ಶತಮಾನದ ಹೊಸ್ತಿಲಲ್ಲಿ ಪುಲಿಟ್ಜರ್‌ ಪ್ರಶಸ್ತಿ

Nov 6, 2016, 04.00 AM IST

ಶತಮಾನದ ಹೊಸ್ತಿಲಲ್ಲಿ ಪುಲಿಟ್ಜರ್‌ ಪ್ರಶಸ್ತಿ

AAA

ಮೊನ್ನೆಯಷ್ಟೇ 2016ನೇ ಸಾಲಿನ ಪುಲಿಟ್ಜರ್‌ ಪ್ರಶಸ್ತಿಗಳು ಪ್ರಕಟವಾಗಿವೆ. ಅಮೆರಿಕದ ಪತ್ರಿಕೋದ್ಯಮ ಕ್ಷೇತ್ರದ ಅತ್ಯುನ್ನತ ಗೌರವವವಿದು. ಪುಲಿಟ್ಜರ್‌ ಈ ಪ್ರಶಸ್ತಿ ಪಡೆಯುವುದು ಪತ್ರಕರ್ತರ ಕನಸಾಗಿರುತ್ತದೆ. ಅಪಾರ ಮನ್ನಣೆಗಳಿಸಿರುವ ಈ ಪ್ರಶಸ್ತಿ ಇದೀಗ ಶತಮಾನದ ಹೊಸ್ತಿಲಲ್ಲಿ ಇದೆ. ಪುಲಿಟ್ಜರ್‌ ಪ್ರಶಸ್ತಿ ಹುಟ್ಟು ಮತ್ತು ಬೆಳವಣಿಗೆ ಕುರಿತು ಇಲ್ಲಿ ಚರ್ಚಿಸಲಾಗಿದೆ. ----- ಸಿನಿಮಾ ಕ್ಷೇತ್ರದಲ್ಲಿ 'ಆಸ್ಕರ್‌', ಸಾಹಿತ್ಯ ಕ್ಷೇತ್ರದಲ್ಲಿ 'ಬೂಕರ್‌' ಪ್ರಶಸ್ತಿಗಿರುವಷ್ಟು ಗೌರವ, ಮನ್ನಣೆ ಪತ್ರಿಕೋದ್ಯಮ ಕ್ಷೇತ್ರದ ಸಾಧಕರಿಗೆ ನೀಡುವ 'ಪುಲಿಟ್ಜರ್‌' ಪ್ರಶಸ್ತಿಗೂ ಇದೆ. ಹಾಗೆಯೇ ಇದು ಅಮೆರಿಕದ ವ್ಯಾಪ್ತಿಗೊಳಪಟ್ಟಿರುವ ಮಿತಿಯನ್ನೂ ಹೊಂದಿದೆ. ಪುಲಿಟ್ಜರ್‌ ಪ್ರಶಸ್ತಿ ಪಡೆಯುವುದು ಹಲವು ಪತ್ರಕರ್ತರ ಎಷ್ಟೋ ದಿನಗಳ ಕನಸಾಗಿರುತ್ತದೆ. ಒಮ್ಮೆ ಪುಲಿಟ್ಜರ್‌ ಪ್ರಶಸ್ತಿ ಬಂದು ಬಿಟ್ಟರೆ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಾನೊಂದು ಶಿಖರ ತಲುಪಿದೆ ಎಂಬ ಭಾವ ಹಲವು ಪತ್ರಕರ್ತರಿಗಿರುತ್ತದೆ. ಅಂದರೆ, ಅಷ್ಟೊಂದು ಪ್ರಭಾವಶಾಲಿ ಮತ್ತು ಉನ್ನತ ಮಟ್ಟದ ಪ್ರಶಸ್ತಿ ಇದು. ಎಲ್ಲ ಪ್ರಶಸ್ತಿಗಳಂತೆ ಈ ಪ್ರಶಸ್ತಿ ಕೂಡ ವಿವಾದದಿಂದ ಮುಕ್ತವಾಗಿಲ್ಲ. ಆದರೆ, ಆ ಪ್ರಮಾಣ ತುಂಬ ಚಿಕ್ಕದು. ಇಂಥ ಪ್ರಶಸ್ತಿ ಇದೀಗ ನೂರರ ಹೊಸ್ತಿಲಿನಲ್ಲಿದೆ. 