ಆಧಾರ್ ನಂಬರ್‍ನಿಂದ ಮೊಬೈಲ್‍ನಲ್ಲೇ ಹಣದ ವಹಿವಾಟು – ಸಿದ್ಧವಾಗ್ತಿದೆ ಕೇಂದ್ರ ಸರ್ಕಾರದ ಪ್ಲಾನ
December 2, 2016
ನವದೆಹಲಿ: ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್‍ಗಳ ಜೊತೆ ಆಧಾರ್ ಕಾರ್ಡ್ ನಂಬರ್‍ನಿಂದಲೂ ಹಣ ಪಡೆಯುವ ವ್ಯವಸ್ಥೆಯನ್ನ ಶೀಘ್ರದಲ್ಲೇ ಕೇಂದ್ರ ಸರ್ಕಾರ ಜಾರಿಗೆ ತರಲಿದೆ.
ಹಾಗಿದ್ರೆ ಆಧಾರ್ ಕಾರ್ಡ್ ನಂಬರ್ ಮೂಲಕ ಹಣ ಪಡೆಯುವ ವ್ಯವಸ್ಥೆ ಹೇಗೆ ಜಾರಿಗೆ ಬರುತ್ತೆ ಅಂತ ನೋಡ್ಬೇಕು ಅಂದ್ರೆ ಒಂದಿಷ್ಟು ಅಂಶಗಳನ್ನ ನೀವು ತಿಳಿದುಕೊಳ್ಳಲೇಬೇಕು. ಕ್ಯಾಶ್‍ಲೆಸ್ ಸಮಾಜದ ಉದ್ದೇಶ ಹೊಂದಿರೋ ಕೇಂದ್ರ ಸರ್ಕಾರ ಮೊಬೈಲ್ ಫೋನ್‍ಗಳ ಮೂಲಕ ಆಧಾರ್ ನಂಬರ್‍ನಿಂದಲೇ ಹಣದ ವಹಿವಾಟು ನಡೆಸುವ ವ್ಯವಸ್ಥೆಯನ್ನ ತರಲಿದೆ.
ಆಧಾರ್ ಮೂಲಕ ನಡೆಯುವ ವಹಿವಾಟು ಕಾರ್ಡ್‍ಲೆಸ್ ಮತ್ತು ಪಿನ್‍ಲೆಸ್ ಆಗಿರಲಿದೆ. ಅಂದರೆ ಇದಕ್ಕೆ ನೀವು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‍ನಂತೆ ಕಾರ್ಡ್ ಸ್ವೈಪ್ ಮಾಡಿ ಸೀಕ್ರೆಟ್ ಪಿನ್ ನಂಬರ್ ಹಾಕೋ ಅಗತ್ಯವಿರುವುದಿಲ್ಲ. ಸ್ಮಾರ್ಟ್ ಫೋನ್ ಹೊಂದಿರುವವರು ಆಧಾರ್ ನಂಬರ್ ದೃಢೀಕರಿಸಿ ಹಾಗೂ ಹೆಬ್ಬೆರಳಿನ ಗುರುತು/ ಕಣ್ಣಿನ ಪಾಪೆಯನ್ನು ಸ್ಕ್ಯಾನ್ ಮಾಡುವ ಮೂಲಕ ವ್ಯವಹಾರ ನಡೆಸಬಹುದು ಎಂದು ಯುನೀಕ್ ಐಡೆಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾ(ಯುಐಡಿಅಐ)ನ ನಿರ್ದೇಶಕರಾದ ಅಜಯ್ ಪಾಂಡೆ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಆಧಾರ್ ಮೂಲಕ ಹಣದ ವಹಿವಾಟಿಗಾಗಿ ಎಲ್ಲಾ ಮೊಬೈಲ್ ಉತ್ಪಾದಕ ಕಂಪೆನಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಭಾರತದಲ್ಲಿ ತಯಾರಾಗೋ ಎಲ್ಲಾ ಮೊಬೈಲ್‍ಗಳಲ್ಲಿ ಹೆಬ್ಬೆರಳು ಅಥವಾ ಕಣ್ಣಿನ ಪಾಪೆಯನ್ನು ಗುರುತಿಸಬಲ್ಲ ಇನ್‍ಬಿಲ್ಟ್ ಫೀಚರ್ ಅಳವಡಿಸುವ ಬಗ್ಗೆ ಕೇಳಿದ್ದೇವೆ ಎಂದಿ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಮಿತಾಬ್ ಕಾಂತ್ ಹೇಳಿದ್ದಾರೆ. ಇದಕ್ಕಾಗಿ ಕೇಂದ್ರ ಸರ್ಕಾರ ವ್ಯಾಪಾರಿಗಳು ಹಾಗೂ ಅಂಗಡಿ ಮಾಲೀಕರು ಬಳಸಬಹುದಾದಂತಹ ಒಂದು ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿದ್ದಾರೆ.
ಈಗಾಗಲೇ ಭಾರತದ 1.08 ಕೋಟಿ ಜನರಿಗೆ 12 ಸಂಖ್ಯೆಗಳುಳ್ಳ ಆಧಾರ್ ನಂಬರ್ ನೀಡಲಾಗಿದೆ. ಇದರಲ್ಲಿ ಶೇ.99ರಷ್ಟು ಯುವಕರಿಗೆ ಆಧಾರ್ ನಂಬರ್ ಇದೆ. ಜನ ತಮ್ಮ ಆಧಾರ್ ನಂಬರನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಕೊಂಡು ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್(ಎಇಪಿಎಸ್) ಮೂಲಕ ಹಣ ವರ್ಗಾವಣೆ, ಬ್ಯಾಲೆನ್ಸ್ ಎನ್‍ಕ್ವೈರಿ, ಠೇವಣಿ ಹೂಡುವುದು ಹಾಗೂ ಹಣ ವಿತ್‍ಡ್ರಾ ಮಾಡಬಹುದಾಗಿದೆ.
Comments
Post a Comment