ಎಚ್ಚರಿಕೆ ವಹಿಸಿ 10, 20 ರೂ. ಸ್ಟಾಕ್ ಮಾಡಬೇಡಿ. ಏಕೆಂದರೆ ?
ವಾರ್ತಾ ಭಾರತಿ : 10 Nov, 2016
ನವದೆಹಲಿ,ನ.10 : ಬ್ಯಾಂಕುಗಳು ಇಂದಿನಿಂದ
ರದ್ದುಗೊಂಡಿರುವ 500 ಹಾಗೂ 1000 ರೂ.
ಬದಲಿಗೆ ಬೇರೆ ನೋಟುಗಳನ್ನು ಒದಗಿಸುತ್ತಿದ್ದರೂ 10 ಹಾಗೂ 20 ರೂ
ನೋಟುಗಳನ್ನು ಸದ್ಯದಲ್ಲಿಯೇ ಸರಕಾರ
ಬದಲಾಯಿಸಲಿದೆಯೆಂದು ಹೇಳಲಾಗುತ್ತಿದೆ. ತರುವಾಯ
ದೇಶದೆಲ್ಲೆಡೆ ಬ್ಯಾಂಕುಗಳ ಮುಂದೆ
ದೊಡ್ಡ ಕ್ಯೂಕಾಣಿಸುತ್ತಿದೆ.ಸರಕಾರದ ಈ ಕ್ರಮ
ಭವಿಷ್ಯದಲ್ಲಿ ದೇಶಕ್ಕೆಬಹಳಷ್ಟು
ಉಪಯೋಗವಾಗಲಿದೆಯೆಂದು ವಿತ್ತ ಸಚಿವ ಅರುಣ್ ಜೇಟ್ಲಿ
ಹೇಳಿದ್ದಾರೆ.
500 ಹಾಗೂ 1000 ದ ಹೊಸ ನೋಟುಗಳ
ಹೊರತಾಗಿಇನ್ನೂ ಹೊಸ ನೋಟುಗಳ
ಹೊಸ ವಿನ್ಯಾಸ ಹಾಗೂ ಫೀಚರ್
ಗಳೊಂದಿಗೆ
ಹೊರಬರಲಿದೆಯೆಂದುಆರ್ಥಿಕ ವ್ಯವಹಾರಗಳ
ಸಚಿವಾಲಯದ ಕಾರ್ಯದರ್ಶಿ ಶಕ್ತಿಕಂಠ ದಾಸ್ ಹೇಳಿದ್ದಾರೆ.
ಹೊಸ ವಿನ್ಯಾಸದ ನೋಟುಗಳನ್ನು ಯಾವಾಗ
ಹೊರತರಲಾಗುವುದೆಂದು ಅವರು ಹೇಳದೇ
ಇದ್ದರೂ1000 ರೂ ನೋಟುಗಳನ್ನೂ ಹೊಸ
ವಿನ್ಯಾಸದಲ್ಲಿ ತರಲಾಗುವುದು ಎಂದು ಹೇಳಿದ್ದಾರೆ.
ಇಂದು ಹೊಸದಿಲ್ಲಿಯಲ್ಲಿ ನಡೆದ ಆರ್ಥಿಕ
ಸಂಪಾದಕರ ಸಮ್ಮೇಳನದಲ್ಲಿ ಹೆಚ್ಚಿನ ಪ್ರಶ್ನೆಗಳು 500 ಹಾಗೂ
1000 ನೋಟುಗಳ ರದ್ದತಿಯ ಬಗ್ಗೆಯೇ ಆಗಿದ್ದವು.
ಮಂಗಳವಾರ ತೆಗೆದುಕೊಳ್ಳಲಾದ ಕ್ರಮಕ್ಕೆ ಬಹಳ
ಹಿಂದಿನಿಂದಲೇ ತಯಾರಿ ನಡೆದಿತ್ತು ಎಂದೂ ದಾಸ್
ವಿವರಿಸಿದ್ದಾರೆ. ನೋಟುಗಳ ವಿನ್ಯಾಸದಲ್ಲಿ ಆರ್ ಬಿ ಐ ನ ಎರಡು ಮೂರು
ಅಧಿಕಾರಿಗಳು ಮಾತ್ರ ಭಾಗಿಯಾಗಿದ್ದರು ಎಂಊ ಅವರು ಮಾಹಿತಿ
ನೀಡಿದ್ದಾರೆ.
ಸರಕಾರದ ಈ ಹೊಸ ಕ್ರಮದಿಂದ ಜನರು
ಹೆಚ್ಚುಹಣ ಖರ್ಚು ಮಾಡುವ ಅಭ್ಯಾಸವನ್ನೂ ಕೈಬಿಡಬಹುದು ಎಂದು
ಸಚಿವ ಜೇಟ್ಲಿ ಹೇಳಿದ್ದಾರೆ.ಮುಂದಿನ ಕೆಲ ದಿನಗಳಲ್ಲಿ ಸಣ್ಣ
ಮಟ್ಟಿನ ಖರೀದಿಗಳ ಮೇಲೆ ಮಂಗಳವಾರದ ಕ್ರಮ
ಪರಿಣಾಮ ಬೀರಬಹುದು. ದೊಡ್ಡ
ಪ್ರಮಾಣದ ಕಪ್ಪು ಹಣವನ್ನು ತಡೆಗಟ್ಟುವುದೇ ಇದರ ಹಿಂದಿನ
ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
Comments
Post a Comment