ಮತ್ತೆ ಮತ್ತೆ ಬಿಸಿ ಮಾಡಲೇಬಾರದ ಆಹಾರ ಪದಾರ್ಥಗಳು:
ಮನೆಗಳಲ್ಲಿ ಮುನ್ನಾದಿನದ ಆಹಾರ ಪದಾರ್ಥಗಳು
ಉಳಿದುಕೊಂಡಿದ್ದರೆ ಅವು
ವ್ಯರ್ಥವಾಗದಂತೆ ಮತ್ತೊಮ್ಮೆ ಬಿಸಿ
ಮಾಡುವುದು ಮಾಮೂಲು. ಕೆಲವರು ಇದನ್ನು ವಿರೋಧಿಸುತ್ತಾರಾದರೂ
ಹೆಚ್ಚಿನವರು ಯಾವುದೇ ತಕರಾರಿಲ್ಲದೇ ಅದನ್ನೇ ಬಿಸಿ
ಮಾಡಿಕೊಂಡು ಸೇವಿಸುತ್ತಾರೆ. ಇದು
ತೀರಾ ತೆಗೆದುಹಾಕುವಂಥದ್ದೇನಲ್ಲ. ಆದರೆ
ಆಹಾರವನ್ನು ಮತ್ತೆ ಮತ್ತೆ ಬಿಸಿಮಾಡಿ ಸೇವಿಸಿದರೆ ಅದು
ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ ಎಂಬ
ಕಟುಸತ್ಯ ಹೆಚ್ಚಿನವರಿಗೆ ಗೊತ್ತೇ ಇಲ್ಲ
ಎನ್ನುವುದು ಇಲ್ಲಿಯ ಸಮಸ್ಯೆ.
ಮನೆಗಳಲ್ಲಿ ರಜಾದಿನಗಳ ಡಿನ್ನರ್,ಹುಟ್ಟುಹಬ್ಬದ ಪಾರ್ಟಿ ಅಥವಾ
ಇನ್ಯಾವುದೇ ಸಮಾರಂಭದ ಬಳಿಕ ಆಹಾರ ಪದಾರ್ಥಗಳು ಬಾಕಿ
ಉಳಿದುಕೊಂಡಿದ್ದರೆ ಅವುಗಳನ್ನು ಮತ್ತೆ
ಬಿಸಿ ಮಾಡುವ ಸಂದರ್ಭದಲ್ಲಿ ಈ ಕೆಳಗೆ ಉಲ್ಲೇಖಿಸಲಾಗಿರುವ
ಆಹಾರಗಳು ಅವುಗಳಲ್ಲಿಲ್ಲ ಎನ್ನುವುದನ್ನು
ಖಚಿತಪಡಿಸಿಕೊಳ್ಳಿ........
ಬೀಟ್ರೂಟ್,ಎಲೆರೂಪದ ತರಕಾರಿಗಳು
ಬೀಟ್ರೂಟ್ ಮತ್ತು ಬಸಳೆ,ಸಲಾಡ್ ಪತ್ತಾ,ಅಜವಾನದ
ಎಲೆಯಂತಹ ತರಕಾರಿಗಳು ಸಮೃದ್ಧ ನೈಟ್ರೈಟ್ಗಳನ್ನು
ಹೊಂದಿದ್ದು, ನಮ್ಮ ಶರೀರಕ್ಕೆ
ಪೂರಕವಾಗಿವೆ. ಆದರೆ ಈ ತರಕಾರಿಗಳ ಪದಾರ್ಥಗಳನ್ನು
ಮತ್ತೊಮ್ಮೆ ಬಿಸಿ ಮಾಡಿದಾಗ ಈ ನೈಟ್ರೈಟ್ಗಳು
ನೈಟ್ರೋಸಮೈನ್ಗಳಾಗಿ ಪರಿವರ್ತನೆಗೊಳ್ಳುತ್ತವೆ
ಮತ್ತು ಈ ನೈಟ್ರೋಸಮೈನ್ಗಳು ಕ್ಯಾನ್ಸರ್ಕಾರಕಗಳಾಗಿವೆ.
ಹೀಗಾಗಿ ಬೀಟ್ರೂಟ್,ಎಲೆರೂಪದ ತರಕಾರಿಗಳ
ಪದಾರ್ಥಗಳು ಬಾಕಿಯುಳಿದುಕೊಂಡಿದ್ದರೂ
ಅವುಗಳನ್ನು ಮತ್ತೆ ಬಿಸಿ ಮಾಡುವ ವಿಚಾರವನ್ನು ಬಿಟ್ಟುಬಿಡಿ.
ಮೊಟ್ಟೆ ಮತ್ತು ಕೋಳಿಮಾಂಸ
ಮೊಟ್ಟೆಗಳನ್ನೊಳಗೊ
ಆಹಾರ ಪದಾರ್ಥಗಳನ್ನು ಮತ್ತೆ ಬಿಸಿ ಮಾಡಿ ಸೇವಿಸಿದರೆ
ತೊಂದರೆಯೇನಿಲ್ಲ. ಆದರೆ
ಮೊಟ್ಟೆಗಳನ್ನು ಮಿಶ್ರಗೊಳಿಸಿದ
ಅಥವಾ ಬೇಯಿಸಿದ ಮೊಟ್ಟೆಗಳನ್ನು ಹಾಕಿರುವ
ಆಹಾರ ಪದಾರ್ಥಗಳನ್ನು ಬಿಸಿ ಮಾಡಲೇಬೇಡಿ. ಬೇಯಿಸಿದ
ಮೊಟ್ಟೆಗಳನ್ನು ಹೆಚ್ಚಿನ
ಉಷ್ಣಾಂಶದಲ್ಲಿ ಮತ್ತೆ ಕಾಯಿಸಿದರೆ ಅವು
ವಿಷಯುಕ್ತವಾಗುತ್ತವೆ.
ಮುನ್ನಾದಿನದ ಚಿಕನ್ ಪದಾರ್ಥವನ್ನು ಬಿಸಿ ಮಾಡಿ ಸೇವಿಸುವುದು
ಅತ್ಯಂತ ಅಪಾಯಕಾರಿ ಎನ್ನುವುದು ಹೆಚ್ಚಿನ ಜನರಿಗೆ
ಗೊತ್ತಿಲ್ಲ. ಮತ್ತೆ ಮತ್ತೆ ಬಿಸಿ ಮಾಡಿದಾಗ
ಚಿಕನ್ನಲ್ಲಿರುವ ಪ್ರೋಟಿನ್
ರೂಪಾಂತರಗೊಳ್ಳುತ್ತದೆ ಮತ್ತು
ಅಜೀರ್ಣ ಸಮಸ್ಯೆ ಯನ್ನುಂಟು ಮಾಡುತ್ತದೆ.
ಚಿಕನ್ನಲ್ಲಿ ಮಟನ್ ಅಥವಾ ಇತರ ಯಾವುದೇ
ಕೆಂಪುಮಾಂಸಕ್ಕಿಂತಲೂ ಹೆಚ್ಚಿನ ಪ್ರೋಟಿನ್
ಇರುತ್ತದೆ ಎನ್ನುವುದನ್ನು ಮರೆಯಬೇಡಿ. ಅಂದ ಹಾಗೆ
ಮುನ್ನಾದಿನದ ಚಿಕನ್ ಪದಾರ್ಥ
ಉಳಿದುಕೊಂಡಿದ್ದರೆ ಅವುಗಳನ್ನು
ಎಸೆಯಬೇಕಾಗಿಲ್ಲ. ತನ್ನಗಿರುವಂತೆಯೇ ಅದರ ರುಚಿಯನ್ನು
ಆಸ್ವಾದಿಸಿ. ಅದಾಗದು ಎಂದಿದ್ದರೆ ಸ್ಟವ್ನ ಸಣ್ಣ
ಉರಿಯಲ್ಲಿ ಅತ್ಯಂತ ಕಡಿಮೆ ಉಷ್ಣಾಂಶದಲ್ಲಿ
ಬಿಸಿ ಮಾಡಿಕೊಳ್ಳಿ.
ಬಟಾಟೆ
ಪ್ರತಿಯೊಂದು ಮನೆಯ
ಅಡುಗೆಕೋಣೆಯಲ್ಲಿ ಆಪತ್ಬಾಂಧವ ತರಕಾರಿಯಾಗಿ ಬಟಾಟೆ
ಇದ್ದೇ ಇರುತ್ತದೆ. ಸಮೃದ್ಧ ಪಿಷ್ಟವನ್ನು
ಹೊಂದಿರುವ ಬಟಾಟೆಯಲ್ಲಿನ
ಪೋಷಕಾಂಶ ಒಂದು ದಿನ ಹಾಗೆಯೇ ಇಟ್ಟರೆ
ಗಣನೀಯವಾಗಿ ಕಡಿಮೆಯಾಗುತ್ತದೆ. ಅದನ್ನು ಮತ್ತೆ
ಬಿಸಿ ಮಾಡುವುದರಿಂದ ಅದು ವಿಷಯುಕ್ತವಾಗುತ್ತದೆ ಮತ್ತು
ಸೇವನೆಯ ಬಳಿಕ ಗಂಭೀರ ಆರೋಗ್ಯ
ಸಮಸ್ಯೆಗೆ ಕಾರಣವಾಗಬಲ್ಲುದು.
ಅಣಬೆ
ವಿಟಾಮಿನ್ಗಳು ಮತ್ತು ಖನಿಜಾಂಶಗಳ ಆಗರವಾಗಿರುವ ಅಣಬೆ
ನಿಜಕ್ಕೂ ಉತ್ತಮ ಪೌಷ್ಟಿಕ ಆಹಾರವಾಗಿದೆ. ಆದರೆ ಮುನ್ನಾದಿನದ
ಅಣಬೆ ಪದಾರ್ಥ ಉಳಿದುಕೊಂಡಿದ್ದರೆ
ಅದನ್ನು ಮತ್ತೆ ಬಿಸಿ ಮಾಡುವ ಗೋಜಿಗೆ ಹೋಗಲೇಬೇಡಿ. ಹಾಗೆ
ಬಿಸಿಗೊಂಡ ಅಣಬೆ ಪದಾರ್ಥ
ಗಂಭೀರ ಅಜೀರ್ಣ
ಸಮಸ್ಯೆಗಳನ್ನುಂಟು ಮಾಡುತ್ತದೆ.
ನಿಮ್ಮ ಕುಟುಂಬದ ಸದಸ್ಯರಿಗೆ ವಿಷವನ್ನು ತಿನ್ನಿಸಲು
ನೀವು ಖಂಡಿತವಾಗಿಯೂ ಬಯಸುವುದಿಲ್ಲ.
ಹೀಗಾಗಿ ಇನ್ನು ಮುಂದೆ ತಂಗಳು ಆಹಾರವನ್ನು
ಮತ್ತೆ ಬಿಸಿ ಮಾಡುವ ಮುನ್ನ ಹಾಗೆ ಮಾಡಿದರೆ ಅವು
ಸುರಕ್ಷಿತವಾಗಿರುತ್ತವೆಯೇ ಎನ್ನುವುದನ್ನು
ತಿಳಿದುಕೊಳ್ಳಿ...
Comments
Post a Comment