ಗೂಗಲ್ ವಿಜ್ಞಾನ ಉತ್ಸವ-2016 ಫೈನಲ್ ನಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು
ಗೂಗಲ್ ವಿಜ್ಞಾನ ಉತ್ಸವ-2016 ಫೈನಲ್ ನಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು
ನವದೆಹಲಿ: ಗೂಗಲ್ ವಿಜ್ಞಾನ ಉತ್ಸವ-2016 ರ ಫೈನಲ್ಸ್ ಗೆ ಭಾರತದ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
50,000 ಡಾಲರ್ ಸ್ಕಾಲರ್ ಶಿಪ್ ಗೆಲ್ಲಲು ಅವಕಾಶ ಇರುವ ಗೂಗಲ್ ವಿಜ್ಞಾನ ಉತ್ಸವದ ಫೈನಲ್ ನಲ್ಲಿ ಭಾಗವಹಿಸುತ್ತಿರುವ 16 ಸ್ಪರ್ಧಿಗಳ ಪೈಕಿ ಭಾರತೀಯರಾದ ಶ್ರೇಯಾಂಕ್ ಹಾಗೂ ಮನಿಷಾ ಫಾತಿಮಾ ಸಹ ಇದ್ದು, ಸೆ.27 ರಂದು ಫೈನಲ್ ನಲ್ಲಿ ಸ್ಪರ್ಧಿಸಲಿದ್ದಾರೆ.
16 ವರ್ಷದ ಶ್ರೇಯಾಂಕ್ ಬೆಂಗಳೂರಿನ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಯಾಗಿದ್ದು ಕೀಪ್ ಟ್ಯಾಬ್ ಎಂಬ ಶೀರ್ಷಿಕೆಯಡಿ ಆಳವಾದ ಕಲಿಕೆ ಕ್ರಮಾವಳಿಗಳ ಕುರಿತಾದ ಪ್ರಾಜೆಕ್ಟ್ ನ್ನು ಸಲ್ಲಿಸಿದ್ದಾರೆ. 15 ವರ್ಷದ ಮನಿಷಾ ಫಾತಿಮಾ, ಹೈದರಾಬಾದ್ ನ ಸಾಧು ವಾಸ್ವಾನಿ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿಯಾಗಿದ್ದು, ಭತ್ತದ ಗದ್ದೆಗಳಿಗೆ ನೆರವಾಗುವ ಸ್ವಯಂಚಾಲಿತ ನೀರಿನ ನಿರ್ವಹಣೆ ವ್ಯವಸ್ಥೆಯ ಕುರಿತು ಯೋಜನೆಯನ್ನು ಸಲ್ಲಿಸಿದ್ದಾರೆ. ಗೂಗಲ್ ವಿಜ್ಞಾನ ಉತ್ಸವ-2016 ಕ್ಕಾಗಿ ವಿಶ್ವದ 9 ರಾಷ್ಟ್ರಗಳಿಂದ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅತ್ಯುತ್ತಮವಾದ 16 ಯೋಜನೆಗಳನ್ನು ವಿದ್ಯಾರ್ಥಿಗಳಿಂದ ಪಡೆಯಲಾಗಿದ್ದು, ಸೆ.27 ರಂದು ನಡೆಯಲಿರುವ ಫೈನಲ್ ನಲ್ಲಿ ಭಾಗವಹಿಸಲು ಆಯ್ಕೆಯಾಗಿರುವ 16 ಸ್ಪರ್ಧಿಗಳು ಪೋಷಕರೊಂದಿಗೆ ಕ್ಯಾಲಿಫೋರ್ನಿಯಾಗೆ ತೆರಳಲಿದ್ದಾರೆ.
Comments
Post a Comment