*PDO ಪರೀಕ್ಷೆ ಜನವರಿಯಲ್ಲಿ:~*

*ಯಾವ ಯಾವ ಪರೀಕ್ಷೆ ಕೇಂದ್ರಗಳಲ್ಲಿ ಎಷ್ಟೆಷ್ಟು ಅಭ್ಯರ್ಥಿಗಳು ಪರೀಕ್ಷಾ ಬರೆಲಿದ್ದಾರೆ?:*

PDO ಪರೀಕ್ಷೆ ಜನವರಿಯ
1624 ಪಿಡಿಓ & ಪಂ. ಕಾರ್ಯದರ್ಶಿ ಹುದ್ದೆಗೆ ಬಂದಿದ್ದು ಬರೋಬ್ಬರಿ 3.62 ಲಕ್ಷ ಅರ್ಜಿ.!!*

ಜನವರಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ

ತಾಲೂಕು ಕೇಂದ್ರಗಳಲ್ಲೂ ಆಯೋಜಿಸಲು ನಿರ್ಧಾರ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಕಾರವು 815 ಪಂಚಾಯಿತಿ ಅಭಿವೃದ್ ಅಕಾರಿ (ಪಿಡಿಓ) ಹಾಗೂ 809 ಗ್ರಾ.ಪಂ. ಕಾರ್ಯದರ್ಶಿ ಗ್ರೇಡ್‌-1 ಹುದ್ದೆಗಳ ನೇರ ನೇಮಕಕ್ಕೆ ನಡೆಸಲಿರುವ ಸ್ಪರ್ಧಾತ್ಮಕ ಪರೀಕ್ಷೆಗೆ *ಒಟ್ಟು 3,62,899 ಅಭ್ಯರ್ಥಿಗಳು ಹಾಜರಾಗಲಿದ್ದಾರೆ.*

ಡಿಸೆಂಬರ್‌ 4 ರಂದು ಪರೀಕ್ಷೆ ನಡೆಸಲು ಪ್ರಾಕಾರ ಉದ್ದೇಶಿಸಿತ್ತು. ಆದರೆ, ನಿರೀಕ್ಷೆಗಿಂತ ಹೆಚ್ಚು  ಸಂಖ್ಯೆಯ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿರುವುದರಿಂದ ಪರೀಕ್ಷೆ ನಡೆಸಲು ಜಿಲ್ಲಾ ಕೇಂದ್ರಗಳಲ್ಲಿ ಅಷ್ಟು ಸಂಖ್ಯೆಯ ಕಾಲೇಜುಗಳು ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ತಾಲೂಕು ಕೇಂದ್ರಗಳಲ್ಲಿಯೂ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ.

ಈ ನಡುವೆ, ಈದ್‌ಮಿಲಾದ್‌, ಕ್ರಿಸ್ಮಸ್‌ ಹಬ್ಬಗಳ ಜತೆಗೆ, ಡಿ. 18 ರಂದು ಅಖಿಲ ಭಾರತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯೊಂದು ನಡೆಯುತ್ತಿದೆ.
ಆದ್ದರಿಂದ ಡಿಸೆಂಬರ್‌ನಲ್ಲಿ ಪರೀಕ್ಷೆ ನಡೆಸಲು ಅಡ್ಡಿಯಾಗುತ್ತಿದೆ. ಈ ಕಾರಣಕ್ಕಾಗಿ ಜನವರಿ 2 ಅಥವಾ 3 ನೇ ಭಾನುವಾರ ಪರೀಕ್ಷೆ ನಡೆಸಲು ಪ್ರಾಕಾರ ತೀರ್ಮಾನಿಸಿದೆ.

''ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಗರಿಷ್ಠ 1.80 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದರು. ಹೀಗಾಗಿ, ಇದುವರೆಗೆ ಜಿಲ್ಲಾ ಕೇಂದ್ರಗಳ ಪಿಯು ಕಾಲೇಜುಗಳನ್ನಷ್ಟೇ ಪರೀಕ್ಷೆಗೆ ಬಳಸಿಕೊಳ್ಳಲಾಗುತ್ತಿತ್ತು. ಆದರೆ,

ಪಿಡಿಓ ಹಾಗೂ ಗ್ರಾ.ಪಂ. ಕಾರ್ಯದರ್ಶಿ ಗ್ರೇಡ್‌-1 ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ 3,62,899 ಅಭ್ಯರ್ಥಿಗಳು
ಹಾಜರಾಗುತ್ತಿರುವುದರಿಂದ *ಕನಿಷ್ಟ 750 ಕಾಲೇಜುಗಳು ಬೇಕಾಗಬಹುದು.* ಹೀಗಾಗಿ, ಕೇವಲ ಪದವಿ ಪೂರ್ವ ಕಾಲೇಜುಗಳಷ್ಟೇ ಅಲ್ಲದೆ, ಪ್ರೌಢಶಾಲೆ, ಎಂಜಿನಿಯರಿಂಗ್‌ ಹಾಗೂ ಪದವಿ ಕಾಲೇಜುಗಳ ಕೊಠಡಿಗಳನ್ನೂ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ,'' ಎಂದು ಕನಾರ್ಟಕ ಪರೀಕ್ಷಾ ಪ್ರಾಕಾರದ ಆಡಳಿತಾಕಾರಿ ಗಂಗಾಧರಯ್ಯ 'ವಿಕ'ಕ್ಕೆ ತಿಳಿಸಿದರು.

