ಅಭಿಮತ:- 30 ವರ್ಷಗಳ ನಂತರ ಸರ್ಕಾರಿ ಶಾಲೆಗಳು ಹೇಗಿರಬಹುದು?
ಮೈಸೂರು ದಸರಾ. ತೇರಲ್ಲಿ ಅಂಬಾರಿ. ಅದರ ಮುಂದೆ ಸ್ತಬ್ಧ ಚಿತ್ರಗಳ ಸಾಲು. ಜನಪದವಂತೂ ಸಂಪೂರ್ಣ ಕಣ್ಮರೆ. ಎಲ್ಲದರಲ್ಲೂ ಆಧುನಿಕತೆ ಕಾಣಿಸುತ್ತಿತ್ತು. ನಾನು, ನನ್ನ ಮಗ ಕುಳಿತು ನೋಡುತ್ತಿದ್ದೆವು. ಸಾರ್ವಜನಿಕ ಶಿಕ್ಷಣ ಇಲಾಖೆ ರೂಪಿಸಿದ್ದ ಸ್ತಬ್ಧ ಚಿತ್ರ ನನ್ನ ಮಗನಿಗೆ ಆ ಕರ್ಷಕವಾಗಿ ಕಾಣಿಸಿತು. ಒತ್ತೂತ್ತಾಗಿ ಕಟ್ಟಿದ ಮೂರು ಕಟ್ಟಡಗಳು, ಅದರಲ್ಲಿ ಒಂದು ಹೆಂಚಿನ ಕಟ್ಟಡ. ಗೊಡೆಯ ಹೊರಭಾಗದಲ್ಲಿ ಗಾಂಧೀಜಿ, ಸುಭಾಷ್ಚಂದ್ರ ಬೋಸ್, ನೆಹರು, ಪಟೇಲರು ಮುಂತಾದ ಗಣ್ಯರ ಚಿತ್ರಗಳು, ಒಂದು ಕಡೆ ಮಗ್ಗಿ, ಕಾಗುಣಿತ, ಮುರಿದ ಕಿಟಕಿಗಳು. ಕಟ್ಟಡದ ಮುಂದೆ ಕುರುಚಲು ಗಿಡದಂತಹ ನಾಲ್ಕಾರು ಗಿಡಗಳು... ಅಪ್ಪ ಏನದು! ನಾನು ತಣ್ಣಗೆ ಹೇಳಿದೆ ಸರ್ಕಾರಿ ಶಾಲೆ ಮಗಾ! ಸರ್ಕಾರಿ ಶಾಲೆನಾ, ಹಾಗಂದ್ರೇನು? ಈಗ ನಿನ್ನ ಶಾಲೆ ಇದೆಯಲ್ವಾ? ಅದೇ ರೀತಿ ಹಿಂದೆ ಸರ್ಕಾರ ಶಾಲೆಗಳನ್ನು ನಡೆಸ್ತಿತ್ತು. "ಹೌದಾ? ಹಾಗಾದರೆ ಈಗ ಯಾಕಿಲ್ಲ' ಅಂದ. ಇಲ್ಲಪ್ಪ ಎಲ್ಲ ಮುಚ್ಚಿಬಿಟ್ರಾ. 2-3 ಶಾಲೆ ಇದಾವೆ ಅಂತ ಕೇಳಿದೀನಿ. ಒಂದು ಮೈಸೂರು, ಇನ್ನೆರಡು ಕಾರವಾರ ಮತ್ತು ಕಲಬುರಗಿಯಲ್ಲಿವೆಯಂತೆ. ನನ್ನ ಮಗನಿಗೆ ಕಾತುರ ಜಾಸ್ತಿಯಾಯಿತು. "ಹಾಗಾದರೆ ಆವಾಗ ಇವು ಎಲ್ಲಾ ಕಡೆ ಇದ್ವಾ ಅಪ್ಪ' ಅಂದ. ಹೂಂ ಅಂದೆ. ನಮ್ಮೂರ ಹೊರಗೆ ದನದ ಆಸ್ಪತ್ರೆ, ಗ್ರಾಮ ಲೆಕ್ಕಿಗರ ಆಫೀಸ್ ಇದೆಯಲ್ಲಾ, ಅದೇ ನಮ್ಮೂರ ಶಾಲೆ. ನಾನೂ...