ಹೆಂಡ ಇಳಿಸುವವನ ಮಗ ಈಗ ಕೇರಳ ಸಿಎಂ


ಉದಯವಾಣಿ, May 21, 2016, 3:30 AM IST
ತಿರುವನಂತಪುರ: ಕೇರಳ
ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ
ಪಿಣರಾಯಿ ವಿಜಯನ್ ಹೆಂಡ ಇಳಿಸುವ
ವೃತ್ತಿಯಲ್ಲಿ ತೊಡಗಿದ್ದ ಬಡ ಕುಟುಂಬಕ್ಕೆ
ಸೇರಿದವರು. ಕರ್ನಾಟಕಕ್ಕೆ ಸಮೀಪದ
ಕಣ್ಣೂರು ಜಿಲ್ಲೆಯವರು. ಪ್ರಭಾವಿಯಾಗಿರುವ ಈಳವ
ಸಮುದಾಯದವರು. ಅತ್ಯುತ್ತಮ ಸಂಘಟಕ
ಎಂಬ ಕೀರ್ತಿಯನ್ನು ಕೇರಳದಲ್ಲಿ
ಗಳಿಸಿದ್ದಾರೆ. ಸದ್ಯ ಸಿಪಿಎಂ ಪಾಲಿಟ್ಬ್ಯೂರೋ
ಸದಸ್ಯರಾಗಿರುವ ಪಿಣರಾಯಿ, 16 ವರ್ಷ
ಸಿಪಿಎಂ ಕೇರಳ ಘಟಕದ
ಕಾರ್ಯದರ್ಶಿಯಾಗಿದ್ದರು. ಹೆಚ್ಚು ಮಾತನಾಡುವುದಿಲ್ಲ.
ಪಿಣರಾಯಿ ನಗುವುದೂ ಇಲ್ಲ ಎಂದು ಅವರ
ವಿರೋಧಿಗಳು ಗೇಲಿ ಮಾಡುತ್ತಾರೆ.
1996-98ರವರೆಗೆ ಇಂಧನ ಸಚಿವರಾಗಿ ಹಲವು
ಸುಧಾರಣೆಗಳನ್ನು ಜಾರಿಗೆ ತಂದಿದ್ದರೂ, ಕೆನಡಾ
ಕಂಪನಿ ಎಸ್ಎನ್ಸಿ- ಲಾವಲಿನ್ಗೆ ಜಲವಿದ್ಯುತ್
ಘಟಕಗಳ ಆಧುನೀಕರಣ ಗುತ್ತಿಗೆ
ನೀಡುವಾಗ ಭ್ರಷ್ಟಾಚಾರ ನಡೆಸಿದ ಆರೋಪ
ಅವರನ್ನು ಕಾಡುತ್ತಿದೆ. ಅಚ್ಚುತಾನಂದನ್
ಗರಡಿಯಲ್ಲೇ ಪಳಗಿದ್ದರೂ, ಅವರ ಬದ್ಧ ವೈರಿಯಾಗಿ
ಪರಿವರ್ತನೆಗೊಂಡಿದ್ದಾರೆ. ಸಾರ್ವಜನಿಕ
ನಿಂದನೆ ಹಿನ್ನೆಲೆಯಲ್ಲಿ 2007ರಲ್ಲಿ
ಪಿಣರಾಯಿ ಹಾಗೂ ಅಚ್ಚುತಾನಂದನ್ ಅವರನ್ನು
ಪಾಲಿಟ್ ಬ್ಯೂರೋದಿಂದಲೇ ಅಮಾನತುಗೊಳಿಸಲಾಗಿತ್ತು.
ಬಳಿಕ ಮರು ಸೇರ್ಪಡೆ ಮಾಡಿಕೊಳ್ಳಲಾಗಿತ್ತು. 1970ರಲ್ಲಿ
26ನೇ ವಯಸ್ಸಿಗೇ ಶಾಸಕರಾಗಿ ಆಯ್ಕೆಯಾಗಿದ್ದ
ಪಿಣರಾಯಿ 1977, 1991, 1996ರಲ್ಲೂ ಗೆದ್ದು
ಬಂದಿದ್ದರು. ತುರ್ತು ಪರಿಸ್ಥಿತಿ
ಸಂದರ್ಭದಲ್ಲಿ ಜೈಲಿಗೂ ಹೋಗಿದ್ದರು.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು