KPTCL 1921 ಸಹಾಯಕ, ಕಿರಿಯ ಎಂಜಿನಿಯರ್ ಮತ್ತು ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ:-


ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ.

ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಸಹಾಯಕ ಎಂಜಿನಿಯರ್ (ವಿದ್ಯುತ್/ಸಿವಿಲ್), ಕಿರಿಯ ಎಂಜಿನಿಯರ್ (ಸಿವಿಲ್) ಮತ್ತು ಕಿರಿಯ ಸಹಾಯಕ, ಸಹಾಯಕ ಲೆಕ್ಕಾಧಿಕಾರಿ ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಒಟ್ಟು 1921 ಹುದ್ದೆಗಳು ಖಾಲಿ ಇವೆ. ಈ ಎಲ್ಲ ಹುದ್ದೆಗಳು ಮೀಸಲಾತಿಯನ್ವಯ ಹಂಚಿಕೆಯಾಗಿದ್ದು, ಹೈ.ಕ. ಭಾಗದ ಅಭ್ಯರ್ಥಿಗಳಿಗೂ ಮೀಸಲಾತಿ ನೀಡಲಾಗಿದೆ.

ಇದೇ ಸೆಪ್ಟೆಂಬರ್ 8ರಂದು ಕಂಪನಿಗಳ ವೆಬ್ಸೈಟ್ನಲ್ಲಿ ಹುದ್ದೆಗಳ ಕುರಿತಾದ ಸಂಪೂರ್ಣ ವಿವರಗಳನ್ನು ಪ್ರಕಟಿಸಲಾಗುತ್ತದೆ.

*ಯಾವ ಹುದ್ದೆ ಎಷ್ಟು?* ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್-52, ಸಹಾಯಕ ಎಂಜಿನಿಯರ್ (ವಿದ್ಯುತ್/ಸಿವಿಲ್)-440, ಕಿರಿಯ ಎಂಜಿನಿಯರ್ (ವಿದ್ಯುತ್/ಸಿವಿಲ್): 421, ಸಹಾಯಕ ಲೆಕ್ಕಾಧಿಕಾರಿ-296, ಸಹಾಯಕ-422 ಮತ್ತು ಕಿರಿಯ ಸಹಾಯಕ-290

*ಅರ್ಹತೆಗಳೇನು?*

ಸಹಾಯಕ ಎಂಜಿನಿಯರ್ ಮತ್ತು ಸಹಾಯಕ ಕಾರ್ಯನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದಾದರೂ ಅಂಗೀಕೃತ ವಿವಿಯಿಂದ ಬಿ.ಇ ಪದವಿ ಅಥವಾ ಎಎಂಐಇ (ಭಾರತ) ನಡೆಸುವ ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರಬೇಕು. ಅಂತೆಯೇ ಸಿವಿಲ್ ವಿಭಾಗದಲ್ಲಿ ಸಹಾಯಕ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಸಿವಿಲ್ ವಿಭಾಗದಲ್ಲಿ ಬಿ.ಇ ಪದವಿ ಅಥವಾ ಎಎಂಐಇಯ ಎ ಮತ್ತು ಬಿ (ಸಿವಿಲ್) ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.

ಕಿರಿಯ ಎಂಜಿನಿಯರ್ಗಳ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಡಿಪ್ಲೊಮಾ (ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಆಫ್ ಎ ಪಾಲಿಟೆಕ್ನಿಕ್) ಪಡೆದರೆ ಸಾಕು. ಇನ್ನು ಸಹಾಯಕ ಲೆಕ್ಕಾಧಿಕಾರಿ ಹುದ್ದೆಗಳ ಆಕಾಂಕ್ಷಿಗಳು ಫೈನಾನ್ಸ್ ವಿಭಾಗದಲ್ಲಿ ಎಂ.ಕಾಂ / ಎಂ.ಬಿ.ಎ ಅಥವಾ ಐಸಿಡಬ್ಲ್ಯೂಎ/ಸಿ.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಇನ್ನುಳಿದ ಹುದ್ದೆಗಳಿಗೆ ನಿಗದಿಪಡಿಸಿದ ವಿದ್ಯಾರ್ಹತೆಯ ಸಂಪೂರ್ಣ ವಿವರಗಳು ಸೆಪ್ಟೆಂಬರ್ 8ರ ನಂತರ ಅಭ್ಯರ್ಥಿಗಳಿಗೆ ಲಭ್ಯವಾಗಲಿವೆ.

*ವಯೋಮಿತಿ*

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷಗಳು. ಗರಿಷ್ಠ ವಯೋಮಿತಿ; ಸಾಮಾನ್ಯ ವರ್ಗ-35, ಪ್ರವರ್ಗಗಳಾದ 2ಎ, 2ಬಿ, 3ಎ ಮತ್ತು 3ಬಿ-38 ಹಾಗೂ ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 40 ವರ್ಷವೆಂದು ನಿಗದಿಪಡಿಸಲಾಗಿದೆ.

* ಆನ್ಲೈನ್ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.

* ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ.

*ರಾಜ್ಯದ 8ರಿಂದ 10 ಕಡೆ ಪರೀಕ್ಷಾ ಕೇಂದ್ರ ಇರಲಿದೆ.

ಕ್ವಿಕ್ ಲುಕ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : ಸೆಪ್ಟೆಂಬರ್ 8, 2016

*ಹೆಲ್ಪ್ ಲೈನ್* : 080ಧಿ-22211527/22392668

*ಮಾಹಿತಿಗೆ ವೆಬ್ ವಿಳಾಸ*
www.kptcl.com,
www.bescom.org,
www.hescom.in, www.cescmysore.org
www.gescom.in

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು