ವಿಶ್ವ ಪರಿಸರ ದಿನದ ಹುಟ್ಟು*... 05 Jun 2016
*
ನಮ್ಮ ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಹಾಗೂ ಆ ಬಗ್ಗೆ ವಿಶ್ವಾದ್ಯಂತ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವಸಂಸ್ಥೆ 1974ರ ಜೂನ್ 5ರಂದು 'ವಿಶ್ವ ಪರಿಸರ ದಿನ'ವನ್ನು ಆರಂಭಿಸಿತು. ಅಲ್ಲಿಂದ ಮುಂದೆ ವಿಶ್ವದ 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಪ್ರತಿವರ್ಷವೂ ಈ ದಿನವನ್ನು ಆಚರಿಸಲಾಗುತ್ತಿದೆ. ಪರಿಸರದ ಕುರಿತು ಜನಜಾಗೃತಿ ಮೂಡಿಸಲು ಈ ದಿನವನ್ನು ವೇದಿಕೆಯನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಪ್ರತಿ ವರ್ಷ ಈ ದಿನವನ್ನು ಒಂದು ಧ್ಯೇಯದೊಂದಿಗೆ ಆಚರಿಸಲಾಗುತ್ತದೆ.
*ಈ ವಷ೯ದ ಧ್ಯೇಯ ವಾಕ್ಯ "ವನ್ಯ ಜೀವಿಗಳ ಕಾನೂನುಬಾಹಿರ ಮಾರಾಟದ ವಿರುಧ್ದ ಹೋರಾಟ*"
ಈ ಧ್ಯೇಯವು ಪರಿಸರಕ್ಕೆ ಸಂಬಂಧಿಸಿ ಕಾಳಜಿ ವಹಿಸಬೇಕಾದ ಯಾವುದೋ ಒಂದು ವಿಚಾರವನ್ನು ಒಳಗೊಂಡಿರುತ್ತದೆ. ಈ ಧ್ಯೇಯಕ್ಕೆ ಅನುಗುಣವಾಗಿ ಆ ವರ್ಷದ ಪರಿಸರ ದಿನದ ಲಾಂಛನವನ್ನೂ ರೂಪಿಸಲಾಗುತ್ತದೆ. ಪ್ರತಿವರ್ಷವೂ ಬೇರೆ ಬೇರೆ ರಾಷ್ಟ್ರಗಳಲ್ಲಿ ಈ ದಿನದ ಅಧಿಕೃತ ಆಚರಣೆ ನಡೆಯುತ್ತದೆ. ಆ ವರ್ಷದ ಧ್ಯೇಯಕ್ಕೆ ಅನುಗುಣವಾಗಿ ಹೆಚ್ಚಿನ ಪರಿಸರ ಸಮಸ್ಯೆಗಳನ್ನು ಎದುರಿಸುತ್ತಿರುವ ರಾಷ್ಟ್ರವನ್ನು ಆರಿಸಿಕೊಂಡು ಅಲ್ಲಿನ ತೊಂದರೆ ಪರಿಹರಿಸಲು ಪ್ರಯತ್ನಿಸಲಾಗುತ್ತದೆ.
ಈ ವರ್ಷ ಅಂಗೋಲಾದಲ್ಲಿ ವಿಶ್ವ ಪರಿಸರ ದಿನ ಆಯೋಜನೆಗೊಂಡಿದೆ.
Comments
Post a Comment