ರೊನಾಲ್ಡೋಗೆ ಫಿಫಾ ಪ್ರಶಸ್ತಿ :*
Tuesday, 10.01.2017
ಝೌರಿಚ್:ಫಿಫಾ ತನ್ನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೋ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿ ಜಯಿಸಿದ್ದಾರೆ. ಲೀಸಿಸ್ಟರ್ ಸಿಟಿ ಫುಟ್ಬಾಲ್ ