Expected new IT slabs .. ವಾರ್ಷಿಕ 4 ಲಕ್ಷ ಆದಾಯಕ್ಕೆ ತೆರಿಗೆ ಇಲ್ಲ?

ವಾರ್ಷಿಕ 4 ಲಕ್ಷ ಆದಾಯಕ್ಕೆ ತೆರಿಗೆ ಇಲ್ಲ?

ಏಜೆನ್ಸೀಸ್ | Dec 20, 2016, 03.00 AM IST

ಹೊಸದಿಲ್ಲಿ:ನೋಟು ರದ್ದಿನ ಲಾಭವನ್ನು ಜನರಿಗೆ ವರ್ಗಾಯಿಸುವುದಾಗಿ ಪ್ರಧಾನಿ ಹೇಳಿದ ಬೆನ್ನಿಗೆ ಆದಾಯ ತೆರಿಗೆ ಪದ್ದತಿಯಲ್ಲಿ ಭಾರೀ ಬದಲಾವಣೆಯ ಸುಳಿವು ಲಭಿಸಿದೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಈಗಿನ ವಾರ್ಷಿಕ 2.5 ಲಕ್ಷ ರೂ.ಗಳಿಂದ 4 ಲಕ್ಷ ರೂ.ಗಳಿಗೆ ಹೆಚ್ಚಿಸಲು ಮತ್ತು 4ರಿಂದ 10 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ.10ರಷ್ಟು, 10ರಿಂದ 15 ಲಕ್ಷ ರೂ.ವರೆಗಿನ ವರಮಾನಕ್ಕೆ ಶೇ.15, 15ರಿಂದ 20 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ.20, 20ಲಕ್ಷಕ್ಕಿಂತ ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆ ವಿಧಿಸಲು ಕೇಂದ್ರ ಚಿಂತನೆ ನಡೆಸಿದೆ. ಸದ್ಯವೇ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ನೀತಿಸಂಹಿತೆ ಜಾರಿಗೆ ಬರುವುದರಿಂದ ಅದಕ್ಕಿಂತ ಮೊದಲು ಹೊಸ ಆದಾಯ ತೆರಿಗೆ ನಿಯಮವನ್ನು ಘೋಷಿಸುವ ಸಾಧ್ಯತೆ ಇದೆ. ಹೊಸ ನಿಯಮ ಜಾರಿಗೆ ಬಂದರೆ ದೇಶದ ಬಹುಸಂಖ್ಯಾತ ಕಾರ್ಮಿಕ ವರ್ಗಕ್ಕೆ ಬಹುದೊಡ್ಡ ರಿಲೀಫ್‌ ಸಿಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ತೆರಿಗೆ ನೀತಿಯಲ್ಲಿ ಬದಲಾವಣೆ ವರದಿಯನ್ನು ಸರಕಾರ ತಳ್ಳಿಹಾಕಿದೆ. ಇದೊಂದು ಆಧಾರರಹಿತ ವರದಿ ಎಂದು ಸರಕಾರದ ವಕ್ತಾರ ಫ್ರಾಂಕ್‌ ನರ್ಹೋನಾ ಹೇಳಿದ್ದಾರೆ

The proposed tax
slabs, as reported by the channel
belonging to Network18, are as follows:
Income of Rs 4 lakh to 10 lakh may be
taxed at 10% (the current slab is Rs. 2.5-5
lakh taxed at 10%); Rs 10-15 lakh will be
taxed at 15% (currently Rs5-10 lakh is
taxed at 20%); Rs 15-20 Lakh to be taxed
at 20% (Currently Rs 10 lakh and above is
taxed at 30%) and a slab where income
above Rs 20 lakh will attract a tax of 30%

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023