ಕೇಂದ್ರದ ನೌಕರರಿಗೆ 9 ಸಾವಿರ ರೂ. ಕನಿಷ್ಠ ಪಿಂಚಣಿ ಏಜೆನ್ಸೀಸ್ | Updated Jan 13, 2017
ಕೇಂದ್ರದ ನೌಕರರಿಗೆ 9 ಸಾವಿರ ರೂ. ಕನಿಷ್ಠ ಪಿಂಚಣಿ
ಹೊಸದಿಲ್ಲಿ: ಕೇಂದ್ರ ಸರಕಾರಿ ನೌಕರರಿಗೆ ಮೋದಿ ಸರಕಾರ ಸಂಕ್ರಾಂತಿ ಉಡುಗೊರೆ ನೀಡಿದೆ. ಕೇಂದ್ರ ಸರಕಾರಿ ನೌಕರರ ಕನಿಷ್ಠ ಪಿಂಚಣಿಯನ್ನು 9,000 ರೂ.ಗೆ ಏರಿಸಲಾಗಿದೆ.
ಇದೇ ವೇಳೆ, ನಿವೃತ್ತಿ ಪರಿಹಾರ (ಎಕ್ಸ್ ಗ್ರೇಷಿಯಾ) ಮೊತ್ತವನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ. ಪ್ರಸ್ತುತ ಈ ಮೊತ್ತ 10ರಿಂದ 15 ಲಕ್ಷ ರೂ. ಇದ್ದು, ಇನ್ನು ಮುಂದೆ ನಿವೃತ್ತಿಯಾಗುವ ನೌಕರರು 25ರಿಂದ 35 ಲಕ್ಷ ರೂ. ಎಕ್ಸ್ ಗ್ರೇಷಿಯಾ ಪಡೆಯಲಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಗುರುವಾರ ತಿಳಿಸಿದ್ದಾರೆ.
'ದೇಶದ ಶಕ್ತಿಯಾಗಿರುವ ನಿವೃತ್ತ ನೌಕರರನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಇಂಥ ನಿರ್ಧಾರಕ್ಕೆ ಬರಲಾಗಿದೆ,' ಎಂದು ಸಿಂಗ್ ತಿಳಿಸಿದ್ದಾರೆ.
ದೇಶದಲ್ಲಿ ಗರಿಷ್ಠ ಬೆಲೆಯ ನೋಟುಗಳು ರದ್ದಾದ 50 ದಿನಗಳ ನಂತರ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಗರ್ಭಿಣಿಯರು, ಹಿರಿಯ ನಾಗರಿಕರು ಹಾಗೂ ರೈತರಿಗೆ ಅನುಕೂಲವಾಗುವಂಥ ಕೆಲವು ಯೋಜನೆಗಳನ್ನು ಪ್ರಕಟಿಸಿ, ಮಿನಿ ಬಜೆಟ್‌ವೊಂದನ್ನು ಮಂಡಿಸಿದ್ದರು. ಇದೀಗ ಮತ್ತೆ ಸಂಕ್ರಾಂತಿ ಹಿನ್ನೆಲೆಯಲ್ಲಿ ನಿವೃತ್ತ ನೌಕರರಿಗೆ ಅನುಕೂಲವಾಗುವಂಥ ಯೋಜನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ
Comments
Post a Comment