ಕೆ–ಸೆಟ್: ಡಿಸೆಂಬರ್ 11ಕ್ಕೆ ಪರೀಕ್ಷೆ 21 Sep, 2016:-ಪ್ರಜಾವಾಣಿ ವಾರ್ತೆ
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯವು ಕರ್ನಾಟಕ ರಾಜ್ಯ ಉಪನ್ಯಾಸಕ ಅರ್ಹತಾ ಪರೀಕ್ಷೆಗೆ (ಕೆ–ಸೆಟ್) ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಪರೀಕ್ಷೆ ಡಿ. 11ರಂದು ನಡೆಯಲಿದೆ.
ಪ್ರಕ್ರಿಯೆ ಸೆ. 26ರಂದು ಆರಂಭವಾಗಲಿದ್ದು, ದಂಡಶುಲ್ಕ ರಹಿತವಾಗಿ ಅ. 25 ಮತ್ತು ದಂಡ ಸಹಿತವಾಗಿ ನ. 4ರ ವರೆಗೆ (ಸಂಜೆ 5 ಗಂಟೆ) ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸಾಮಾನ್ಯ ವರ್ಗ ₹ 1,050, ಪ್ರವರ್ಗ 2ಎ, 2ಬಿ, 3ಎ, 3ಬಿ ₹ 850 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ–1, ಅಂಗವಿಕಲ ಅಭ್ಯರ್ಥಿಗಳಿಗೆ ₹ 550 ಪರೀಕ್ಷಾ ಶುಲ್ಕ ನಿಗಪಡಿಸಲಾಗಿದೆ. ₹ 150 ದಂಡಶುಲ್ಕ ಪಾವತಿಸಿ ನ. 4ರ ವರೆಗೆ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಸ್ವವಿವರ ಮತ್ತು ಶೈಕ್ಷಣಿಕ ಮಾಹಿತಿ ನೋಂದಣಿ ಮಾಡಿದ ನಂತರ, ಕೆನರಾ ಬ್ಯಾಂಕ್ ಶಾಖೆಗಳಲ್ಲಿ ಅಥವಾ ಡೆಬಿಟ್, ಕ್ರೆಡಿಟ್, ನೆಟ್‌ಬ್ಯಾಂಕಿಂಗ್, ನೆಫ್ಟ್ ಮೂಲಕ ಶುಲ್ಕ ಪಾವತಿಸಬಹುದು.
ಶುಲ್ಕ ಪಾವತಿಸಿದ ನಂತರ ಅರ್ಜಿ ಮತ್ತು ರಸೀತಿ, ಚಲನ್, ಹಾಜರಾತಿ ಪ್ರತಿಗಳನ್ನು ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅರ್ಜಿ ಪ್ರತಿ, ಹಾಜರಾತಿ ಪತ್ರ, ಅಂಕಪಟ್ಟಿ, ಇತರ ದಾಖಲೆಗಳನ್ನು ಎ–4 ಲಕೋಟೆಯಲ್ಲಿ ನ. 10ರ ಒಳಗೆ ಸಂಬಂಧಪಟ್ಟ ಪರೀಕ್ಷಾ ಕೇಂದ್ರದ ನೋಡೆಲ್ ಅಧಿಕಾರಿಗೆ ಸಲ್ಲಿಸಬೇಕು.
ವಿವಿಧ 39 ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಧಾರವಾಡ, ಕಲಬುರ್ಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಅರ್ಜಿ ಸಲ್ಲಿಕೆ ಮತ್ತು ಮಾಹಿತಿಗೆ ವೆಬ್‌ಸೈಟ್ http//:kset.uni-mysore.ac.in ಸಂಪರ್ಕಿಸಬಹುದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಆಡಳಿತಾಂಗ ಕುಲಸಚಿವ ಪ್ರೊ.ಸಿ.ಬಸವರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments
Post a Comment