ಪಿಯು ಫಲಿತಾಂಶ ಪ್ರಕಟ; ಬಾಳೆಹಣ್ಣು ವ್ಯಾಪಾರಿ ಮಗಳು ರಾಜ್ಯಕ್ಕೆ ಟಾಪರ್


ಉದಯವಾಣಿ, May 25, 2016, 10:40 AM
IST
ಬೆಂಗಳೂರು: ದ್ವಿತೀಯ ಪಿಯುಸಿ
ಫಲಿತಾಂಶ ಬುಧವಾರ
ಪ್ರಕಟವಾಗಿದ್ದು, ಈ ಬಾರಿಯೂ
ವಿದ್ಯಾರ್ಥಿನಿಯರೇ ಮೇಲುಗೈ
ಸಾಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ
ಪ್ರಥಮ ಸ್ಥಾನ, ಉಡುಪಿ ದ್ವಿತೀಯ,
ಕೊಡಗು ತೃತೀಯ ಹಾಗೂ
ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ
ಪಡೆದಿದೆ. 91 ಕಾಲೇಜುಗಳು
ಶೂನ್ಯ ಫಲಿತಾಂಶ ಬಂದಿದೆ ಎಂದು
ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ
ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
11 ಗಂಟೆ ವೇಳೆಗೆ ಸರ್ಕಾರದ ಎರಡು
ವೆಬ್ಸೈಟ್ಗಳಲ್ಲಿ ಫಲಿತಾಂಶ
ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ.
ಗುರುವಾರ ಆಯಾ ಪಿಯು
ಕಾಲೇಜುಗಳಲ್ಲಿ ಫಲಿತಾಂಶ
ದೊರೆಯಲಿದೆ.
ದಕ್ಷಿಣ ಕನ್ನಡ ಜಿಲ್ಲೆ ಶೇ.90.48ರಷ್ಟು
ವಿದ್ಯಾರ್ಥಿಗಳು ತೇರ್ಗಡೆ, ಉಡುಪಿ
ಜಿಲ್ಲೆಯಲ್ಲಿ ಶೇ.90.35ರಷ್ಟು
ವಿದ್ಯಾರ್ಥಿಗಳು ಪಾಸ್. ಕೊಡಗು
ಜಿಲ್ಲೆಯಲ್ಲಿ ಶೇ.79.35ರಷ್ಟು
ವಿದ್ಯಾರ್ಥಿಗಳು ಪಾಸ್. ಯಾದಗಿರಿ
ಜಿಲ್ಲೆಯಲ್ಲಿ ಶೇ.44.16ರಷ್ಟು
ವಿದ್ಯಾರ್ಥಿಗಳು
ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ
ಶೇ.60.54ರಷ್ಟು ವಿದ್ಯಾರ್ಥಿಗಳು
ಪಾಸಾಗಿದ್ದರು. ಪ್ರಸಕ್ತ ವರ್ಷ
57.28ರಷ್ಟು ವಿದ್ಯಾರ್ಥಿಗಳು
ಉತ್ತೀರ್ಣರಾಗಿದ್ದಾರೆ.
ಫಲಿತಾಂಶಕ್ಕೆ ಈ ವೆಬ್ ಸೈಟ್ ನೋಡಿ:
ಸರ್ಕಾರದ www.karresults.nic.in
ಮತ್ತು www.puc.kar.nic.in
ವೆಬ್ಸೈಟ್ಗಳಲ್ಲಿ ಫಲಿತಾಂಶ
ಬಾಳೆಹಣ್ಣು ವ್ಯಾಪಾರಿ ಮಗಳು
ರಾಜ್ಯಕ್ಕೆ ಟಾಪರ್:
ಈ ಬಾರಿಯ ದ್ವಿತೀಯ ಪಿಯುಸಿ
ಫಲಿತಾಂಶದಲ್ಲಿ ಬಳ್ಳಾರಿ ಜಿಲ್ಲೆ
ಕೂಡ್ಲಗಿ ತಾಲೂಕಿನ ಕೊಟ್ಟೂರಿನ
ಇಂದೂ ಪಿಯು ಕಾಲೇಜಿನ ಕಲಾ
ವಿಭಾಗದ ವಿದ್ಯಾರ್ಥಿನಿ ಅನಿತಾ ಬಸಪ್ಪ
(600/594) ರಾಜ್ಯಕ್ಕೆ ಪ್ರಥಮ ಸ್ಥಾನ
ಪಡೆದಿದ್ದಾಳೆ. ಅನಿತಾ ಬಸಪ್ಪ
ಕೊಟ್ಟೂರು ಬಸ್ ಸ್ಟ್ಯಾಂಡ್
ನಲ್ಲಿ ಬಾಳೆಹಣ್ಣಿನ
ವ್ಯಾಪಾರಿಯಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಉಡುಪಿಯ
ನೇಹಾ ಶೆಟ್ಟಿ ದ್ವಿತೀಯ ರಾಂಕ್
ಉಡುಪಿ ಜ್ಞಾನಸುಧಾ ಕಾಲೇಜಿನ
ವಿದ್ಯಾರ್ಥಿನಿ ನೇಹಾ ಶೆಟ್ಟಿ
ವಿಜ್ಞಾನ ವಿಭಾಗದಲ್ಲಿ ದ್ವಿತೀಯ
ರಾಂಕ್ ಪಡೆದಿದ್ದಾಳೆ. 600 ಅಂಕಕ್ಕೆ 592
ಅಂಕ ಪಡೆದಿದ್ದಾಳೆ.

Comments

Popular posts from this blog

2025-26 ನೇ ಸಾಲಿಗೆ ಶಾಲಾ ದಾಖಲಾತಿಗಾಗಿ ವಯಸ್ಸಿನ ಲೆಕ್ಕಾಚಾರ

INCOME TAX CALCULATION 2025-26 for JAMAKHANDI BLOCK