"ಅಥಣಿ" ಸ್ಥಳನಾಮ ಮೂಲ:
"ಅಥಣಿ" ಎಂಬ ಹೆಸರು ಹೇಗೆ ಬಂತು
ಗೊತ್ತೇ ?
ಆಧ್ಯಾತ್ಮಿಕ ಕ್ಷೇತ್ರವಾದ ಅಥಣಿಯ
ಸ್ಥಳನಾಮದ ಪರಿಶೀಲನೆಯಲ್ಲಿ
ತೊಡಗಿದಾಗ ಕ್ರಿ.ಶ.೧೬೩೯ರಲ್ಲಿ ಜರ್ಮನ್
ಪ್ರವಾಸಿಗ ಮಂಡೆಲ್ ಸ್ಲೂ ಎಂಬುವವನು 'ಅಟ್ಟನಿ'
ಎಂದು, ಕ್ರಿ.ಶ.೧೬೭೫ರಲ್ಲಿ ಆಂಗ್ಲ ಪ್ರವಾಸಿಗ
ಪ್ಲೇಯರ್ ಹಟ್ಟೇನಿ ಎಂದು ಕರೆದಿದ್ದಾರೆ.
ಅಟನಿ > ಅಟ್ಟನಿ > ಹಟ್ಟೇನಿ > ಹಸ್ತಿನಿ (ಹೆಣ್ಣಾನೆ) >
ಅಸ್ತಿನಿ > ಅಥನಿ > ಅಥಣಿ ಎಂದು ಪದನಿಷ್ಪತ್ತಿ.
'ಅಟ್ಟ' ಎಂದರೆ ಸ್ಥಳ 'ಣಿ' ಎಂದರೆ ನಿರಂಜನ.
ಅಥಣಿ ಎಂದರೆ ನಿರಂಜನ ಸ್ಥಳವೆಂದು
ನಿರ್ಧರಿಸಬಹುದು. ಇದಕ್ಕೆ ಪೂರಕವಾಗಿ ಪಂಚ ಮಠಗಳು
ಇಲ್ಲಿವೆ. ಈ ಪಟ್ಟಣದ ಪೂರ್ವ ದಿಕ್ಕಿನಲ್ಲಿರುವ ಕರಿ ಮಸೂತಿ
ಶಾಹಿ ಹಾಗೂ ಮರಾಠ ಗಡಿ ಸೀಮೆಯಾಗಿತ್ತು. ಈ 'ಹಾಥಿ'
ಎಂಬ ಶಬ್ದವು ಅಪಭ್ರಂಶವಾಗಿ ಹತ್ತಿ >ಹತಿಣಿ>
ಅಥಣಿ ಎಂದಾಗಿರಬಹುದೆಂದು ಅಭಿಪ್ರಾಯವಿದೆ. ಅಥಣಿ
ಎಂದರೆ ಸಂಸ್ಕೃತದಲ್ಲಿ 'ಅಥ' ಎಂದರೆ
ಪ್ರಾರಂಭ 'ಣಿ' ಎಂದರೆ ನಿರಂಜನ
ಎಂದಾಗುತ್ತದೆ. ನಿರಂಜನರು ಯಾವಾಗಲೂ ಈ ನೆಲದಲ್ಲಿ
ನೆಲೆಸುತ್ತಾರೆಂಬುದು ಈ ಶಬ್ದದ ಇನ್ನೊಂದು
ನಿಷ್ಪತ್ತಿ. ಇದಕ್ಕೆ ಪೂರಕವಾಗಿ ಇಂದಿಗೂ ಶಿವಯೋಗಿ
ಮುರುಘೇಂದ್ರಸ್ವಾಮಿಗಳ ದಿವ್ಯ ಕ್ಷೇತ್ರವಾಗಿ
ಆಧ್ಯಾತ್ಮಿಕ ಭೂಮಿಯಾಗಿದೆ.
ಕ್ರಿ.ಶ.೧೯೩೪ರಲ್ಲಿ ಅಥಣಿಯಲ್ಲಿ ಜರುಗಿದ ಪ್ರಥಮ
ಬೆಳಗಾವಿ ಜಿಲ್ಲಾ ಕ.ಸಾ. ಸಮ್ಮೇಳನದ ಅಧ್ಯಕ್ಷರಾಗಿ,
ಬಿ.ಎಂ.ಶ್ರೀಯವರು ಮಾತನಾಡಿ, ಇದು
ಗ್ರೀಸ್ ದೇಶದ 'ಅಥೇನ್ಸ್' ಪಟ್ಟಣದಂತೆ
ಇರುವುದರಿಂದ ಅಥೇನ್ಸ್ ಪಟ್ಟಣದ
ಮತ್ತೊಂದು ರೂಪವೇ ಅಥಣಿ ಎಂದಿದ್ದಾರೆ.
ಬಿಜಾಪುರ ಆದಿಲ್ಶಾಹಿ ಆಡಳಿತ ಒಂದೆಡೆಯಾದರೆ,
ಇನ್ನೊಂದೆಡೆ ಶಿವಾಜಿಯ ಆಡಳಿತ ಇತ್ತು. ಈ
ಎರಡೂ ಸಾಮ್ರಾಜ್ಯಗಳ ಸೀಮೆಯಲ್ಲಿರುವ ಪ್ರದೇಶವೇ
ಅಥಣಿ. ಇದಕ್ಕೆ ಯಾರು ಧಣಿಯಾಗಿರಲಿಲ್ಲ. ಆದ್ದರಿಂದ
ಇದನ್ನು ಅಧಣಿ ಎಂದು ಕರೆಯಲಾಯಿತು.
ಇಲ್ಲಿ ಶಿವಯೋಗಿಗಳೇ ಧಣಿಗಳಾಗಿರುವರು. ಅವರ ಬಿಟ್ಟು ಬೇರೆ
ಧಣಿಗಳಾರೂ ಇಲ್ಲವೆಂಬ ನಂಬಿಕೆ ಕೂಡ ಇರುವುದರಿಂದ
ಅಥಣಿ ಎಂದು ಪ್ರಸಿದ್ದಿ ಪಡೆಯಿತು.
ಕೃಪೆ:-p Nadagouda watsapp
Comments
Post a Comment