ಕನ್ನಡ ಇ-ಬುಕ್ ಗಳು ದೊರೆಯುವ ತಾಣಗಳ ಪಟ್ಟಿ :-
*ಡೈಲಿ ಹಂಟ್* (Dailyhunt): ಖರೀದಿ ಮಾಡಿ DailyHunt app ಮೂಲಕ ಓದಬಹುದು.ಫ್ಲಿಪ್ ಕಾರ್ಟ್ ಇ ಬುಕ್ಸ್: *Flipkart ebook* App ಅಳವಡಿಸಿಕೊಂಡು ಓದಬಹುದು ಅಥವಾ ವೆಬ್ ಬ್ರೌಸರಲ್ಲಿ ಓದಬಹುದು. (No more available)ಪುಸ್ತಕ : (Pustaka) ಖರೀದಿಸಿ ಆನ್ ಲೈನ್ ಓದಬಹುದು ಮತ್ತು *pustaka android app* ಮೂಲಕ ಓದಬಹುದು.ಗೂಗಲ್ ಬುಕ್ಸ್: Google Play store ಮೂಲಕ ಖರೀದಿಸಿ ಓದಬಹುದು. ಸ್ವಿಫ್ಟ್ ಬುಕ್ಸ್ (Swiftboox): ಖರೀದಿಸಿ ಹಲವು ತಂತ್ರಾಂಶಗಳ ಮೂಲಕ ಓದಬಹುದು: ಪಟ್ಟಿ ಇಲ್ಲಿದೆ (ಸದ್ಯಕ್ಕೆ ಇಲ್ಲಿ ಕನ್ನಡ ಪುಸ್ತಕಗಳಿಲ್ಲ)ಕ್ವಿಲ್ ಬುಕ್ಸ್ (Quillbooks.in): ಖರೀದಿಸಿ ಕ್ವಿಲ್ ಬುಕ್ಸ್ ತಂತ್ರಾಂಶದ ಮೂಲಕ ಆನ್ ಲೈನ್/ಆಫ್ ಲೈನ್ ಓದಬಹುದು. ಇತ್ತೀಚಿನ/ಹೊಸಕಾಲದ ಪುಸ್ತಕಗಳಿವೆ. (ಈಗ ಈ ವೆಬ್ಸೈಟ್ ಇಲ್ಲ!)ನನ್ನ ಲೈಬ್ರರಿ (nannalibrary): ಬಾಡಿಗೆಗೆ ಪಡೆದು Meralibrary app ಮೂಲಕ ಓದಬಹುದು.ಇಶಾ ಶಾಪಿ (ishashoppe): ಪಿ ಡಿ ಎಫ್ ಮಾದರಿ ಪುಸ್ತಕಗಳು ಖರೀದಿಗಿವೆ.ರೀಡ್ ವೇರ್ (Readwhere): ಖರೀದಿ ಮಾಡಿ Readwhere app ಮೂಲಕ ಓದಬಹುದು.ಸ್ಮ್ಯಾಶ್ ವರ್ಡ್ಸ್ (Smashwords): epub, mobi, ಮುಂತಾದ ಇಬುಕ್ format ಹಾಗೂ iOSಗೆ ಆಗುವಂತಹ ಕೆಲವು ಪುಸ್ತಕಗಳಿವೆ. ಖರೀದಿಸಿ ಓದಬಹುದು. ಕೈ ಬುಕ್ಸ್ (Kai Books): ಇದು ಒಂದು ಆಂಡ್ರಾಯ್ಡ್ ಕಿರುತಂತ್ರಾಂಶವಾಗಿದ್ದು ಇದರಲ್ಲಿ ಅನೇಕ ಪುಸ್ತಕಗಳನ್ನು ಉಚಿತವಾಗಿ/ಖರೀದಿಸಿ/ಬಾಡಿಗೆಗೆ ಪಡೆದು ಓದಬಹುದು.Rockstand: ಇದರಲ್ಲಿ ಹಲವು ಮಕ್ಕಳ ಪುಸ್ತಕಗಳಿವೆ. ಸ್ಮಾರ್ಟ್ ಫೋನುಗಳಲ್ಲಿ ಈರಾಕ್ ಸ್ಟ್ಯಾಂಡ್ ಕಿರುತಂತ್ರಾಂಶಅಳವಡಿಸಿಕೊಂಡು ಓದಬಹುದು.ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ (DLI): ನೂರಾರು (ಉಚಿತ) ಹಳೇ ಪುಸ್ತಕಗಳಿದ್ದು, ಪುಸ್ತಕಗಳ ಒಂದೊಂದು ಪುಟವನ್ನೂ ಒಂದೊಂದು ಫೈಲ್ ಆಗಿ ಬಿಡಿಬಿಡಿಯಾಗಿ TIFF ಮಾದರಿಯಲ್ಲಿ ಹಾಕಲ್ಪಟ್ಟಿದೆ. ಇದು ಡೌನ್ಲೋಡ್ ಮಾಡಲು ಬಹಳ ಕಷ್ಟವಾಗಿದೆ.ಆದರೆ ಒಂದಿಡೀ ಪುಸ್ತಕವನ್ನು ಒಮ್ಮೆಲೇ ಡೌನ್ಲೋಡ್ ಮಾಡುವಂತೆ ಮತ್ತು ಪಿ. ಡಿ. ಎಫ್ ಗೆ ಪರಿವರ್ತಿತವಾಗುವಂತೆ ಹಲವು ತಂತ್ರಾಂಶಗಳು ಅಂತರಜಾಲದಲ್ಲಿ ದೊರೆಯುತ್ತವೆ.