ಹಾಟ್ ಏರ್ ಬೆಲೂನ್‍ನಲ್ಲಿ ಭೂ ಪ್ರದಕ್ಷಿಣೆ ವಿಶ್ವದಾಖಲೆ
ಈ ಜಗತ್ತಿನಲ್ಲಿ ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಗುರಿ ಸಾಧಿಸುವ ಛಲ, ಆತ್ಮವಿಶ್ವಾಸ ಮತ್ತು ಅಪಾರ ಪರಿಶ್ರಮದಿಂದ ಇದು ಸಾಧ್ಯ. ರಷ್ಯಾದ ಸಾಹಸಿ ಫೆಡೊರ್ ಕೊನ್‍ಯುಖೋ ಇತ್ತೀಚೆಗೆ ಹಾಟ್ ಏರ್ ಬೆಲೂನ್‍ನಲ್ಲಿ ಭೂ ಪ್ರದಕ್ಷಿಣೆ ಮೂಲಕ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ. ರಷ್ಯಾದ ಸಾಹಸಿ ಫೆಡೊರ್ ಕೊನ್‍ಯುಖೋವ್ ಹಾಟ್ ಏರ್ ಬೆಲೂನ್‍ನಲ್ಲಿ ಕೇವಲ 11 ದಿನಗಳಲ್ಲಿ ಭೂ ಪ್ರದಕ್ಷಿಣೆ ಮೂಲಕ ವಿಶ್ವವಿಕ್ರಮದ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ರಷ್ಯಾದ 64 ವರ್ಷಗಳ ಪಾದ್ರಿ ಮತ್ತು ಹಾಟ್ ಏರ್ ಬೆಲೂನ್ ಸಾಹಸಿ ಫೆಡೊರ್ ಕೊನಿಯುಖೊವ್ ಹಿಂದಿನ ವಿಶ್ವ ದಾಖಲೆಯನ್ನು ಮುರಿಯಲು ಒಬ್ಬಂಟಿಯಾಗಿ ಹಾಟ್ ಏರ್ ಬೆಲೂನ್‍ನಲ್ಲಿ ಭುವನ ಪ್ರದಕ್ಷಿಣೆ ಆರಂಭಿಸಿದ್ದರು. 2002ರಲ್ಲಿ ಒಬ್ಬಂಟಿಯಾಗಿ ವಿಮಾನದಲ್ಲಿ ಅಮೆರಿಕದ ವೈಮಾನಿಕ ಸ್ಟೀವ್ ಪೋಸ್ಟೆಟ್ ಯಶಸ್ವಿ ವಿಶ್ವ ಪ್ರದಕ್ಷಿಣೆ ಆರಂಭಿಸಿದ್ದ ಆಸ್ಟ್ರೇಲಿಯಾದ ನೋರ್ಥಾಮ್ ಅದೇ ಸ್ಥಳದಿಂದ ಫೆಡೊರ್ ಹಾಟ್ ಏರ್ ಬೆಲೂನ್ ಮೂಲಕ ಈ ಸಾಹಸ ಕೈಗೊಂಡರು. ಪೋಸ್ಟೆಟ್ಗೆ ಪ್ರಪಂಚ ಪರ್ಯಟನೆ ಮಾಡಲು ಹದಿಮೂರುವರೆ ದಿನಗಳು ಬೇಕಾದವು. ಈ ದಾಖಲೆಯನ್ನು ಅಳಿಸಿ ಹಾಕುವ ದೃಢ ಆತ್ಮವಿಶ್ವಾಸ ಹೊಂದಿದ್ದ ಫೆಡೊರ್ ಕೇವಲ 11 ದಿನಗಳಲ್ಲಿ ಈ ಪ್ರದಕ್ಷಿಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. 1983ರಲ್ಲಿ ಹೆಲಿಕಾಪ್ಟರ್ ಮೂಲಕ ಮೊಟ್ಟಮೊದಲ ಬಾರಿಗೆ ಒಬ್ಬಂಟಿಯಾಗಿ ಪ್ರಪಂಚ ಪರ್ಯಟನೆ ಮಾಡಿದ್ದ ಡಿಕ್ ಸ್ಮಿತ್, ಫೆಡೊರ್ ಸಾಹಸವನ್ನು ಕೊಂಡಾಡಿದರು.
ಫೆಡೊರ್ ಈಗಾಗಲೇ ಅನೇಕ ಸಾಹಸ ಯಾನಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಮೆಂಟ್ ಎವರೆಸ್ಟ್ ಶಿಖರಾ ರೋಹಣ, ಉತ್ತರದಿಂದ ದಕ್ಷಿಣ ಧೃವಪ್ರದೇಶಕ್ಕೆ ಚಾರಣ ಮತ್ತು ಪೆಸಿಫಿಕ್ ಸಾಗರದಲ್ಲಿ 16,000 ಕಿಲೋಮೀಟರ್‍ಗಳ ರೋಯಿಂಗ್ ಜಲಯಾನ ಇವರ ಸಾಧನೆ ಪಟ್ಟಿಯಲ್ಲಿವೆ. ಈತನ ಸಾಹಸಯಾನಗಳಿಗೆ ಪತ್ನಿ ಅರಿನಾ ಫ್ರೋತ್ಸಾಹ ನೀಡುತ್ತಾರೆ. ಕಳೆದ ಒಂದು ವರ್ಷದಿಂದ ಈ ಸಾಹಸ ಯಾತ್ರೆಗೆ ಸಿದ್ದತೆ ನಡೆಸಿದ್ದ ಇವರು ನ್ಯೂಜಿಲೆಂಡ್, ಚಿಲಿ, ಅರ್ಜೈಂಟಿನಾ, ದಕ್ಷಿಣ ಆಫ್ರಿಕಾ ಮೇಲೆ ಹಾರಾಟ ನಡೆಸಿ ಆಸ್ಟ್ರೇಲಿಯಾಗೆ 11 ದಿನಗಳಲ್ಲಿ ಹಿಂದಿರುಗಿ ವಿಶ್ವವಿಕ್ರಮ ದಾಖಲಿಸಿದ್ದಾರೆ. ಈ ವಿಶ್ವ ಪ್ರದಕ್ಷಿಣೆಯ ಒಟ್ಟು ಪ್ರಯಾಣ 33 ಸಾವಿರ ಕಿಲೋಮೀಟರ್‍ಗಳು..!
Comments
Post a Comment