ಬಾಂಕ್ ಖಾತೆದಾರರು ಫೆಬ್ರವರಿ 28ರೊಳಗೆ ಪ್ಯಾನ್ ಕಾರ್ಡ್(ಅಥವಾ ಫಾರ್ಮ್ 60 ಪಡೆಯುವದು) ಹೊಂದುವದು ಕಡ್ಡಾ ಯ:*
Monday, 09.01.2017 ವಿಶ್ವವಾಣಿ
ದೆಹಲಿ: ಶೂನ್ಯ ಮೊತ್ತದ ಖಾತೆ ಹಾಗೂ ಜನ ಧನ್ ಖಾತೆಗಳನ್ನು ಹೊರತು ಪಡಿಸಿ ಇನ್ನುಳಿದ ಬ್ಯಾಂಕ್ ಖಾತೆದಾರರಿಂದ ಪಾನ್ ಕಾರ್ಡ್ ಪಡೆಯುವಂತೆ ಕೇಂದ್ರ ಸರಕಾರ ಆದೇಶ ನೀಡಿದೆ. ಫೆಬ್ರವರಿ 28ರೊಳಗೆ ಪಾನ್ ಸಂಖ್ಯೆ ಅಥವಾ ಫಾರ್ಮ್ 60 ಪಡೆಯಬೇಕು ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಅಧಿಸೂಚನೆ ಹೊರಡಿಸಿದೆ.
ಈ ಹಿನ್ನೆಲೆ ಆದಾಯ ತೆರಿಗೆ ನಿಯಮಗಳಲ್ಲೂ ಬದಲಾವಣೆ ಮಾಡಲಾಗಿದ್ದು, ಈವರೆಗೆ ಪಾನ್ ಅಥವಾ ಫಾರ್ಮ್ 60 ಸಲ್ಲಿಸದ ಗ್ರಾಹಕರು ಈಗ ಸಲ್ಲಿಸಬೇಕು ಎಂದು ಹೇಳಿದೆ. ಆದರೆ, ಈ ನಿಯಮ ಕನಿಷ್ಠ ಉಳಿತಾಯ ಬ್ಯಾಂಕ್ ಠೇವಣಿ ಖಾತೆ (ಬಿಎಸ್'ಬಿಡಿಎ) ಗಳಿಗೆ ಅನ್ವಯಿಸುವುದಿಲ್ಲ.
ಬಿಎಸ್'ಬಿಡಿಎ ಎಂಬುದು ಜನಧನ ಖಾತೆಯನ್ನೂ ಒಳಗೊಂಡ ಶೂನ್ಯ ಮೊತ್ತದ ಖಾತೆಗಳಾಗಿದ್ದು, ಜನ ಸಾಮಾನ್ಯರ ಸರಳ ಬ್ಯಾಂಕಿಂಗ್ ಸೇವೆ ಒದಗಿಸಲು ಈ ಖಾತೆಗಳನ್ನು ತೆರೆಯಲಾಗುತ್ತದೆ. ಇದರಡಿ ಎಟಿಎಂ ಕಾರ್ಡ, ಮಾಸಿಕ ಸ್ಟೇಟ್'ಮೆಂಟ್ ಹಾಗೂ ಚೆಕ್ ಬುಕ್ ಉಚಿತವಾಗಿ ದೊರೆಯುತ್ತದೆ. ಕಳೆದ ತಿಂಗಳಷ್ಟೇ ಆರ್‌ಬಿಐ ಹಣ ಹಿಂಪಡೆತಕ್ಕೆ ಪ್ಯಾನ್ ಕಾರ್ಡ್ ಕಡ್ಡಾಯ ಎಂದು ಹೇಳಿ ಭಾರಿ ಚರ್ಚೆಗೆ ವೇದಿಕೆ ಕಲ್ಪಿಸಿತ್ತು.
Comments
Post a Comment