಾಲೆ
ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಗೆ
ಪಾತ್ರವಾಗಿದೆ .
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಾರ್ತಾ
ಸಚಿವ ರೋಶನ್ ಬೇಗ್ ಪ್ರಶಸ್ತಿಯ ವಿವರ
ಪ್ರಕಟಿಸಿದರು . ಅನುಪ್ ಭಂಡಾರಿ ಅವರ
ರಂಗಿತರಂಗ
ಚೊಚ್ಚಲ ನಿರ್ದೆಶನದ
ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ .
ಅತ್ಯುತ್ತಮ ನಿರ್ದೇಶಕ ಅನೂಪ್ ಭಂಡಾರಿ
( ರಂಗಿತರಂಗ ) , ಅತ್ಯುತ್ತಮ
ನಾಯಕ ನಟ ವಿಜಯ್ ರಾಘವೇಂದ್ರ
( ಶಿವಯೋಗಿ ಪುಟ್ಟಯ್ಯಜ್ಜ ),
ಅತ್ಯುತ್ತಮ ನಟಿ ಮಾಲಾಶ್ರೀ
( ಗಂಗಾ ) , ಅತ್ಯುತ್ತಮ ಸಂಭಾಷಣೆ
ಈರೇಗೌಡ (ತಿಥಿ ), ಅತ್ಯುತ್ತಮ ಪೋಷಕ ನಟ
ರಮೇಶ್ , ಭಟ್ ( ಮನಮಂಥನ ).
ಅತ್ಯುತ್ತಮ ಛಾಯಾಗ್ರಹಣ ಅನಂತ್
ಅರಸು( ಲಾಸ್ಟ್ ಬಸ್ ) , ಅತ್ಯುತ್ತಮ ಹಿನ್ನೆಲೆ
ಗಾಯಕ ಸಂತೋಷ್ ವೆಂಕಿ ,
ಅತ್ಯುತ್ತಮ ಸಂಕಲನ ಸೃಜತ್ ನಾಯಕ್ ,
ಅತ್ಯುತ್ತಮ ಬಾಲನಟಿ ಮೇವಿಷ್,
ಅತ್ಯುತ್ತಮ ಗೀತ ರಚನೆ
ವಿ . ನಾಗೇಂದ್ರ ಪ್ರಸಾದ್ .

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು