Job ನ್ಯೂಸ್‌: ದೆಹಲಿ ಮೆಟ್ರೊದಲ್ಲಿ ಭರ್ಜರಿ ಉದ್ಯೋಗ :-





ಅಸಿಸ್ಟೆಂಟ್‌ ಮ್ಯಾನೇಜರ್‌, ಸ್ಟೇಷನ್‌ ಕಂಟ್ರೋಲರ್‌, ಕಸ್ಟಮರ್‌ ರಿಲೇಷನ್ಸ್‌ ಆಫೀಸರ್‌, ಜೂನಿಯರ್‌ ಎಂಜಿನಿಯರ್‌, ಅಕೌಂಟ್‌ ಅಸಿಸ್ಟೆಂಟ್‌ ಸೇರಿದಂತೆ ಮೂರು ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. *ಖಾಲಿ ಹುದ್ದೆಗಳು 3431 ದೆಹಲಿ ಮೆಟ್ರೊ ರೈಲು ಕಾರ್ಪೋರೇಷನ್‌ ಭರ್ಜರಿ ಉದ್ಯೋಗಾವಕಾಶದ ಆಫರ್‌ ನೀಡಿದೆ. ಅಸಿಸ್ಟೆಂಟ್‌ ಮ್ಯಾನೇಜರ್‌, ಸ್ಟೇಷನ್‌ ಕಂಟ್ರೋಲರ್‌, ಕಸ್ಟಮರ್‌ ರಿಲೇಷನ್ಸ್‌ ಆಫೀಸರ್‌, ಜೂನಿಯರ್‌ ಎಂಜಿನಿಯರ್‌, ಅಕೌಂಟ್‌ ಅಸಿಸ್ಟೆಂಟ್‌ ಮತ್ತು ಮೆಂಟೇನರ್‌ ಸೇರಿದಂತೆ ಒಟ್ಟು 3431 ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಸೆಪ್ಟೆಂಬರ್‌ 15ರಿಂದಲೇ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅಕ್ಟೋಬರ್‌ 15 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಅಕ್ಟೋಬರ್‌ 18ರೊಳಗೆ ನಿಗದಿತ ಅರ್ಜಿ ಶುಲ್ಕವನ್ನೂ ಪಾವತಿಸುವಂತೆ ಡಿಎಂಆರ್‌ಸಿ ಸೂಚಿಸಿದೆ. ಕಾರ್ಯಕ್ಷೇತ್ರ ದೆಹಲಿಯಾಗಿದ್ದರೂ, ನಿಗದಿತ ವಿದ್ಯಾರ್ಹತೆ ಹೊಂದಿರುವ ಯಾವುದೇ ರಾಜ್ಯದ ಅಭ್ಯರ್ಥಿಗಳಾಗಿದ್ದರೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಸಿಸ್ಟೆಂಟ್‌ ಮ್ಯಾನೇಜರ್‌: ಎಲೆಕ್ಟ್ರಿಕಲ್‌, ಸಿವಿಲ್‌, ಆಪರೇಷನ್ಸ್‌, ಎಚ್‌ಆರ್‌, ಫೈನಾನ್ಸ್‌ ಮತ್ತು ಟ್ರೈನ್‌ ಆಪರೇಟರ್‌ ವಿಭಾಗದಲ್ಲಿ ಒಟ್ಟು 44 ಅಸಿಸ್ಟೆಂಟ್‌ ಮ್ಯಾನೇಜರ್‌ ಹುದ್ದೆಗಳಿಗೆ ನೇಮಕ ನಡೆಯಲಿದೆ. ಬಿಇ/ಬಿಟೆಕ್‌/ಐಸಿಡಬ್ಲ್ಯೂಎ/ಎಂಬಿಎಯನ್ನು ಪ್ರಥಮ ದರ್ಜೆಯೊಂದಿಗೆ ತೇರ್ಗಡೆಯಾದವರು ಅಸಿಸ್ಟೆಂಟ್‌ ಮ್ಯಾನೇಜರ್‌ಗಳಾಗಬಹುದು. ಸ್ಟೇಷನ್‌ ಕಂಟ್ರೋಲರ್‌/ಟ್ರೈನ್‌ ಆಪರೇಟರ್‌: 662 ಹುದ್ದೆಗಳು ಖಾಲಿ ಇವೆ. ಎಲೆಕ್ಟ್ರಿಕಲ್‌/ಎಲೆಕ್ಟ್ರಾನಿಕ್‌ ವಿಭಾಗದಲ್ಲಿ ಮೂರು ವರ್ಷದ ಎಂಜಿನಿಯರಿಂಗ್‌ ಡಿಪ್ಲೊಮಾ ಅಥವಾ ಬಿಎಸ್ಸಿ (ಪಿಸಿಎಂ) ವಿದ್ಯಾರ್ಹತೆ ಇರುವವರು ಅರ್ಜಿ ಸಲ್ಲಿಸಬಹುದು. ಕಸ್ಟಮರ್‌ ರಿಲೇಷನ್ಸ್‌ ಅಸಿಸ್ಟೆಂಟ್‌: ಯಾವುದೇ ವಿಷಯದಲ್ಲಿ ಮೂರು/ನಾಲ್ಕು ವರ್ಷದ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಕಸ್ಟಮರ್‌ ರಿಲೇಷನ್ಸ್‌ ಅಸಿಸ್ಟೆಂಟ್‌ಗಳಾಗಬಹುದು. ಒಟ್ಟು 1100 ಹುದ್ದೆಗಳು ಖಾಲಿ ಇವೆ. ಜೂನಿಯರ್‌ ಎಂಜಿನಿಯರ್‌ (ಎಲೆಕ್ಟ್ರಿಕಲ್‌/ಎಲೆಕ್ಟ್ರಾನಿಕ್ಸ್‌/ಮೆಕ್ಯಾನಿಕಲ್‌/ಸಿವಿಲ್‌): ಒಟ್ಟು 205 ಜೂನಿಯರ್‌ ಎಂಜಿನಿಯರ್‌ ಹುದ್ದೆಗಳು ಖಾಲಿ ಇವೆ. ಸಂಬಂಧಪಟ್ಟ ವಿಷಯಗಳಲ್ಲಿ ಡಿಪ್ಲೊಮಾ ಎಂಜಿನಿಯರಿಂಗ್‌ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಅಕೌಂಟ್‌ ಅಸಿಸ್ಟೆಂಟ್‌ ಮತ್ತು ಮೇಂಟೇನರ್‌: ಬಿಕಾಂ ಓದಿದವರು ಅಕೌಂಟ್‌ ಅಸಿಸ್ಟೆಂಟ್‌ ಹುದ್ದೆಗೂ ಮತ್ತು ಐಟಿಐ ಕೋರ್ಸ್‌ ಪೂರ್ಣಗೊಳಿಸಿದವರು ಮೆಂಟೇನರ್‌ ಹುದ್ದೆಗೂ ಅರ್ಜಿ ಸಲ್ಲಿಸಬಹುದು. ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯೋಮಿತಿ 28 ವರ್ಷ ಮೀರಿರಬಾರದು. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ. ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 400 ರೂಪಾಯಿ ಮತ್ತು ಎಸ್‌ಸಿ/ಎಸ್‌ಟಿ/ಅಂಗವಿಕಲ ಅಭ್ಯರ್ಥಿಗಳಿಗೆ 150 ರೂಪಾಯಿ ನಿಗದಿಪಡಿಸಲಾಗಿದೆ. ನೇಮಕ ಹೇಗೆ?: ಲಿಖಿತ ಪರೀಕ್ಷೆ, ಗ್ರೂಪ್‌ ಡಿಸ್‌ಕಷನ್‌ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಕೆಲವೊಂದು ಹುದ್ದೆಗಳಿಗೆ ಸಂದರ್ಶನ ಇರುವುದಿಲ್ಲ. ಆಯ್ಕೆಗೊಂಡ ಬಳಿಕ ಎರಡು ವರ್ಷ ಪ್ರೊಬೇಷನರಿ ಅವಧಿ ಇರುತ್ತದೆ. ಕ್ವಿಕ್‌ ಲುಕ್‌ -ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್‌ 15, 2016 -ಡಿಪ್ಲೊಮಾ/ಪದವೀಧರರಿಗೆ ಅವಕಾಶ -ವಿವರಗಳನ್ನು ಪಡೆಯಲು: www.delhimetrorail.com ಆಯುಷ್‌ ಇಲಾಖೆಯಲ್ಲಿ ಅವಕಾಶ -ಅರ್ಜಿ ಸಲ್ಲಿಸಲು ಕೊನೆ ದಿನ: ಅಕ್ಟೋಬರ್‌ 13, 2016 -ಧಿ-ಆಯುರ್ವೇದ/ಹೋಮಿಯೋಪತಿ ವಿಭಾಗಗಳಲ್ಲಿ ಕೆಲಸ -ವಿವರಗಳಿಗೆ: www.karnataka.gov.in ಕರ್ನಾಟಕ ಆಯುಷ್‌ ಇಲಾಖೆ ಆಯುರ್ವೇದ ಮತ್ತು ಹೋಮಿಯೋಪತಿ ವಿಭಾಗಗಳಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳಿಗೆ ಪದವಿ ಪಡೆದಿರುವ ಮತ್ತು ಸ್ನಾತಕೋತ್ತರ ಪದವಿ ಓದಿರುವ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಯಾವ ವಿಭಾಗಗಳಲ್ಲಿ ನೇಮಕ ಆಯುರ್ವೇದ: ಸಿದ್ಧಾಂತ ಮತ್ತು ಸಂಹಿತ, ಕ್ರಿಯಾ ಶಾರೀರ,ದ್ರವ್ಯಗುಣ, ರಸಾಸ್ತ್ರ ಮತ್ತು ಬೈಶಾಜ್ಯ ಕಲ್ಪನ, ಪ್ರಸೂತಿ ತಂತ್ರ ಮತ್ತು ಸ್ತ್ರೀ ರೋಗ, ಕೌಮರಾಬ್ರಿತ್ಯ ಮತ್ತು ಸಂಸ್ಕೃತ. ಹೋಮಿಯೋಪತಿ: ಅನಾಟಮಿ, ಪೆಥಾಲಜಿ-ಮೈಕ್ರೋಬಯಾಲಜಿ, ಫೋರೆನ್ಸಿಕ್‌ ಮೆಡಿಸಿನ್‌-ಟಾಕ್ಸಿಕಾಲಜಿ, ಸರ್ಜರಿ ಮತ್ತು ಒಬೆಸ್ಟ್ರಿಕ್ಸ್‌-ಗೈನಾಲಜಿ. ನೇಚರ್‌ ಕೇರ್‌/ಯೋಗ: ನ್ಯೂರೋಪತಿ, ಯೋಗ, ಅನಾಟಮಿ ಮತ್ತು ಫಿಶಿಯೋಲಜಿ ಎಷ್ಟು ಹುದ್ದೆಗಳು: ನ್ಯೂರೋಪತಿ ಮತ್ತು ಯೋಗ ವಿಭಾಗಗಳಲ್ಲಿ ತಲಾ ನಾಲ್ಕು, ಉಳಿದೆಲ್ಲಾ ವಿಭಾಗಗಳಲ್ಲಿ ತಲಾ ಒಂದೊಂದು ಹುದ್ದೆಗಳು ಸೇರಿ ಒಟ್ಟು 21 ಹುದ್ದೆಗಳು ಖಾಲಿ ಇವೆ. ಅರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯುರ್ವೇದ ಮತ್ತು ಹೋಮಿಯೋಪತಿ ವಿಷಯಗಳಲ್ಲಿ ಪದವಿ ಓದಿರಬೇಕು. ಜೊತೆಗೆ ಆಯಾ ವಿಷಯಗಳಿಗೆ ಸಂಬಂಧಪಟ್ಟಂತೆ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 18ರಿಂದ 40 ವರ್ಷದೊಳಗಿರಬೇಕು. ಏಮ್ಸ್‌ನಲ್ಲಿ ನೇಮಕ *ಒಟ್ಟು ಹುದ್ದೆಗಳು 72. *ನೇರ ಸಂದರ್ಶನದ ಮೂಲಕ ಆಯ್ಕೆ ಹೃಷಿಕೇಶ್‌ದಲ್ಲಿರುವ ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ನಲ್ಲಿ (ಏಮ್ಸ್‌) ಖಾಲಿ ಇರುವ 72 ಜೂನಿಯರ್‌ ರೆಸಿಡೆಂಟ್‌ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ಏರ್ಪಡಿಸಲಾಗಿದೆ. ವಿದ್ಯಾರ್ಹತೆ: ಮೆಡಿಕಲ್‌ ಕೌನ್ಸಿಲ್‌ ಆಫ್‌ ಇಂಡಿಯಾದ ಮಾನ್ಯತೆ ಪಡೆದ ಇನ್‌ಸ್ಟಿಟ್ಯೂಟ್‌ನಲ್ಲಿ ಎಂಬಿಬಿಎಸ್‌ ಅಥವಾ ತತ್ಸಮಾನ ಪದವಿಯನ್ನು ಪೂರ್ಣಗೊಳಿಸಬೇಕು. ವಯೋಮಿತಿ: ಗರಿಷ್ಠ ವಯೋಮಿತಿ 30 ವರ್ಷವಾಗಿದ್ದು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ. ಅರ್ಜಿ ಶುಲ್ಕ: ಜನರಲ್‌ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು, ಏಮ್ಸ್‌ ಹೃಷಿಕೇಶ್‌ ಹೆಸರಿನಲ್ಲಿ ಡಿಡಿ ತೆಗೆದು ಶುಲ್ಕ ಪಾವತಿಸಬಹುದು. ಎಸ್‌ಸಿ/ಎಸ್‌ಟಿ/ಅಂಗವಿಕಲ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯ್ತಿ ಇದೆ. ಸಂದರ್ಶನ ದಿನಾಂಕ: 2016ರ ಸೆಪ್ಟೆಂಬರ್‌ 21. ಸಮಯ: ಬೆಳಗ್ಗೆ 10 ಗಂಟೆಗೆ. ಸ್ಥಳ: Director's Board Room of AIIMS, Rishikesh. ಹೆಚ್ಚಿನ ಮಾಹಿತಿಗೆ ವೆಬ್‌ವಿಳಾಸ: http://aiimsrishikesh.edu.in * ಐಜಿಐಎಂಎಸ್‌ನಲ್ಲಿ ಉದ್ಯೋಗಾವಕಾಶ ಇಂದಿರಾ ಗಾಂಧಿ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ನಲ್ಲಿ (ಐಜಿಐಎಂಎಸ್‌) ವಿವಿಧ ಹುದ್ದೆಗಳು ಖಾಲಿ ಇದ್ದು ಆಸಕ್ತರು 2016ರ ಸೆಪ್ಟೆಂಬರ್‌ 28ರೊಳಗೆ ಅರ್ಜಿ ಸಲ್ಲಿಸಬಹುದು. ಯಾವ್ಯಾವ ಹುದ್ದೆಗಳಿವೆ? ಪ್ರಿನ್ಸಿಪಾಲ್‌-01, ಪ್ರೊಫೆಸರ್‌-03, ಅಸೋಸಿಯೇಟ್‌ ಪ್ರೊಫೆಸರ್‌-03, ಅಡಿಷನಲ್‌ ಪ್ರೊಫೆಸರ್‌-02, ಅಸಿಸ್ಟೆಂಟ್‌ ಪ್ರೊಫೆಸರ್‌-16, ಲೇಡಿ ಮೆಡಿಕಲ್‌ ಆಫೀಸರ್‌-02, ಕ್ಯಾಶುಲ್ಟಿ ಮೆಡಿಕಲ್‌ ಆಫೀಸರ್‌-04 ಹಾಗೂ ಜೂನಿಯರ್‌ ಎಂಜಿನಿಯರ್‌-06 ಹುದ್ದೆಗಳು ಖಾಲಿ ಇದ್ದು, ಆಯಾ ಹುದ್ದೆಗೆ ಸಂಬಂಧಪಟ್ಟ ವಿದ್ಯಾರ್ಹತೆ ಹಾಗೂ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಜಿ ಶುಲ್ಕ: ಜನರಲ್‌, ಒಬಿಸಿ ಅಭ್ಯರ್ಥಿಗಳಿಗೆ 500 ರೂ. ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 125 ರೂ. ಅರ್ಜಿ ಶುಲ್ಕವಿದ್ದು, ಡೈರೆಕ್ಟರ್‌, ಐಜಿಐಎಂಎಸ್‌, ಪಾಟ್ನಾ ಈ ಹೆಸರಿನಲ್ಲಿ ಡಿಡಿ ತೆಗೆದು ಶುಲ್ಕವನ್ನು ಪಾವತಿಸಬೇಕು. ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಮಾದರಿಯು ಐಜಿಐಎಂಎಸ್‌ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಅದನ್ನು ಡೌನ್‌ಲೋಡ್‌ ಮಾ ಡಿಕೊಂಡು ಭರ್ತಿ ಮಾಡಿ, ಅಗತ್ಯ ದಾಖಲೆಗಳು, ಇತ್ತೀಚಿನ 2 ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ ಹಾಗೂ ಡಿಡಿಯನ್ನು Director, IGIMS, Patna- 14 ಈ ವಿಳಾಸಕ್ಕೆ ಕಳುಹಿಸಿ. ಹೆಚ್ಚಿನ ಮಾಹಿತಿಗೆ ವೆಬ್‌: www.igims.org ನೀವೂ ಅರ್ಜಿ ಸಲ್ಲಿಸಿ *ಆರ್‌ಎಲ್‌ಡಿಎ ರೈಲು ಲ್ಯಾಂಡ್‌ ಡೆವಲಪ್‌ಮೆಂಟ್‌ ಅಥಾರಿಟಿಯಲ್ಲಿ 20 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಜನರಲ್‌ ಮ್ಯಾನೇಜರ್‌ ಮತ್ತು ಮ್ಯಾನೇಜರ್‌ ಹುದ್ದೆಗಳು ಖಾಲಿ ಇದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಕ್ಟೋಬರ್‌ 10ರೊಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ಸಂಬಂಧಪಟ್ಟ ವಿಷಯಗಳಲ್ಲಿ ಪದವಿ/ಸ್ನಾತಕೋತ್ತರ ಪದವಿ ಪಡೆದಿದ್ದು, ನಿಗದಿತ ಸೇವಾನುಭವ ಇದ್ದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ವಿವರಗಳಿಗೆ: www.rlda.indianrailways.gov.in *ಬನ್ನೇರುಘಟ್ಟ ಜೈವಿಕ ಉದ್ಯಾನವನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಭದ್ರತೆಗಾಗಿ ಮಾಜಿ ಸೈನಿಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ಒಟ್ಟು 10 ಹುದ್ದೆಗಳು ಖಾಲಿ ಇವೆ. ಸುಬೇದಾರ್‌/ಹವಿಲ್ದಾರ್‌ ಆಗಿ ಸಶಸ್ತ್ರ ಸೇನಾ ಪಡೆಯಲ್ಲಿ ಕಾರ್ಯನಿರ್ವಹಿಸಿರುವ ಅಭ್ಯರ್ಥಿಗಳು ಮಾತ್ರ ನೇಮಿಸಿಕೊಳ್ಳುತ್ತಾರೆ. ಈ ಪ್ರಯುಕ್ತ ಸೆಪ್ಟೆಂಬರ್‌ 26ರಂದು ಬೆಳಗ್ಗೆ 11.30ಕ್ಕೆ ಸಂದರ್ಶನ ನಡೆಯಲಿದ್ದು, ಆಸಕ್ತರು ಭಾಗವಹಿಸುವಂತೆ ಸೂಚಿಸಲಾಗಿದೆ. ವಿವರಗಳಿಗೆ ದೂರವಾಣಿ: 8884414245 ಅಥವಾ 8884414268

ಮುಂದೆ ಕಥೆ »
ರೈಟ್ಸ್‌ ಲಿಮಿಟೆಡ್‌ ನಲ್ಲಿ ನೇಮಕ


Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು