ಸಿಇಟಿ ಕೀ ಉತ್ತರ ಪ್ರಕಟ
ಸಿಇಟಿ ಕೀ ಉತ್ತರ ಪ್ರಕಟ 7 May, 2016
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ತಾತ್ಕಾಲಿಕ ಸರಿ ಉತ್ತರಗಳನ್ನು (ಕೀ ಉತ್ತರ) ಪ್ರಕಟಿಸಿದೆ. ಮೇ 27ಕ್ಕೆ ಫಲಿತಾಂಶ
ನೀಡುವ ಸಾಧ್ಯತೆ ಇದೆ.
(PSGadyal teacher Vijaypur)
ಭೌತವಿಜ್ಞಾನ, ಗಣಿತ, ಜೀವವಿಜ್ಞಾನ ಮತ್ತು ರಸಾಯನವಿಜ್ಞಾನ ವಿಷಯಗಳ ಕೀ ಉತ್ತರಗಳನ್ನು ವೆಬ್‌ಸೈಟ್: http://kea.kar.nic.in ನಲ್ಲಿ ನೋಡಬಹುದು. ಆಕ್ಷೇಪಣೆಗಳಿದ್ದಲ್ಲಿ ಮೇ 10ರ ಸಂಜೆ 5.30ರೊಳಗೆ ಇಮೇಲ್ ವಿಳಾಸಕ್ಕೆ: keauthority-kar@nic.in ಕಳುಹಿಸಬಹುದು.
2016ನೇ ಸಾಲಿಗೆ ಆನ್‌ಲೈನ್ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ತಿದ್ದುಪಡಿ ಮಾಡಬೇಕಿದ್ದಲ್ಲಿ ಮೇ 12ರವರೆಗೆ ಅವಕಾಶ ಕಲ್ಪಿಸಲಾಗಿದೆ. 'ಸಿಇಟಿ ಸಂಪೂರ್ಣ ವೇಳಾಪಟ್ಟಿ ಪ್ರಕಾರವೇ ನಡೆಯುತ್ತಿದೆ. ಮೇ 9ರ ಬದಲು ಶುಕ್ರವಾರವೇ ಕೀ ಉತ್ತರ ಪ್ರಕಟಿಸಲಾಗಿದೆ. ಮೇ 27ರಂದು ಫಲಿತಾಂಶ ಪ್ರಕಟಿಸಲಾಗುವುದು' ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಡಳಿತಾಧಿಕಾರಿ ಎಸ್.ಎನ್. ಗಂಗಾಧರಯ್ಯ ಹೇಳಿದರು
Comments
Post a Comment