*''ಸ್ಪರ್ಧಾತ್ಮಕ ಪರೀಕ್ಷೆಗೆ ಕಾಲೇಜುಗಳನ್ನು ಬಿಟ್ಟು ಕೊಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆದು ಕೋರಲಾಗುತ್ತಿದೆ. ಬಹುಶಃ ಇನ್ನೊಂದೆರಡು ದಿನಗಳಲ್ಲಿ ಪರೀಕ್ಷಾ ದಿನಾಂಕವನ್ನು ಅಂತಿಮಗೊಳಿಸಲಾಗುತ್ತದೆ,'' ಎಂದು ಅವರು ಸ್ಪಷ್ಟಪಡಿಸಿದರು.*

''ದಕ್ಷಿಣ ಕನ್ನಡ, ಕೊಡಗು, ಉಡುಪಿ, ಉತ್ತರ ಕನ್ನಡದಂತಹ ಜಿಲ್ಲೆಗಳಲ್ಲಿ ಪರೀಕ್ಷೆ ನಡೆಸಲು ಅಡ್ಡಿ ಇಲ್ಲ. ಆದರೆ,
*ಬೆಳಗಾವಿ, ಬಾಗಲಕೋಟ, ವಿಜಯಪುರದಂತಹ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರ*ೆ.

ಆದರೆ, ಅಭ್ಯರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕಾಲೇಜುಗಳು ಲಭ್ಯವಾಗದ ಕಾರಣ ತಾಲೂಕು ಕೇಂದ್ರಗಳಲ್ಲಿಯೂ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ,'' ಎಂದು ಅವರು ಹೇಳಿದರು.

*4,96,873 ಮಂದಿ ಅರ್ಜಿ ಸಲ್ಲಿಕೆ:*

ಸ್ಪರ್ಧಾತ್ಮಕ ಪರೀಕ್ಷೆಗೆ ಒಟ್ಟು 4,96,863 ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರೂ 3,50,375 ಮಂದಿ ಪರೀಕ್ಷಾ ಶುಲ್ಕ ಪಾವತಿಸಿದ್ದಾರೆ.

ಇನ್ನು ಪರೀಕ್ಷಾ ಶುಲ್ಕದಿಂದ ವಿನಾಯಿತಿ ಪಡೆದಿರುವ 12,332 ವಿಶೇಷಚೇತನರೂ ಸೇರಿದರೆ ಒಟ್ಟು 3,62,899 ಮಂದಿ ಪರೀಕ್ಷೆಗೆ ಹಾಜರಾಗುವುದು ದೃಢವಾಗಿದೆ.

*ಯಾವ ಕೇಂದ್ರಗಳಲ್ಲಿ ಎಷ್ಟು ಅರ್ಜಿ:?*

ಬಾಗಲಕೋಟ- 12,316,

ಬೆಂಗಳೂರು- 46,213,

ಬೆಳಗಾವಿ- 21,214,

ಬಳ್ಳಾರಿ- 10,928,

ಬೀದರ್‌- 8,294,

ವಿಜಯಪುರ- 24,734,

ಚಾಮರಾಜನಗರ- 4,349,

ಚಿಕ್ಕಬಳ್ಳಾಪುರ- 6,590,

ಚಿಕ್ಕಮಗಳೂರು- 5,710,

ಚಿತ್ರದುರ್ಗ- 11,578,

ದಕ್ಷಿಣ ಕನ್ನಡ- 8079,

ದಾವಣಗೆರೆ- 15,223,

ಧಾರವಾಡ- 20,421,

ಗದಗ- 7,489,

ಕಲಬುರಗಿ- 23,248,

ಹಾಸನ- 10,376,

ಹಾವೇರಿ- 10,095,

ಕೊಡಗು- 2087,

ಕೋಲಾರ- 8407,

ಕೊಪ್ಪಳ- 8,963,

ಮಂಡ್ಯ- 7,573,

ಮೈಸೂರು- 24,458,

ರಾಯಚೂರು- 10,933,

ರಾಮನಗರ- 4801,

ಶಿವಮೊಗ್ಗ- 14,672,

ತುಮಕೂರು- 16,015,

ಉಡುಪಿ- 5766,

ಉತ್ತರ ಕನ್ನಡ- 5,791,

ಯಾದಗಿರಿ- 6,384

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು