ಕೇಂದ್ರ ನೌಕರ,ಪಿಂಚಣಿದಾರರ ಭತ್ಯೆಯಲ್ಲಿ 2% ಹೆಚ್ಚಳ
ದೆಹಲಿ: ದೀಪಾವಳಿ ಹಬ್ಬದ ನಿಮಿತ್ತ ಕೇಂದ್ರ ಕ್ಯಾಬಿನೆಟ್ 50 ಲಕ್ಷ ಸರಕಾರಿ ನೌಕರರು ಮತ್ತು 58 ಲಕ್ಷ ಪಿಂಚಣಿದಾರರಿಗೆ ಜುಲೈ 1, 2016 ರಿಂದ ಜಾರಿಗೆ ಬರುವಂತೆ ದಿನ ಭತ್ಯೆ ಶೇ.2 ರಷ್ಟು ಹೆಚ್ಚಳ ಮಾಡಿದೆ.
ಈ ಮೊದಲು ಸರಕಾರವು ದಿನಭತ್ಯೆಯನ್ನು ಮೂಲ ಭತ್ಯೆಯ ಶೇ. 6 ರಿಂದ ಶೇ. 125 ಹೆಚ್ಚಿಸಿತ್ತು. ಅನಂತರ ಏಳನೇ ಪಾವತಿ ಆಯೋಗದ ವರದಿ ಅನುಷ್ಠಾನ ಮಾಡುವ ಸಂದರ್ಭ ದಿನಭತ್ಯೆಯನ್ನು ಮೂಲಭತ್ಯೆಯಲ್ಲಿ ಸೇರಿಸಲಾಗಿತ್ತು.
ಕೇಂದ್ರ ಸರಕಾರಿ ನೌಕರರು ದಿನಭತ್ಯೆಯನ್ನು ಶೇ. 3 ಕ್ಕೆ ಏರಿಸ ಬೇಕೆಂದು ಬೇಡಿಕೆ ಇಟ್ಟಿದ್ದಾರೆಂಬ ವರದಿ ಮೂಲಗಳಿಂದ ತಿಳಿದು ಬಂದಿದೆ.
Comments
Post a Comment