2017ಕ್ಕೆ ನೂರು ವರ್ಷ ತುಂಬುತ್ತದೆ. 1917ರಲ್ಲಿ ಆರಂಭವಾದ ಪುಲಿಟ್ಜರ್‌ ಪ್ರಶಸ್ತಿಯನ್ನು ಸ್ಥಾಪಿಸಿದ್ದು ಪತ್ರಕರ್ತ ಮತ್ತು ಪ್ರಕಾಶಕ ಜೊಸೆಫ್‌ ಪುಲಿಟ್ಜರ್‌ ಅವರು. ಜೋಸೆಫ್‌ ಅವರು ಅಪ್ರಮಾಣಿಕ ಸರಕಾರಗಳ ವಿರುದ್ಧದ ಹೋರಾಟಗಾರರಾಗಿದ್ದರು. ತಮ್ಮ ವೃತ್ತಿಯಲ್ಲಿ ನೈಪುಣ್ಯತೆಯನ್ನು ಸಾಧಿಸಿದ ಧೀಮಂತ ವ್ಯಕ್ತಿ. 19ನೇ ಶತಮಾನದ ನಂತರದ ವರ್ಷಗಳಲ್ಲಿ ಪತ್ರಿಕೋದ್ಯಮಕ್ಕೆ ಹೊಸ ರೂಪವನ್ನು ಕೊಟ್ಟವರು ಪುಲಿಟ್ಜರ್‌ ಅವರು. ಇಂದಿಗೂ ಪುಲಿಟ್ಜರ್‌ ಪ್ರಶಸ್ತಿ ಪಡೆಯುವುದು ಒಂದು ಗೌರವ ಎಂದೇ ಬಹುತೇಕರು ಪತ್ರಕರ್ತರು ಭಾವಿಸುತ್ತಾರೆ. ಈ ಪ್ರಶಸ್ತಿಯನ್ನು ಪತ್ರಿಕೋದ್ಯಮ, ಸಾಹಿತ್ಯ, ಸಂಗೀತ ವಿಭಾಗದಲ್ಲಿ ನೀಡಲಾಗುತ್ತದೆ. ಅದು ಅಮೆರಿಕಕ್ಕೆ ಮಾತ್ರ ಸೀಮಿತವಾಗಿ ಕೊಡಮಾಡಲಾಗುತ್ತದೆ. ಅತ್ಯುತ್ತಮ ಪತ್ರಕರ್ತರನ್ನು ಗುರುತಿಸುವುದಕ್ಕಾಗಿ ಪುಲಿಟ್ಜರ್‌ ಅವರು ಪ್ರಶಸ್ತಿಯನ್ನು ಸ್ಥಾಪಿಸುವ ಬಗ್ಗೆ 1904ರಲ್ಲಿ ಬರೆದರು. ಅವರು ತಮ್ಮ ಉಯಿಲಿನಲ್ಲೂ ಪತ್ರಿಕೋದ್ಯಮ, ಪತ್ರಗಳು ಮತ್ತು ನಾಟಕ, ಶಿಕ್ಷ ಣ ಹಾಗೂ ಟ್ರಾವೆಲಿಂಗ್‌ ಸ್ಕಾಲರ್‌ಶಿಫ್‌ಗೆ ಮಾತ್ರ ಪ್ರಶಸ್ತಿ ಮೀಸಲಾಗಿರುವಂತೆ ತಿಳಿಸಿದ್ದರು. ಅದೂ ಅಮೆರಿಕಕ್ಕೆ ಸೀಮಿತವಾಗಿರುವಂತೆ. ಹೀಗಿದ್ದಾಗ್ಯೂ, ಅವರು ಕಾಲಕ್ಕೆ ತಕ್ಕಂತೆ ಪ್ರಶಸ್ತಿ ವಿಭಾಗಗಳನ್ನು ಪರಿಷ್ಕರಿಸುವ ಹಕ್ಕನ್ನು ಸಲಹಾ ಮಂಡಳಿಗೆ ನೀಡಿದ್ದರು. ಆದರೆ, ಅದು ಸಾರ್ವಜನಿಕ ಅಭಿಪ್ರಾಯಕ್ಕೆ ಒಪ್ಪಿತವಾಗಿರಬೇಕು ಎಂಬುದು ಅವರ ನಿಲುವೂ ಆಗಿತ್ತು. ಪುಲಿಟ್ಜರ್‌ ಅವರ 150ನೇ ಜಯಂತಿಯ ನೆನಪಿಗಾಗಿ ಅಂದರೆ, 1997ರಿಂದ ಪುಲಿಟ್ಜರ್‌ ಪ್ರಶಸ್ತಿ ಪರಿಗಣನೆಯ ಕ್ಷೇತ್ರಗಳನ್ನು ವಿಸ್ತರಿಸಲಾಯಿತು. ಇದೀಗ ಒಟ್ಟು 21 ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಕವನ, ಛಾಯಾಚಿತ್ರ, ಸಂಗೀತ ಸೇರಿದಂತೆ ಇನ್ನಿತರ ಕ್ಷೇತ್ರಗಳ ಸಾಧಕರನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಪ್ರಶಸ್ತಿ ನೀಡುವ ಒಟ್ಟು 21 ವಿಭಾಗಗಳ ಪೈಕಿ 20 ವಿಭಾಗದಲ್ಲಿ ಪ್ರಶಸ್ತಿ ಪಡೆದ ಪ್ರತಿಯೊಬ್ಬರಿಗೆ 10,000 ಡಾಲರ್‌ ನಗದು ಮತ್ತು ಸರ್ಟಿಫಿಕೇಟ್‌ ನೀಡಲಾಗುತ್ತದೆ. ಪತ್ರಿಕೋದ್ಯಮ ಸ್ಪರ್ಧೆಯ ಸಾರ್ವಜನಿಕ ಸೇವಾ ವಿಭಾಗದಲ್ಲಿ ಪ್ರಶಸ್ತಿ ಪಡೆದವರಿಗೆ ಗೋಲ್ಡ್‌ ಮೆಡಲ್‌ ನೀಡಲಾಗುತ್ತದೆ. - ಪುಲಿಟ್ಜರ್‌ ವಿವಾದಗಳು- ನ್ಯೂಯಾರ್ಕ್‌ ಟೈಮ್ಸ್‌, ದಿ ವಾಲ್‌ ಸ್ಟ್ರೀಟ್‌ ಜರ್ನಲ್‌, ವಾಷಿಂಗ್ಟನ್‌ ಪೋಸ್ಟ್‌ನಂಥ ಪತ್ರಿಕೆಗಳು ಪುಲಿಟ್ಜರ್‌ ಪ್ರಶಸ್ತಿ ಪಡೆಯುವಲ್ಲಿ ಅಗ್ರಗಣ್ಯವಾಗಿವೆ. ಪ್ರತಿ ವರ್ಷ ಒಂದಿಷ್ಟು ಪುಲಿಟ್ಜರ್‌ ಪ್ರಶಸ್ತಿಗಳು ಈ ಪತ್ರಿಕೆಗಳ ಪಾಲಾಗುತ್ತವೆ. ಅಂದರೆ, ಅಂಥ ಗುಣಾತ್ಮಕ ವರದಿಗಳು, ಲೇಖನಗಳನ್ನು ಆ ಪತ್ರಿಕೆಗಳು ಪ್ರಕಟಿಸುತ್ತವೆ. ಆದರೆ, ಕೇವಲ ಕೆಲವೇ ಪತ್ರಿಕೆಗಳು ಈ ಪ್ರಶಸ್ತಿಯಲ್ಲಿ ಸಿಂಹಪಾಲು ಪಡೆಯುತ್ತಿರುವುದು ಅನೇಕ ಬಾರಿ ವಿವಾದಕ್ಕೊಳಗಾಗಿದೆ. ಈ ಹಿನ್ನೆಲೆಯಲ್ಲಿ ಪುಲಿಟ್ಜರ್‌ ಪ್ರಶಸ್ತಿ ಆಯ್ಕೆ ಮಂಡಳಿಯು, ಅನೇಕ ಸಣ್ಣ ಸಣ್ಣ ಪತ್ರಿಕೆಗಳ ಕೆಲಸವನ್ನು ಗುರುತಿಸಿ, ಪ್ರಶಸ್ತಿಯನ್ನು ಘೋಷಿಸಿದೆ. ಆ ಪೈಕಿ 1995ರಲ್ಲಿ ದಿ ವರ್ಜಿನ್‌ ಐಲ್ಯಾಂಡ್ಸ್‌ ಡೈಲಿ ನ್ಯೂಸ್‌ಗೆ ಪಬ್ಲಿಕ್‌ ಸರ್ವಿಸ್‌ ವಿಭಾಗದಲ್ಲಿ ಪ್ರಶಸ್ತಿ ನೀಡಲಾಯಿತು. ಅದೇ ರೀತಿ, 2005ರಲ್ಲಿ ವಿಲ್‌ಮೆಟ್‌ ವೀಕ್‌ ಪತ್ರಿಕೆಗೆ ತನಿಖಾ ವರದಿಗೆ ನೀಡುವ ಪುಲಿಟ್ಜರ್‌ ಪ್ರಶಸ್ತಿ ನೀಡಲಾಯಿತು. 