ಕೊರಿಯಾದ ಹಾನ್ ಕಾಂಗ್ ಗ ೨೦೧೬ರೆ ‘ಬುಕರ್’ ಪ್ರಶಸ್ತಿ"
18 May, 2016
ಲಂಡನ್ (ಪಿಟಿಐ): ದಕ್ಷಿಣ
ಕೊರಿಯಾದ ಬರಹಗಾರ್ತಿ ಹಾನ್
ಕಾಂಗ್ (45) ಅವರು ಈ ಸಾಲಿನ ಪ್ರತಿಷ್ಠಿತ
ಮ್ಯಾನ್ ಬುಕರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮಾನವನ ಕ್ರೌರ್ಯದೆಡೆಗಿನ ಮಹಿಳೆಯ ತಿರಸ್ಕಾರ
ಮತ್ತು ಮಾಂಸಾಹಾರವನ್ನು ತ್ಯಜಿಸುವುದರ
ಕುರಿತಾದ ಅವರ 'ದಿ ವೆಜಿಟೇರಿಯನ್' ಕೃತಿಗೆ ಈ ಗೌರವ
ಲಭಿಸಿದೆ.
ನೊಬೆಲ್ ಪುರಸ್ಕೃತ ಒರ್ಹಾನ್ ಪಾಮುಕ್
ಮತ್ತು ಅಂತರರಾಷ್ಟ್ರೀಯ
ಖ್ಯಾತಿ ಗಳಿಸಿರುವ ಎಲೆನಾ ಫೆರಂಟೆ ಅವರನ್ನು
ಹಿಂದಿಕ್ಕಿ ಕಾಂಗ್ ಈ ಪ್ರಶಸ್ತಿ
ಪಡೆದಿದ್ದಾರೆ. ಸೋಮವಾರ ರಾತ್ರಿ ನಡೆದ
ಸಮಾರಂಭದಲ್ಲಿ 50 ಸಾವಿರ ಪೌಂಡ್
(₹48.38 ಲಕ್ಷ) ಮೊತ್ತದ
ಬಹುಮಾನದ ಹಣವನ್ನು ಅವರು ಅನುವಾದಕಿ
ಡೆಬೊರಾ ಸ್ಮಿತ್
ಅವರೊಂದಿಗೆ
ಹಂಚಿಕೊಂಡರು.
ವಿಮರ್ಶಕ, ಸಂಪಾದಕ ಬಾಯ್ಡ್ ಟಾಂಕಿನ್
ಅವರು ಅಧ್ಯಕ್ಷರಾಗಿರುವ, ಐವರು
ತೀರ್ಪುಗಾರರ ಸಮಿತಿಯು ಅಂತಿಮ
ಸುತ್ತಿನಲ್ಲಿದ್ದ 155 ಕೃತಿಗಳ ಪೈಕಿ 'ದಿ ವೆಜಿಟೇರಿಯನ್'
ಕೃತಿಯನ್ನು ಅವಿರೋಧವಾಗಿ ಆಯ್ಕೆ ಮಾಡಿತು. ಸೋಲ್ನ ಕಲಾ
ಸಂಸ್ಥೆಯಲ್ಲಿ ಸೃಜನಶೀಲ
ಬರವಣಿಗೆ ಪ್ರಕಾರವನ್ನು ಬೋಧಿಸುತ್ತಿರುವ ಕಾಂಗ್
ಅವರು, ದಕ್ಷಿಣ ಕೊರಿಯಾದ
ಪ್ರತಿಷ್ಠಿತ ಯಿ ಸಾಂಗ್ ಸಾಹಿತ್ಯಿಕ ಪ್ರಶಸ್ತಿ,
ಯಂಗ್ ಆರ್ಟಿಸ್ಟ್ ಪ್ರಶಸ್ತಿ ಮತ್ತು
ಕೊರಿಯನ್ ಸಾಹಿತ್ಯ ಕಾದಂಬರಿ
ಪ್ರಶಸ್ತಿಗಳನ್ನು
ಪಡೆದುಕೊಂಡಿದ್ದರು.
ಸಂಪ್ರದಾಯ ಧಿಕ್ಕರಿಸುವ ಮಹಿಳೆಯ ಕಥೆ:
ತನ್ನ ಮನೆ, ಕುಟುಂಬ ಮತ್ತು ಸಮಾಜವು
ಬದ್ಧವಾಗಿರುವ ಸಂಪ್ರದಾಯ ಮತ್ತು
ನಂಬಿಕೆಗಳನ್ನು ಒಬ್ಬ ಸಾಮಾನ್ಯ ಮಹಿಳೆ
ಧಿಕ್ಕರಿಸುವುದನ್ನು ಸೂಕ್ಷ್ಮ ಮತ್ತು ಸುಂದರವಾಗಿ
ವಿಭಿನ್ನ ಆಯಾಮಗಳು ಮತ್ತು ಧ್ವನಿಗಳಲ್ಲಿ ಅವರು
ಚಿತ್ರಿಸಿದ್ದಾರೆ ಎಂದು ಟಾಂಕಿನ್ ಮೆಚ್ಚುಗೆ
ವ್ಯಕ್ತಪಡಿಸಿದ್ದಾರೆ.
'ದಿ ವೆಜಿಟೇರಿಯನ್' ಕೃತಿಯು ಮೂರು ಭಾಗಗಳನ್ನು
ಹೊಂದಿದೆ. ಯಿಯಾಂಗ್ ಹೈ
ಎಂಬ ಗೃಹಿಣಿಯು ತನಗೆ ಬಿದ್ದ
ಕನಸಿನಿಂದ
ಪ್ರೇರಣೆಗೊಂಡು ಸಂಪೂರ್ಣ
ಸಸ್ಯಾಹಾರಿಯಾಗಿ ಬದಲಾಗುವುದು ಕಾದಂಬರಿಯ
ವಸ್ತು. ಈ ವಸ್ತು ದಕ್ಷಿಣ ಕೊರಿಯಾದ
ಸಮಾಜದ ಸನ್ನಿವೇಶದಲ್ಲಿ ತೀರಾ
ಅಸಹಜವಾಗಿರುವುರಿಂದ ವ್ಯಾಪಕ ಚರ್ಚೆಗೆ
ಒಳಗಾಗಿದೆ.
ಏಳೇ ವರ್ಷದಲ್ಲಿ ಭಾಷೆ ಕಲಿತರು: 'ದಿ ವೆಜಿಟೇರಿಯನ್'
ಇಂಗ್ಲಿಷ್ ಭಾಷೆಗೆ
ಅನುವಾದಗೊಂಡ ಕಾಂಗ್
ಅವರ ಮೊದಲ ಕಾದಂಬರಿ.
ಅನುವಾದಕಿ ಡೆಬೊರಾ ಸ್ಮಿತ್ (28)
ಅಮೆರಿಕದ ಲೇಖಕಿಯಾಗಿದ್ದು, ಏಳು ವರ್ಷದ
ಹಿಂದಷ್ಟೇ ಕೊರಿಯಾ ಭಾಷೆ
ಕಲಿಯಲು ಪ್ರಾರಂಭಿಸಿದ್ದರು. ಇದು ಅವರು
ಕೊರಿಯಾ ಭಾಷೆಯಿಂದ
ಅನುವಾದಿಸಿದ ಮೊದಲ ಕೃತಿ.
Comments
Post a Comment