ಒಸ್ಮಾನಿಯಾ ವಿಶ್ವವಿದ್ಯಾಲಯದ ಡಿಜಿಟಲ್ ಲೈಬ್ರರಿ (OUDL): ಸಾವಿರಾರು ಕನ್ನಡ ಪಿಡಿಎಫ್ ಪುಸ್ತಕಗಳು ಇಲ್ಲಿವೆ. ಅಂಗಡಿಗಳಲ್ಲಿ ಈಗ ಕೊಳ್ಳಲು ಸಿಗಲಾರದಂತಹ, ಮುದ್ರಣ ನಿಂತುಹೋದಂತಹ ಹಳೆಯ ಒಳ್ಳೊಳ್ಳೆಯ ಕೃತಿಗಳು ಇದರಲ್ಲಿ ಬಹಳಷ್ಟಿವೆ. (ಉಚಿತ)ಓಪನ್ ಲೈಬ್ರರಿ (Open library): ಕೆಲವು ಹಳೆಯ ಪಿಡಿಎಫ್ ಪುಸ್ತಕಗಳಿವೆ. (ಉಚಿತ)ಆರ್ಕೈವ್ (Archive): ಹಳೆಯ ಸಾಹಿತ್ಯ, ಪೌರಾಣಿಕ, ಸ್ತೋತ್ರ, ಪೂಜೆ ಮುಂತಾದ ಪುಸ್ತಕಗಳ ಪಿಡಿಎಫ್ ಇವೆ. (ಉಚಿತ)ಸಿರಿ ಕನ್ನಡ: ಹಳೆಗನ್ನಡ, ನಡುಗನ್ನಡ , ಹೊಸಗನ್ನಡದ ಪಿಡಿಎಫ್ ಪುಸ್ತಕಗಳಿವೆ. (ಉಚಿತ) ಮತ್ತೊಂದಿಷ್ಟು ಪುಸ್ತಕಗಳು- ಇಲ್ಲಿ ಮತ್ತು ಇಲ್ಲಿ: ಕಾರಂತ, ತೇಜಸ್ವಿ, ಭೈರಪ್ಪ, ಕುವೆಂಪು, ಸಾಯಿಸುತೆ, ಯಂಡಮೂರಿ, ಕೌಂಡಿನ್ಯ ಸೇರಿದಂತೆ ಹಲವು ಹಳೆ, ಹೊಸ ಪುಸ್ತಕಗಳಿವೆ. ಎಲ್ಲವೂ ಪಿಡಿಎಫ್ ರೂಪದಲ್ಲಿವೆ. ಇವು ಬಹುಶಃ ಪೈರೇಟೆಡ್ ಪುಸ್ತಕಗಳಾಗಿವೆ. (ಇವುಗಳ ಕೊಂಡಿಗಳನ್ನು ಮಾತ್ರ ಹಂಚಲಾಗಿದೆ. ಪುಸ್ತಕದ ಪೈರೆಸಿಗೆ ನಾನಾಗಲೀ , ಈ ಕೊಂಡಿಗಳನ್ನು ಹಾಕಿದವರಾಗಲೀ ಜವಾಬ್ದಾರರಲ್ಲ)ಐ ಫೋನ್ ಮೂಲಕ ಕನ್ನಡ ಪುಸ್ತಕಗಳನ್ನು ಓದಲು ಇಲ್ಲಿದೆ ಸುಮಾರು ಸಾವಿರ ಪುಸ್ತಕಗಳಕನ್ನಡ ಲೈಬ್ರರಿ.BOOKZZ: ಕೆಲವು ಪಿಡಿಎಫ್ ಪುಸ್ತಕಗಳಿವೆ. (ಉಚಿತ) ಖುಷಿ ಕನ್ನಡ ಕಾಮಿಕ್ಸ್ ಅತ್ರಿ ಬುಕ್ ಸೆಂಟರ್ ತಾಣದಲ್ಲಿ ಹಲವು ಇ-ಪುಸ್ತಕಗಳು ಉಚಿತವಾಗಿ ಲಭ್ಯ.ವಿವಿಧ್ ಲಿಪಿ (VIVIDLIPI): Google Play storeನ vividlip app ಮೂಲಕ ಖರೀದಿಸಿ ಓದಬಹುದು.'ಕೆಂಡಸಂಪಿಗೆ' ತಾಣದಲ್ಲಿ ಕೆಲವು ಉಚಿತ ಪಿಡಿಎಫ್ ಪುಸ್ತಕಗಳು: ಇಲ್ಲಿ ಕ್ಲಿಕ್ಕಿಸಿವಾಲ್ಮೀಕಿ ಬುಕ್ಸ್: ಇದೊಂದು ಆಂಡ್ರಾಯ್ಡ್ ಆಪ್ ಆಗಿದ್ದು ಇದರಲ್ಲಿ ಅನೇಕ ಪುಸ್ತಕಗಳನ್ನು ಉಚಿತವಾಗಿ ಮತ್ತು ಖರೀದಿಸಿ ಓದಬಹುದು.ಲುಲು: epub, pdf ಮಾದರಿಯ ಕನ್ನಡ ಪುಸ್ತಕಗಳ ಖರೀದಿಗೆ.
ಗಮನಿಸಿ: ಸಾಮಾನ್ಯವಾಗಿ ಇ-ಪುಸ್ತಕಗಳ ಬೆಲೆ ಮುದ್ರಿತ ಪ್ರತಿಗಿಂತ ಕಡಿಮೆ ಇರುತ್ತದೆ.
ಓದಿ... ಓದಿಸಿ..
***
ಇವುಗಳಲ್ಲದೇ ಇನ್ನು ಬೇರೆ ತಾಣಗಳು ನಿಮಗೆ ಗೊತ್ತಿದ್ದಲ್ಲಿ ತಿಳಿಸಿ..
Comments
Post a Comment