1999 ರೂ.ಗೆ ಜಿಯೊ 4G ಹಾಟ್ ಸ್ಪಾಟ್ ಡಿವೈಸ್ September 18, 2016
ಮುಂಬೈ. ಸೆ.18 : ರಿಲಾಯನ್ಸ್ ಜಿಯೋ 4ಜಿ ಉಚಿತ ಸಿಮ್ ಖರೀದಿ ಕಷ್ಟದ ಕೆಲಸ. ನಿರೀಕ್ಷೆಗಿಂತ ಹೆಚ್ಚು ಬೇಡಿಕೆ ಇರುವುದರಿಂದ ಗ್ರಾಹಕರ ಬೇಡಿಕೆಗೆ ತಕ್ಕಷ್ಟು ಸಿಮ್ ನೀಡಲಾಗುತ್ತಿಲ್ಲ. ಈ ನಡುವೆ ರಿಲಾಯನ್ಸ್ ತನ್ನ ಹೊಸ ಸಾಧನ Jiofai 4G ಹಾಟ್ ಸ್ಪಾಟ್ ಪ್ರಾರಂಭಿಸಿದೆ. ಭಾರತದ ರಿಲಾಯನ್ಸ್ ಸ್ಟೋರ್ ನಲ್ಲಿ Jiofai 4G ಹಾಟ್ ಸ್ಪಾಟ್ 1999 ರೂಪಾಯಿಗೆ ಸಿಗ್ತಾ ಇದೆ.
ಈ ಡಿವೈಸ್ ನಲ್ಲಿ Oled ಡಿಸ್ ಪ್ಲೇ ಹಾಗೂ 2600 mAh ಬ್ಯಾಟರಿ ಇದೆ. ಈ ಹಿಂದಿನ Jiofai ನಲ್ಲಿ 2300 mAh ಬ್ಯಾಟರಿ ನೀಡಲಾಗಿತ್ತು. ಮನೆಯಲ್ಲಿ ಅನೇಕರು ನೆಟ್ ಬಳಸುತ್ತಿದ್ದರೆ ಈ Jiofai 4G ಬಹಳ ಉಪಯೋಗಕಾರಿ. ಈ Jiofai 4G ನಲ್ಲಿ 10 ಡಿವೈಸ್ ಕನೆಕ್ಟ್ ಮಾಡಿ ನೆಟ್ ಬಳಸಬಹುದಾಗಿದೆ. ರಿಲಾಯನ್ಸ್ ಮಳಿಗೆಯಲ್ಲಿ Jiofai 4G ಡಿವೈಸ್ ಖರೀದಿಸಿದರೆ. ಇದರ ಜೊತೆ ನಿಮಗೊಂದು ಜಿಯೋ ಸಿಮ್ ಸಿಗಲಿದೆ.
Comments
Post a Comment