ದೀಪಾವಳಿ ಗಿಫ್ಟ್ :ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ
ಬೆಂಗಳೂರು, ಅಕ್ಟೋಬರ್ 21: ಸರ್ಕಾರಿ ನೌಕರರಿಗೆ ದೀಪಾವಳಿ ಹಬ್ಬದ ಕೊಡುಗೆಯಾಗಿ ಕಾಂಗ್ರೆಸ್ ಸರ್ಕಾರ ಶುಕ್ರವಾರ ಸಂಜೆ ಸಿಹಿ ಸುದ್ದಿ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಟ್ಟಿಭತ್ಯೆಯನ್ನು 2012ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಶೇ.4.25ರಷ್ಟು ಏರಿಕೆ ಮಾಡಿದ್ದಾರೆ. ಈ ಬಗ್ಗೆ ಹಣಕಾಸು ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಸೌರಮಾನ ಯುಗಾದಿ ನಂತರ ದೀಪಾವಳಿ ಹಬ್ಬಕ್ಕೆ ಈ ಗಿಫ್ಟ್ ಸಿಕ್ಕಿದೆ.
ಜುಲೈ 1, 2016ರಿಂದ ಪೂರ್ವಾನ್ವಯವಾಗುವಂತೆ ತುಟ್ಟಿಭತ್ಯೆ ಹೆಚ್ಚಳ ಆದೇಶ ಜಾರಿಗೆ ಬರಲಿದೆ. ಇದರಿಂದಾಗಿ 8.5 ಲಕ್ಷ ನೌಕರರ ಮಾಸಿಕ ವೇತನ ಹೆಚ್ಚಳವಾಗಲಿದೆ. []
ಕೇಂದ್ರ ಸರ್ಕಾರ ತನ್ನ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಿದ ಬೆನ್ನಲ್ಲೇ ರಾಜ್ಯಸರ್ಕಾರವೂ ನೌಕರರ ತುಟ್ಟಿಭತ್ಯೆ ಮಾಡುವ ನಿರೀಕ್ಷೆಯಿತ್ತು. ಆದರೆ, ಸಿದ್ದರಾಮಯ್ಯ ಸರ್ಕಾರ ವಿಳಂಬ ನೀತಿ ಅನುಸರಿಸಿತು.
ಅಲ್ಲದೆ, ಏಳನೇ ವೇತನ ಆಯೋಗದ ಶಿಫಾರಸು ಜಾರಿ ಮಾಡಲು ಮುಂದಾಗಿಲ್ಲದಿರುವುದು ನೌಕರರ ಅಸಮಾಧಾನಕ್ಕೆ ಕಾರಣವಾಗಿತ್ತು. ಏಪ್ರಿಲ್ 14ರಂದು ಮೂಲ ವೇತನದ ಶೇ. 33 ರಿಂದ ಶೇ36ರಷ್ಟು ಹೆಚ್ಚಿನ ಸಂಬಳ ಏರಿಕೆಯಾಗಿತ್ತು. ಈಗ ಶೇ.4.25ರಷ್ಟು ಏರಿಕೆ ಮಾಡಿ, ಶೇ 40.25ಗೆ ತರಲಾಗಿದೆ.
ಸರ್ಕಾರಿ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರು, ರಾಜ್ಯ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಪಡೆಯುವವರು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರಿಗೂ ಈ ಹೆಚ್ಚಳ ಅನ್ವಯವಾಗಲಿದೆ.
ತುಟ್ಟಿ ಭತ್ಯೆ(dearness allowance) :ಭಾರತದಲ್ಲಿ, ತುಟ್ಟಿಭತ್ಯೆಯು ಒಬ್ಬ ವ್ಯಕ್ತಿಯ ಸಂಬಳದ ಭಾಗವಾಗಿದೆ. ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕ ಆಧಾರಿಸಿ ಲೆಕ್ಕಮಾಡಲಾಗುತ್ತದೆ. ನಂತರ, ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ. ದರಗಳು ಗ್ರಾಮೀಣ/ನಗರ ಪ್ರದೇಶಗಳ ಪ್ರಕಾರ ಬದಲಾಗುತ್ತವೆ.
+++++++++++++++++++++++
ಕರ್ನಾಟಕ ಸರ್ಕಾರದÀ ತುಟ್ಟಿಬತ್ಯೆ ಹೆಚ್ಚಳ ಆದೇಶಗಳು ದಿನಾಂಕ 01-01-1987ರಿಂದ 01-01-2016ರವರೆಗೆ
ದಿನಾಂಕ - ಹೆಚ್ಚಳ ಶೇಖಡವಾರು
01-01-1987- 4%
01-07-1987- 8%
01-01-1988- 13%
01-07-1988- 19%
01-01-1989- 24%
01-07-1989- 29%
01-01-1990- 33%
01-07-1990- 37%
01-01-1991- 45%
01-07-1991 54%
01-01-1992- 65%
01-07-1992- 76%
01-01-1993- 85%
01-07-1993- 90%
01-01-1994- 96%
01-07-1994- 106%
01-01-1995- 116%
01-07-1995- 127%
01-01-1996- 138%
01-07-1996- 149%
01-01-1997- 160%
01-07-1997- 171%
01-01-1998- 178%
01-07-1998 - 192%
01-04-1998- 16%
01-07-1998- 22%
01-01-1999 - 32%
01-07-1999 - 37%
01-01-2000 - 38%
01-07-2000- 41%
01-01-2001- 43%
01-07-2001- 45%
01-01-2002- 49%
01-07-2002- 52%
01-01-2003- 55%
01-07-2003 59%
01-01-2004- 61%
01-07-2004- 64%
01-01-2005- 67%
01-07-2005- 71%
01-01-2006- 74%
01-07-2006- 79%
01-04-2006- 2.625%
01-07-2006- 7%
01-01-2007- 12.25%
01-07-2007- 17.50%
01-01-2008- 22.75%
01-07-2008- 26.75%
01-01-2009- 32.75%
01-07-2009- 38%
01-01-2010- 46%
01-07-2010- 56.25%
01-01-2011- 62.50%
01-07-2011- 69.50%
01-01-2012- 76.75%
01-07-2012- 4%
01-01-2013- 9%
01-07-2013- 15%
01-01-2014- 21%
01-07-2014- 25.25%
01-01-2015- 28.75%
01-07-2015- 32.50%
01-01-2016- 36%
01/07/2016- 40.25%
Comments
Post a Comment