*ಕೆಪಿಎಸ್ಸಿ: 2017ರ ವಾರ್ಷಿಕ (ತಾತ್ಕಾಲಿಕ) ವೇಳಾಪಟ್ಟಿ ಪ್ರಕಟ:

*ಕರ್ನಾಟಕ ಲೋಕ ಸೇವಾ ಆಯೋಗವು ಇದೇ ಮೊದಲ ಬಾರಿಗೆ ಸರಕಾರಿ ನೇಮಕಾತಿಗಾಗಿ ತಾನು ಮುಂದಿನ ವರ್ಷ ನೆಡೆಸಲಿರುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನದ ವೇಳಾಪಟ್ಟಿಯನ್ನು ಪ್ರಕಟಿಸಿದೆ.*

ಇದರಿಂದ ರಾಜ್ಯ ಸರಕಾರಿ ಹುದ್ದೆಗಳ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಅನುಕೂಲವಾಗಲಿದೆ.

ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ಸಿ) ಮತ್ತು ಸಿಬ್ಬಂದಿ ನೇಮಕಾತಿ ಆಯೋಗ (ಎಸ್ಎಸ್ಸಿ) ಮುಂದಿನ ವರ್ಷ ನಡೆಸುವ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸುತ್ತಾ ಬಂದಿವೆ. ಆದರೆ ಕೆಪಿಎಸ್ಸಿ, ಯಾವ ನೇಮಕಾತಿಗಾಗಿ ಯಾವಾಗ ಅಧಿಸೂಚನೆ ಹೊರಡಿಸುತ್ತದೆ, ಸ್ಪರ್ಧಾತ್ಮಕ ಪರೀಕ್ಷೆಯನ್ನು ಯಾವಾಗ ನಡೆಸುತ್ತದೆ ಎಂಬುದು ಅಭ್ಯರ್ಥಿಗಳಿಗೆ ಸ್ಪಷ್ಟವೇ ಆಗುತ್ತಿರಲಿಲ್ಲ. ಇದರಿಂದಾಗಿ ಅಭ್ಯರ್ಥಿಗಳು ಕೆಪಿಎಸ್ಸಿಯು ಹೊರಡಿಸುವ ಪ್ರಕಟಣೆಗಾಗಿ ಕಾಯುತ್ತಾ ಕೂರುವಂತಾಗಿತ್ತು. ಇದೀಗ ಈ ತೊಂದರೆ ತಪ್ಪಿದೆ, ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿರುವುದರಿಂದ ಸೂಕ್ತ ಪರೀಕ್ಷೆಗೆ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಲು ಅಭ್ಯರ್ಥಿಗಳಿಗೆ ಸಾಧ್ಯವಾಗಲಿದೆ.

*2017ರ ವೇಳಾಪಟ್ಟಿಯಲ್ಲಿ ಗೆಜೆಟೆಟ್ ಪ್ರೊಬೆಷನರಿ ಹುದ್ದೆಗಳಿಗೆ ಏಪ್ರಿಲ್ನಲ್ಲಿ ಪೂರ್ವಭಾವಿ, ಆಗಸ್ಟ್ನಲ್ಲಿ ಮುಖ್ಯ ಪರೀಕ್ಷೆ ನಡೆಸಲಾಗುವುದು.*

*2018ರ ಫೆಬ್ರವರಿಯಲ್ಲಿ ಸಂದರ್ಶನ ನಡೆಸಲಾಗುವುದು ಎಂದು ಪ್ರಕಟಿಸಲಾಗಿದೆ. ಈ ರೀತಿ ವೇಳಾಪಟ್ಟಿ ಪ್ರಕಟಿಸುವಂತೆ ಆಡಳಿತ ಸುಧಾರಣೆ ಮತ್ತು ಸಿಬ್ಬಂದಿ ಇಲಾಖೆ ಶಿಫಾರಸು ಮಾಡಿತ್ತು.*

*ಪ್ರಮುಖ ಪರೀಕ್ಷೆಗಳು:* ಎಫ್ಡಿಎ/ಎಸ್ಡಿಎ -ಜನವರಿ

ಗ್ರೂಪ್ 'ಎ', 'ಬಿ' ಮತ್ತು 'ಸಿ' ತಾಂತ್ರಿಕ ಹುದ್ದೆ - ಫೆಬ್ರವರಿ

ಗ್ರೂಪ್ 'ಸಿ' ತಾಂತ್ರಿಕೇತರ ಹುದ್ದೆ - ಏಪ್ರಿಲ್

Comments

Popular posts from this blog

2025-26 ನೇ ಸಾಲಿಗೆ ಶಾಲಾ ದಾಖಲಾತಿಗಾಗಿ ವಯಸ್ಸಿನ ಲೆಕ್ಕಾಚಾರ

ವಯಸ್ಸಿನ ಲೆಕ್ಕಾಚಾರ 2024