ವಾಟ್ಸಾಪ್ನಲ್ಲಿ 16MB ಗಿಂತ ಹೆಚ್ಚಿನ ಸೈಜ್ನ ವೀಡಿಯೊ ಸೆಂಡ್ ಹೇಗೆ?
| Thu, Sep 22, 2016, 9:09 [IST]
ವಾಟ್ಸಾಪ್ ಪ್ರಪಂಚದಲ್ಲೇ ಪ್ರಖ್ಯಾತವಾಗಿರುವ
ಮೆಸೇಜಿಂಗ್ ಆಪ್ ಆಗಿದೆ. ಅಲ್ಲದೇ ಬಹುತೇಕ ಸ್ಮಾರ್ಟ್ಫೋನ್
ವೇದಿಕೆಗಳಲ್ಲಿ ಲಭ್ಯವಿದ್ದು, ಆದರೆ ಕೆಲವು ನಿರ್ಬಂಧಗಳು
ಸಹ ಇವೆ.
ಇತ್ತೀಚೆಗೆ ವಾಟ್ಸಾಪ್ ಹಲವು ಬದಲಾವಣೆಗಳನ್ನು
ತಂದಿದ್ದು, ಅವುಗಳೆಂದರೆ ರಿಫ್ರೆಶ್ಡ್ UI, ಕರೆ ಆಪ್ಶನ್,
ಹೆಚ್ಚಿನ ಎಮೋಜಿಗಳು ಮತ್ತು ಅಕ್ಷರಗಳ ವಿನ್ಯಾಸಗಳು. ಅಲ್ಲದೇ
ವೀಡಿಯೊ, ಆಡಿಯೋ ಮತ್ತು ಸ್ಥಳದ
ಮಾಹಿತಿಯನ್ನು ಇತರರಿಗೆ ಕಳುಹಿಸುವ ಫೀಚರ್ ಅನ್ನು ಸಹ
ಹೊಂದಿದೆ.
ವಾಟ್ಸಾಪ್ನಲ್ಲಿ ಯಾವುದಾದರೂ ಕಾಂಟ್ಯಾಕ್ಟ್ ಬ್ಲಾಕ್ ಮಾಡಿದರೆ
ಏನಾಗಬಹುದು ಗೊತ್ತೇ?
ವಾಟ್ಸಾಪ್(WhatsApp) ಹಲವು ಫೀಚರ್ಗಳನ್ನು
ಹೊಂದಿದ್ದರೂ ಸಹ
ವೀಡಿಯೊ, ಆಡಿಯೋ ಫೈಲ್ಗಳು 16MB
ಗಿಂತ ಹೆಚ್ಚಿನ ಸೈಜ್ ಇದ್ದಲ್ಲಿ ಇತರರಿಗೆ ಕಳುಹಿಸಲು
ಸಾಧ್ಯವಿಲ್ಲ. ಆದ್ದರಿಂದ ಇಂದಿನ ಲೇಖನದಲ್ಲಿ
ಆಂಡ್ರಾಯ್ಡ್ , ವಿಂಡೋಸ್ ಮತ್ತು ಐಓಎಸ್ ಬಳಕೆದಾರರು
ತಮ್ಮ ವಾಟ್ಸಾಪ್ ಆಪ್ ಮೂಲಕ 16MB ಗಿಂತ ಹೆಚ್ಚಿನ ಸೈಜ್ನ
ವೀಡಿಯೊವನ್ನು ಇತರರಿಗೆ ಕಳುಹಿಸುವುದು
ಹೇಗೆ ಎಂದು ತಿಳಿಸುತ್ತಿದ್ದೇವೆ. ಹೇಗೆ ಎಂದು ಕೆಳಗಿನ
ಹಂತಗಳನ್ನು ಓದಿ ತಿಳಿಯಿರಿ.
ಹಂತ 1: ಮೊದಲಿಗೆ ಗೂಗಲ್ ಪ್ಲೇ
ಸ್ಟೋರ್ನಿಂದ 'ಆಂಡ್ರಾಯ್ಡ್
ವೀಡಿಯೊ ಕನ್ವರ್ಟರ್' ಆಪ್ ಅನ್ನು
ನಿಮ್ಮ ಡಿವೈಸ್ಗೆ ಇನ್ಸ್ಟಾಲ್ ಮಾಡಿಕೊಳ್ಳಿ.
ಹಂತ 2: ಆಪ್ ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿದ
ನಂತರ ಓಪನ್ ಮಾಡಿ.
ಹಂತ 3: ಆಪ್ ಓಪನ್ ಆದ ನಂತರ ಒಮ್ಮೆಯೇ ಆಪ್
ಸ್ವಯಂಕೃತವಾಗಿ ಎಲ್ಲಾ
ವೀಡಿಯೊ ಫೈಲ್ಗಳನ್ನು ನಿಮ್ಮ ಫೋನ್
ಮೆಮೊರಿಯಿಂದ ಸ್ಕ್ಯಾನ್
ಮಾಡಿಕೊಳ್ಳುತ್ತದೆ. ಸ್ಕ್ಯಾನ್ ಆಗದಿದ್ದಲ್ಲಿ
ನೀವೇ ಮ್ಯಾನುವಲಿ ಸ್ಕ್ಯಾನ್ ಮಾಡಿ.
ಹಂತ 4: ಒಮ್ಮೆ ವೀಡಿಯೊ
ಫೈಲ್ಗಳನ್ನು ಸೆಲೆಕ್ಟ್ ಮಾಡಿದ ನಂತರ, ಆಪ್ಟಿಮೈಜ್ ಆಪ್ಶನ್
ಮೇಲೆ ಕ್ಲಿಕ್ ಮಾಡಿ. ಈ ಆಪ್ನಲ್ಲಿ MP4 ನಿಂದ 3gp
ಫೈಲ್ನ ಆಪ್ಶನ್ಗಳವರೆಗೂ ಫೈಲ್ ಅನ್ನು ನೀಡುತ್ತದೆ.
Comments
Post a Comment