ಪಂಕಜ್‌ಗೆ ವಿಶ್ವ ಬಿಲಿಯರ್ಡ್ಸ್ ಪ್ರಶಸ್ತಿ Monday, 12.12.2016
ಬೆಂಗಳೂರು: ಭಾರತದ ಅಗ್ರ ಬಿಲಿಯರ್ಡ್ಸ್ ಆಟಗಾರ ಪಂಕಜ್ ಆಡ್ವಾಣಿ ತನ್ನ ವೃತ್ತಿ ಜೀವನದ 11 ನೇ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್ ಪ್ರಶಸ್ತಿ ಜಯಿಸಿದ್ದಾರೆ.
ಫೈನಲ್‌ನಲ್ಲಿ ಅವರು ಪೀಟರ್ ಗಿಲ್‌ಕ್ರಿಸ್ಟ್ ಅವರನ್ನು ಸುಲಭದಲ್ಲಿ ಸೋಲಿಸಿದರು. ಫೈನಲ್‌ನಲ್ಲಿ ಆಡ್ವಾಣಿ ಎರಡು ಬಾರಿಯ ವಿಶ್ವಚಾಂಪಿಯನ್ ಗಿಲ್‌ಗ್ರಿಸ್ಟ್ ವಿರುದ್ಧ ಸಂಪೂರ್ಣ ಪ್ರಾಬಲ್ಯ ಮೆರೆದರು. ಅವರು ಗಿಲ್‌ಕ್ರಿಸ್ಟ್ ಅವರನ್ನು 151-33, 150-95, 124-150, 101-150, 150-50, 152-37, 86-150, 151-104, 150-15 ಅಂತರದಿಂದ ಸೋಲಿಸಿದರು. ಆರಂಭದ ಎರಡು ಗೇಮ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಪಂಕಜ್ 150-33, 150-95 ಅಂತರದಿಂದ ಜಯಿಸಿದ್ದರು.
ಬಳಿಕ ತಿರುಗಿ ಬಿದ್ದ ಗಿಲ್‌ಗ್ರಿಸ್ಟ್ ಸತತ ಮೂರು ಗೇಮ್‌ಗಳನ್ನು ಗೆಲ್ಲುವ ಮೂಲಕ ಪಂಕಜ್‌ರವರನ್ನು ಒತ್ತಡಕ್ಕೆ ತಳ್ಳಿದರು. ಆದರೆ ಅನುಭವಿ ಪಂಕಜ್ ಪಂದ್ಯದ ಮೇಲೆ ಮತ್ತೆ ಹಿಡಿತ ಸಾಧಿಸಿದ್ದು, ಸತತ ಗೇಮ್‌ಗಳನ್ನು ಗೆಲ್ಲುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿದರು. ಸೆಮಿಫೈನಲ್‌ನಲ್ಲಿ ಪಂಕಜ್ ಮ್ಯಾನ್ಮರ್‌ನ ಹಾಟೆ ವಿರುದ್ಧ 5-0 ಅಂಯತರದಿಂದ ಜಯಿಸಿದರು. ಗಿಲ್‌ಕ್ರಿಸ್ಟ್ ಧ್ವಜ್ ಹರಿಯಾ ವಿರುದ್ಧ 5-1 ಅಂತರದಿಂದ ಜಯಿಸಿ ಫೈನಲ್‌ಗೇರಿದ್ದರು.
Comments
Post a Comment