ಮೆದುಳಿನ ಆರೋಗ್ಯಕ್ಕೆ ಅತ್ಯುತ್ತಮ ಆಹಾರಗಳು :-
ವಾರ್ತಾ ಭಾರತಿ : 26 Oct, 2016
ಅಲ್ಜೀಮರ್ ಮತ್ತು ಮರೆವು ರೋಗವು ವೃದ್ಧಾಪ್ಯದಲ್ಲಿ
ದಾಳಿ ಇಡುವ ಎರಡು ಅತೀ ಮರಕ ರೋಗ. ರೋಗಿಗಳು ತಮ್ಮ
ನೆನಪು ಶಕ್ತಿಯನ್ನು ಕಳೆದುಕೊಳ್ಳುತ್ತಾ
ವಯಸ್ಸಾಗುತ್ತಿದ್ದಂತೆಯೇ ಗಂಭೀರ
ಸಮಸ್ಯೆಯನ್ನು ಎದುರಿಸುತ್ತಾರೆ. ಮಾನಸಿಕ ಮತ್ತು ಚಹರೆಗಳು
ಕುಸಿಯುವ ಸಮಸ್ಯೆಯನ್ನು ಎದುರಿಸುವವರು ಮತ್ತು
ಮುಖ್ಯವಾಗಿ ಇಂಥ ಕುಟುಂಬ ಇತಿಹಾಸವಿದ್ದವರು
ಆಹಾರ ಪದಾರ್ಥಗಳ ಸೇವನೆಯತ್ತ ಹೆಚ್ಚು ಗಮನ
ನೀಡಬೇಕು. ಮರೆವು ರೋಗದಂತಹ ಸಮಸ್ಯೆ ಕಾಡುವ
ಸಾಧ್ಯತೆ ಇದ್ದಲ್ಲಿ ಈ ಕೆಲವು ಅಂಶಗಳತ್ತ ಗಮನ
ಕೊಡಬೇಕು.
ಬೆರ್ರಿಗಳು
ಬ್ಲೂಬೆರ್ರಿ, ಚೆರ್ರಿಹಣ್ಣು ಮತ್ತು ಸ್ಟ್ರಾಬೆರಿಗಳನ್ನು ಆಹಾರದಲ್ಲಿ
ಬೆರೆಸಬೇಕು. ಇವು ಅಧಿಕ ಆಂಥೋಸಿಯಾನಿನ್
ಹೊಂದಿರುವ ಕಾರಣ ಮರೆವು ರೋಗ ಮತ್ತು
ಅಲ್ಜೀಮರ್ಗಳ ವಿರುದ್ಧ ಶಕ್ತಿ
ಕೊಡುತ್ತದೆ. ಅಲ್ಲದೆ ಬೆರ್ರಿಗಳಲ್ಲಿ ವಿಟಮಿನ್ ಸಿ,
ಇ ಮತ್ತು ಆಂಟಿ ಆಕ್ಸಿಡಂಟ್ಗಳಿದ್ದು ಉರಿಯೂತ
ಸಮಸ್ಯೆಯಿಂದ ಕಾಪಾಡಿ ಉತ್ತಮ ಮಾನಸಿಕ ಆರೋಗ್ಯ
ಕೊಡುತ್ತದೆ.
ಬ್ರೊಕೊಲಿ
ಈ ತರಕಾರಿಯಲ್ಲಿ ಎರಡು ಪ್ರಮುಖ ಪೌಷ್ಟಿಕಾಶಂಗಳಿದ್ದು,
ನಿಮ್ಮ ಮೆದುಳು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು. ಇವು
ಖೊಲೈನ್ ಆಗಿದ್ದು, ನೆನಪುಶಕ್ತಿಗೆ ಉತ್ತೇಜನ
ಕೊಡುತ್ತದೆ. ವಿಟಮಿನ್ ಕೆ ಉತ್ತಮ ನಡವಳಿಕೆ
ಸಾಮರ್ಥ್ಯ ಕೊಡುತ್ತದೆ. ದೊಡ್ಡ
ಪ್ರಮಾಣದಲ್ಲಿ ಬ್ರೊಕೊಲಿ
ಸೇವಿಸಿದವರು ಇತರರಿಗಿಂತ ನೆನಪು ಶಕ್ತಿಯಲ್ಲಿ
ಉತ್ತಮವಾಗಿದ್ದಾರೆ.
ಮೀನು
ಮೀನು ಸೇವಿಸದೆ ಯಾವುದೇ ಆಹಾರ
ಪೂರ್ಣಗೊಳ್ಳುವುದಿಲ್ಲ. ಮೀನು ಒಮೆಗಾ
3 ಫ್ಯಾಟಿ ಆಸಿಡ್ಗಳ ಉತ್ತಮ ಮೂಲ. ಹೀಗಾಗಿ
ಮನಸ್ಸನ್ನು ತೀಕ್ಷ್ಣವಾಗಿರಿಸಲು ನೆರವಾಗುತ್ತದೆ.
ನೀವು ಮೀನು ತಿನ್ನದವರಾಗಿದ್ದಲ್ಲಿ, ಫ್ಲಾಕ್ಸ್
ಸೀಡ್ಗಳನ್ನು ಸೇವಿಸಬಹುದು. ಅದೂ ಒಮೆಗಾ 3ಯ
ಶ್ರೀಮಂತ ಮೂಲ.
ಸಾಂಬಾರ್
ಸಾಂಬಾರನ್ನು ವಾರಕ್ಕೆ ಎರಡು ಬಾರಿ ಸೇವಿಸುವುದರಿಂದ
ಅಲ್ಜೀಮರ್ ಬರುವುದಿಲ್ಲ. ಏಕೆಂದರೆ
ಅದರಲ್ಲಿರುವ ಅರಿಶಿಣವು ಮೆದುಳಿಗೆ ಉತ್ತಮ. ಮಸಾಲೆಗಳನ್ನು
ಬಳಸುವ ಹಲವು ಆಹಾರಗಳಿವೆ. ಆದರೆ ಅರಿಶಿಣ ಬಳಸಿದ ಆಹಾರ
ಅಥವಾ ಸಾಂಬಾರ್ ಮಾನಸಿಕ ಆರೋಗ್ಯಕ್ಕೆ ಉತ್ತಮ.
ಬೀನ್ಸ್
ಬೀನ್ಸ್ ಮತ್ತು ದ್ವಿದಳ ಧಾನ್ಯಗಳು ಆಹಾರಕ್ಕೆ
ಉತ್ತಮ ಆಯ್ಕೆ. ನ್ಯೂರಾನ್ ಮತ್ತು ಇತರ ದೇಹದ
ಕಾರ್ಯಗಳಿಗೆ ಅಗತ್ಯವಿರುವ ಕಬ್ಬಿಣ,
ಪೊಟಾಶಿಯಂ, ಮೆಗ್ನೇಶಿಯಂ ಮತ್ತು
ಫೊಲಾಟ್ ಅಂಶಗಳು ಇದರಲ್ಲಿವೆ.
ಅದರಲ್ಲಿರುವ ಕ್ಲೋರಿನ್ ನ್ಯೂರೋ ಸಂವಾಹಕನಾಗಿರುವ
ಅಸಿಟೋಖೊಲೈನ್ ಕೊಡುತ್ತದೆ. ಇದು
ಮೆದುಳಿನ ಕಾರ್ಯಕ್ಕೆ ಅಗತ್ಯ. ಮರೆವು ರೋಗದ ವಿರುದ್ಧ
ಹೋರಾಡಲು ಮೆದುಳಿಗೆ ಶಕ್ತಿ ಕೊಡಲು
ಬೀನ್ಸ್ ಮತ್ತು ದ್ವಿದಳ ಧಾನ್ಯಗಳು ನೆರವಾಗುತ್ತವೆ.
ಹಾಲು
ಹಾಲು ಕುಡಿಯುವ ಅಭ್ಯಾಸ ನಿಮಗಿದ್ದಲ್ಲಿ ಎರಡು ಬಾರಿ
ಯೋಚಿಸಬೇಕು. ಏಕೆಂದರೆ ಹಾಳು ಅಲ್ಜೀಮರ್ ಮತ್ತು
ಮರೆವು ರೋಗದ ಸಮಸ್ಯೆ ನಿವಾರಿಸಲು ಉತ್ತಮ ನೆರವು
ನೀಡುತ್ತದೆ. ಸಂಶೋಧಕರ ಪ್ರಕಾರ ಸಹಜವಾದ
ಗ್ಲುಟಥಿಯಾನ್ ವೃದ್ಧಾಪ್ಯದಲ್ಲಿ ಉತ್ಪಾದನೆಯಾಗಲು ಹಾಲಿನ
ಅಗತ್ಯವಿದೆ. ಗ್ಲುಟಥಿಯಾನ್ ಮೆದುಳನ್ನು ಬದಲಾಯಿಸುವ
ಆಕ್ಸಿಡೇಟಿವ್ ಒತ್ತಡವನ್ನು ನಿವಾರಿಸುತ್ತದೆ. ಮೆದುಳಿಗೆ
ಹಾನಿಯಾಗುವುದನ್ನು ತಡೆಯಲು ಅಗತ್ಯ ಪೌಷ್ಟಿಕಾಂಶಗಳು
ದೊರೆಯಲು ದಿನಕ್ಕೆ ಮೂರು ಗ್ಲಾಸ್ ಹಾಲು ಕುಡಿಯಲು
ಪ್ರಯತ್ನಿಸಬೇಕು.
ಕೃಪೆ: http://www.1mhealthtips.com/
Comments
Post a Comment