2008ರಲ್ಲಿ ಫೋಟೋಗ್ರಫಿ ವಿಭಾಗದಲ್ಲಿ Concord (N.H.) Monitor ಪತ್ರಿಕೆಗೆ ನೀಡಲಾಯಿತು. ಇವುಗಳ ಹೊರತಾಗಿಯೂ ಪುಲಿಟ್ಜರ್‌ ಪ್ರಶಸ್ತಿಗಳು ವಿವಾದಕ್ಕೆ ಒಳಗಾಗಿವೆ. ಆದರೂ, ಅದಕ್ಕಿರುವ ಮಹತ್ವಕ್ಕೇನೂ ಕುಂದು ಬಂದಿಲ್ಲ. ಇಂದಿಗೂ ಅಮೆರಿಕದಲ್ಲಿ ಪುಲಿಟ್ಜರ್‌ ಪ್ರಶಸ್ತಿ ಪಡೆಯುವುದು ತಮ್ಮ ಸೌಭಾಗ್ಯ ಎಂದೇ ಭಾವಿಸುತ್ತಾರೆ. - ಯಾವ ವಿಭಾಗದಲ್ಲಿ ಪ್ರಶಸ್ತಿ?- -ಪತ್ರಿಕೋದ್ಯಮ- ಸಾರ್ವಜನಿಕ ಸೇವೆ, ಬ್ರೇಕಿಂಗ್‌ ನ್ಯೂಸ್‌ ಮತ್ತು ರಿಪೋರ್ಟಿಂಗ್‌, ಲೋಕಲ್‌ ರಿಪೋರ್ಟಿಂಗ್‌, ತನಿಖಾ ವರದಿ, ಎಕ್ಸ್‌ಪ್ಲಾನಟರಿ ರಿಪೋಟಿಂರ್‍ಂಗ್‌, ನ್ಯಾಷನಲ್‌ ರಿಪೋರ್ಟಿಂಗ್‌, ಫೀಚರ್‌ ರಿಪೋರ್ಟಿಂಗ್‌, ವಿಮರ್ಶೆ, ಸಂಪಾದಕೀಯ ಬರಹ, ಸಂಪಾದಕೀಯ ಕಾರ್ಟೂನ್‌, ಬ್ರೇಕಿಂಗ್‌ ನ್ಯೂಸ್‌ ಫೋಟೋಗ್ರಫಿ, ಫೀಚರ್‌ ಫೋಟೋಗ್ರಫಿ. -ಲೆಟರ್ಸ್‌ ಮತ್ತು ಡ್ರಾಮಾ- ಕಥೆ, ನಾಟಕ, ಇತಿಹಾಸ, ಬಯೋಗ್ರಫಿ ಅಥವಾ ಅಟೊಬಯೋಗ್ರಫಿ, ಸೃಜನೇತರ ಸಾಹಿತ್ಯ - ಕಲೆ- ಸಂಗೀತ - ಪುಲಿಟ್ಜರ್‌ ಪ್ರಶಸ್ತಿ ಪಡೆದ ಭಾರತೀಯರು- - ವಿಜಯ್‌ ಶೇಷಾದ್ರಿ ಬೆಂಗಳೂರಲ್ಲಿ ಹುಟ್ಟಿ ಅಮೆರಿಕದಲ್ಲಿ ಬೆಳೆದ ವಿಜಯ್‌ ಶೇಷಾದ್ರಿ ಅವರು ತಮ್ಮ 3 ಖಛ್ಚಿಠಿಜಿಟ್ಞs ಎಂಬ ಕವನ ಸಂಕಲನಕ್ಕೆ ಪ್ರತಿಷ್ಠಿತ ಪುಲಿಟ್ಜರ್‌ ಪ್ರಶಸ್ತಿಯನ್ನು 2014ನೇ ಸಾಲಿನಲ್ಲಿ ಪಡೆದರು. ಈ ಪ್ರಶಸ್ತಿ ಪಡೆದ ಐದನೇ ಭಾರತೀಯ ಇವರು. ಶೇಷಾದ್ರಿ ಅವರು ಕವಿ, ಪ್ರಬಂಧಕಾರ, ವಿಮರ್ಶಕರಾಗಿ ಗುರುತಿಸಿಕೊಂಡಿದ್ದಾರೆ. ದಿ ನ್ಯೂ ಯಾರ್ಕರ್‌ ಪತ್ರಿಕೆಯ ಸಂಪಾದಕರೂ ಆಗಿದ್ದರು. ಸಾರಾಹ ಲಾವರೆನ್ಸ್‌ ಕಾಲೇಜಿನಲ್ಲಿ ಬೋಧಕಾರಾಗಿಯೂ ಕೆಲಸ ಮಾಡಿದ್ದಾರೆ. - ಗೋಬಿಂದ್‌ ಬೆಹರಿ ಲಾಲ್‌ ಪತ್ರಿಕೋದ್ಯಮ ವಿಭಾಗದಲ್ಲಿ ಗೋಬಿಂದ್‌ ಬೆಹರಿ ಲಾಲ್‌ ಅವರು 1937ರಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾರ್ವರ್ಡ್‌ ವಿವಿಯಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಅವರು ಇತರೆ ನಾಲ್ಕು ಜನರೊಂದಿಗೆ ಪ್ರಶಸ್ತಿಯನ್ನು ಹಂಚಿಕೊಂಡಿದ್ದರು. ಗೋಬಿಂದ್‌ ಅವರು ಇಂಡಿಯನ್‌-ಅಮೆರಿಕನ್‌ ಪತ್ರಕರ್ತರಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲೂ ತೊಡಗಿಸಿಕೊಂಡಿದ್ದರು. ಹಿಯರಸ್ಟ್‌ ನ್ಯೂಸ್‌ಪೇಪರ್‌ಗೆ ಸೈನ್ಸ್‌ ಎಡಿಟರ್‌ ಆಗಿ ಕೆಲಸ ಮಾಡಿದ್ದರು. -ಜುಂಪಾ ಲಾಹಿರಿ 2000ರ ಸಾಲಿನ ಪುಲಿಟ್ಜರ್‌ ಪ್ರಶಸ್ತಿಯನ್ನು ಭಾರತೀಯ ಮೂಲದ ಜುಂಪಾ ಲಾಹಿರಿ ಪಡೆದುಕೊಂಡಿದ್ದಾರೆ. Interpreter of Maladies ಸಣ್ಣ ಕಥಾ ಸಂಕಲನಕ್ಕೆ ಈ ಪ್ರಶಸ್ತಿ ಬಂದಿದೆ. ಅವರ ಮೊದಲನೆಯ ಕಾದಂಬರಿ ದಿ ನೇಮ್‌ಸೇಕ್‌ ಸಾಹಿತ್ಯ ವಲಯದಲ್ಲಿ ತುಂಬ ಸದ್ದು ಮಾಡಿತ್ತು.ಅಲ್ಲದೇ ಅದೇ ಹೆಸರಿನಲ್ಲಿ ಸಿನಿಮಾ ಕೂಡ ನಿರ್ಮಾಣವಾಗಿತ್ತು. ಅವರ 2013ರ ಕಾದಂಬರಿ ದಿ ಲಾಲ್ಯಾಂಡ್‌ ಮ್ಯಾನ್‌ ಬೂಕರ್‌ ಪ್ರೈಜ್‌ಗೆ ನಾಮ ನಿರ್ದೇಶನಗೊಂಡಿತ್ತು. -ಗೀತಾ ಆನಂದ್‌ ವಾಲ್‌ಸ್ಟ್ರೀಟ್‌ ಜರ್ನಲ್‌ನಲ್ಲಿ ಪತ್ರಕರ್ತೆಯಾಗಿದ್ದ ಗೀತಾ ಆನಂದ್‌ ಅವರು ಬರಹಗಾರ್ತಿಯೂ ಹೌದು. ಸ್ನಾಯುವಿಗೆ ಸಂಬಂಧಿಸಿದ ಪೊಂಪ್‌ ರೋಗದ ಬಗೆಗಿನ ಇವರ ಕೆಲಸವನ್ನು ಗುರುತಿಸಿ ಪುಲಿಟ್ಜರ್‌ ಪ್ರಶಸ್ತಿಯನ್ನು 2003ರಲ್ಲಿ ಕೊಡಮಾಡಲಾಯಿತು. ಅವರ ಈ ಪ್ರಯತ್ನ Extraordinary Measures ಎಂಬ ಸಿನಿಮಾದಲ್ಲೂ ದಾಖಲಾಗಿದೆ. ಗೀತಾ ಆನಂದ್‌ ಅವರು ಬೋಸ್ಟನ್‌ ಗ್ಲೋಬ್‌ಗೆ ಪಾಲಿಟಿಕಲ್‌ ರೈಟರ್‌ ಆಗಿ ಕೆಲಸ ಮಾಡಿದ್ದಾರೆ. -ಸಿದ್ಧಾರ್ಥ ಮುಖರ್ಜಿ ಮುಖರ್ಜಿ ಅವರು ಕ್ಯಾನ್ಸರ್‌ ಫಿಜಿಸಿಯನ್‌ ಮತ್ತು ಸಂಶೋಧಕರು. ನಾನ್‌ ಫಿಕ್ಷ ನ್‌ ವಿಭಾಗದಲ್ಲಿ ಅವರು 2011ನೇ ಸಾಲಿನ ಪುಲಿಟ್ಜರ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. The Emperor of All Maladies: A Biography of Cancer ಕೃತಿಗೆ ಈ ಪ್ರಶಸ್ತಿ ನೀಡಲಾಗಿದೆ. ಮುಖರ್ಜಿ ಅವರು ಭಾರತದಲ್ಲಿ ಹುಟ್ಟಿ, ಅಮೆರಿಕದಲ್ಲಿ ಫಿಜಿಸಿಯನ್‌ ಮತ್ತು ಸಂಶೋಧಕರಾಗಿ ಬೆಳವಣಿಗೆ ಕಂಡವರು. ಅವರ ಈ ಕೃತಿಯನ್ನು Cancer: The Emperor of all Maladies ಎಂಬ ಹೆಸರಿನಲ್ಲಿ ಡಾಕ್ಯುಮೆಂಟರಿ ಕೂಡ ಮಾಡಲಾಗಿದೆ. ** - 2016ನೇ ಸಾಲಿನ ಪ್ರಶಸ್ತಿ ವಿಜೇತರು- ಅಸೋಸಿಯೇಟೆಡ್‌ ಪ್ರೆಸ್‌(ಪಬ್ಲಿಕ್‌ ಸರ್ವಿಸ್‌) ಲಾಸ್‌ ಏಂಜಲಿಸ್‌ ಟೈಮ್ಸ್‌ ಸ್ಟಾಫ್‌(ಬ್ರೇಕಿಂಗ್‌ ನ್ಯೂಸ್‌ ರಿಪೋರ್ಟಿಂಗ್‌) ಲಿಯೊನೊರಾ ಪೀಟರ್‌ ಆ್ಯಂಟೋನ್‌ ಮತ್ತು ಆಂಟೋನಿ ಕಾರ್ಮೀರ್‌, ಮೈಕೆಲ್‌ ಬರ್ಗಾ(ತನಿಖಾ ವರದಿ) ಟಿ. ಕ್ರಿಶ್ಚಿಯನ್‌ ಮಿಲ್ಲರ್‌ ಆಫ್‌ ಪ್ರೊಪಬ್ಲಿಕಾ ಮತ್ತು ಕೆನ್‌ ಆರ್ಮಸ್ಟ್ರಾಂಗ್‌ ಆಫ್‌ ದಿ ಮಾರ್ಷಲ್‌ ಪ್ರೊಜೆಕ್ಟ್(ಎಕ್ಸ್‌ಪ್ಲಾನಟರಿ ರಿಪೋರ್ಟಿಂಗ್‌) ಮೈಕೆಲ್‌ ಲಾಫೊರ್ಜಿಯಾ, ಕಾರಾಫಿಟ್ಜ್‌ ಪ್ಯಾಟ್ರಿಕ್‌ ಮತ್ತು ಲಿಸಾ ಗಾರ್ಟನರ್‌ (ಲೋಕಲ್‌ ರಿಪೋರ್ಟಿಂಗ್‌) ದಿ ವಾಷಿಂಗ್ಟನ್‌ ಪೋಸ್ಟ್‌ ಸ್ಟಾಫ್‌(ನ್ಯಾಷನಲ್‌ ರಿಪೋರ್ಟಿಂಗ್‌) ನ್ಯೂಯಾರ್ಕ್‌ ಟೈಮ್ಸ್‌ನ ಅಲಿಸ್ಸಾ ಜೆ ರೂಬಿನ್‌(ಇಂಟರ್‌ನ್ಯಾಷನಲ್‌ ರಿಪೋರ್ಟಿಂಗ್‌) ದಿ ನ್ಯೂ ಯಾರ್ಕರ್‌ನ ಕ್ಯಾಥರಿನ್‌ ಶುಲ್ಜ್‌(ಫೀಚರ್‌ ರೈಟಿಂಗ್‌) ದಿ ಬೋಸ್ಟನ್‌ ಗ್ಲೋಬನ್‌ನ ಫರ್ಹಾ ಸ್ಟಾಕ್‌ಮನ್‌(ಕಮೆಂಟರಿ) ದಿ ನ್ಯೂ ಯಾರ್ಕರ್‌ನ ಎಮಿಲಿ ನಸ್ಬಾಮ್‌(ಕ್ರಿಟಿಸಿಮ್‌) ಜಾನ್‌ ಹ್ಯಾಕ್‌ವರ್ಥ ಮ್ತತು ಬ್ರೇನ್‌ ಗ್ಲೀಸನ್‌(ಸಂಪಾದಕೀಯ ಬರಹ) ಜಾಕ್‌ ಒಹಮಾನ್‌(ಸಂಪಾದಕೀಯ ಕಾರ್ಟೂನ್‌) ಮಾರಿಶಿಯೊ ಲಿಮಾ, ಸೆರ್ಗೆ ಪೊನೊಮಾರ್ವ್‌, ಟೈಲರ್‌ ಹಿಕ್ಸ್‌, ಡೇನಿಯಲ್‌ ಇಟ್ಟರ್‌-ನ್ಯೂಯಾರ್ಕ್‌ ಟೈಮ್ಸ್‌ ಮತ್ತು ರಾಯಟರ್ಸ್‌ ಫೋಟೊಗ್ರಫಿ ಸ್ಟಾಫ್‌ ಬೋಸ್ಟನ್‌ ಗ್ಲೋಬ್‌ ಜೆಸ್ಸಿಕಾ ರಿನಾಲ್ಡಿ (ಫೀಚರ್‌ ಫೋಟೋಗ್ರಫಿ) ಲಿನ್‌ ಮ್ಯಾನುವಲ್‌ ಮಿರಾಂಡ್‌ ಅವರ ಹ್ಯಾಮಿಲ್ಟನ್‌(ಡ್ರಾಮಾ) ವಿಯೆಟ್‌ ನ್ಯೂಯೇನ್‌- ದಿ ಸಿಂಪಥೈಯಸರ್‌(ಫಿಕ್ಷ ನ್‌) ಟಿ.ಜೆ.ಸ್ಟೈಲ್ಸ್‌ ಅವರ- ಕಸ್ಟರ್ಸ್‌ ಟ್ರಯಲ್ಸ್‌: ಎ ಲೈಫ್‌ ಆನ್‌ ಫ್ರಂಟೀಯರ್‌ ಆಫ್‌ ನ್ಯೂ ಅಮೆರಿಕಾ(ಇತಿಹಾಸ) ವಿಲಿಯಮ್‌ ಫಿನ್ನೆಗನ್‌ ಅವರ ಬರ್ಬಾರಿಯನ್‌ ಡೇಸ್‌: ಎ ಸರ್ಫೀಂಗ್‌ ಲೈಫ್‌(ಬಯೋಗ್ರಫಿ, ಅಟೋಬಯೋಗ್ರಫಿ) ಜಾಬಿ ವಾರಿಕ್‌ ಅವರು ಬ್ಲ್ಯಾಕ್‌ ಫ್ಲ್ಯಾಗ್ಸ್‌: ದಿ ರೈಸ್‌ ಆಫ್‌ ಐಸೀಸ್‌(ಜನರಲ್‌ ನಾನ್‌ಫಿಕ್ಷ ನ್‌) ಪೀಟರ್‌ ಬಾಲ್ಕೈನ್‌- ಒಜೋನ್‌ ಜರ್ನಲ್‌(ಕವಿತೆ) ಹೆನ್ರಿ ಥ್ರೆಡ್‌ಗಿಲ್‌(ಸಂಗೀತ)

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು