ಭಾರತೀಯ ಭೂಸೇನೆ, ವಾಯುಪಡೆಗೆ ನೂತನ ದಳಪತಿಗಳು



ಹೊಸದಿಲ್ಲಿ: ಭಾರತೀಯ ಭೂಸೇನೆ ಮತ್ತು ವಾಯುಪಡೆಗೆ ನೂತನ ದಳಪತಿಗಳ ನೇಮಕ ನಡೆದಿದೆ. ಲೆಫ್ಟಿನೆಂಟ್‌ ಜನರಲ್‌ ಬಿಪಿನ್‌ ರಾವತ್‌ ಅವರು ಭೂಸೇನೆ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಅದೇ ರೀತಿ ಏರ್‌ ಮಾರ್ಷಲ್‌ ಬಿ ಎಸ್‌ ಧನೋವಾ ಅವರು ವಾಯುಪಡೆಯ ಸಾರಥ್ಯವಹಿಸಿಕೊಳ್ಳಲಿದ್ದಾರೆ. ಹಾಲಿ ಮುಖ್ಯಸ್ಥರಾದ ಜನರಲ್‌ ದಲ್ಬೀರ್‌ ಸಿಂಗ್‌ ಸುಹಾಗ್‌ ಮತ್ತು ಏರ್‌ ಮಾರ್ಷಲ್‌ ಅರೂಪ್‌ ರಾಹಾ ಅವರ ಅಧಿಕಾರಾವಧಿ ಶೀಘ್ರ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹೊಸ ಮುಖ್ಯಸ್ಥರ ನೇಮಕ ನಡೆದಿದೆ. ಜನವರಿ 10ರಂದು ಭೂಸೇನಾ ಮುಖ್ಯಸ್ಥ ಜನರಲ್‌ ಸುಹಾಗ್‌ ನಿವೃತ್ತಿಗೊಳ್ಳುತ್ತಿದ್ದು, ಅವರ ಉತ್ತರಾಧಿಕಾರಿಯಾಗಿ ರಾವತ್‌ ನೇಮಕ ನಡೆದಿದೆ. ವಿಳಂಬವಾಗಿ ಪ್ರಕಟ ನಿಯಮದ ಪ್ರಕಾರ ಹಾಲಿ ಭೂಸೇನಾ ಮುಖ್ಯಸ್ಥರು ಹುದ್ದೆಯಿಂದ ನಿವೃತ್ತರಾಗುವುದಕ್ಕೆ ಕನಿಷ್ಠ 60 ದಿನ ಮೊದಲು ಹೊಸ ಮುಖ್ಯಸ್ಥರ ಹೆಸರು ಪ್ರಕಟಿಸಬೇಕು. ಸಶಸ್ತ್ರಪಡೆಯ ಎಲ್ಲರಿಗೂ ಹೊಸ ಮುಖ್ಯಸ್ಥರು ಪರಿಚಿತರಾಗಲು ಮತ್ತು ಸೇನಾ ಮುಖ್ಯಸ್ಥರ ಕೆಲಸಗಳನ್ನು ಹೊಸ ಮುಖ್ಯಸ್ಥರು ಅರಿತುಕೊಳ್ಳಲು ಸಹಾಯವಾಗಬೇಕು ಎಂಬ ಕಾರಣದಿಂದ ಈ ನಿಯಮ ರೂಪಿಸಲಾಗಿದೆ. ಆದರೆ, ಜ. ದಲ್ಬೀರ್‌ ನಿವೃತ್ತರಾಗುವುದಕ್ಕೆ ಒಂದು ತಿಂಗಳೂ ಉಳಿದಿಲ್ಲ. ಹೊಸ ಮುಖ್ಯಸ್ಥರ ನೇಮಕ ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ನುರಿತ ಸೇನಾನಿ ರಾವತ್‌ ಲೆ.ಜ.ರಾವತ್‌ ಒಬ್ಬ ನುರಿತ ಸೇನಾನಿ. ಡೆಹ್ರಾಡೂನ್‌ನ ಸೈನಿಕ ಶಾಲೆಯಲ್ಲಿ ಪದವಿ ಪಡೆದ ಲೆ.ಜ.ರಾವತ್‌ 1978 ಡಿಸೆಂಬರ್‌ನಲ್ಲಿ 11 ಗೂರ್ಖಾ ರೈಫಲ್ಸ್‌ನ ಐದನೇ ಬೆಟಾಲಿನ್‌ಗೆ ಸೇರ್ಪಡೆಗೊಂಡರು. ಭಯೋತ್ಪಾದನೆ ನಿಗ್ರಹ ವಿಷಯದಲ್ಲಿ ತಜ್ಞರಾಗಿರುವ ರಾವತ್‌ ಗೆರಿಲ್ಲಾ ಯುದ್ಧ ತಂತ್ರದಲ್ಲೂ ಪರಿಣತರು. ಸೇನಾ ಕಾರಾರ‍ಯಚರಣೆಯ ಮಹಾನಿರ್ದೇಶಕ, ಸೇನಾ ಪ್ರಧಾನ ಕಚೇರಿಯ ಸೇನಾ ಕಾರಾರ‍ಯಲಯದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಲೆ.ಜ.ರಾವತ್‌, ಕಾಂಗೊದಲ್ಲಿ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯಲ್ಲೂ ಕೆಲಸ ಮಾಡಿದ್ದಾರೆ. ರಾ ಮತ್ತು ಗುಪ್ತಚರ ಇಲಾಖೆಗೂ ಹೊಸ ಮುಖ್ಯಸ್ಥರ ನೇಮಕ ಹೊಸದಿಲ್ಲಿ: ದೇಶದ ಪ್ರಖ್ಯಾತ ಗೂಢಚಾರ ಸಂಸ್ಥೆ 'ರಾ' ಮತ್ತು ಗುಪ್ತಚರ ಸಂಸ್ಥೆಗೆ ನೂತನ ಮುಖ್ಯಸ್ಥರ ನೇಮಕ ನಡೆದಿದೆ. ಜಾರ್ಖಂಡ್‌ ಕೇಡರ್‌ನ ಐಪಿಎಸ್‌ ಅಧಿಕಾರಿ ರಾಜೀವ್‌ ಜೈನ್‌ ಗುಪ್ತಚರ ಪಡೆ(ಐಬಿ) ಮುಖ್ಯಸ್ಥರಾಗಿದ್ದರೆ, ಗೂಢಚಾರ ಸಂಸ್ಥೆ 'ರಾ' ಸಾರಥ್ಯವನ್ನು ಅನಿಲ್‌ ದಶಮಾನ ಅವರಿಗೆ ವಹಿಸಲಾಗಿದೆ. ಇವರಿಬ್ಬರ ಅಧಿಕಾರಾವಧಿ ಎರಡು ವರ್ಷಗಳಾಗಿರುತ್ತದೆ. ಐಬಿಯ ವಿಶೇಷ ನಿರ್ದೇಶಕರಾಗಿರುವ ಜೈನ್‌ ಅವರು ಜನವರಿ 1ರಂದು ಅಧಿಕಾರವಹಿಸಿಕೊಳ್ಳುತ್ತಿದ್ದರೆ, ದಶಮಾನ ಅವರು ಡಿಸೆಂಬರ್‌ 31ರಂದೇ ಅಧಿಕಾರ ಗ್ರಹಣ ಮಾಡಲಿದ್ದಾರೆ. 1981ರ ಮಧ್ಯಪ್ರದೇಶ ಕೇಡರ್‌ನ ಐಪಿಎಸ್‌ ಅಧಿಕಾರಿಯಾಗಿರುವ ದಶಮಾನ ಅವರು ಈ ಮೊದಲು ಗೂಢಚಾರ ಸಂಸ್ಥೆಯಲ್ಲಿ ಪಾಕಿಸ್ತಾನ ವಿಭಾಗ ಸಹಿತ ಹಲವು ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು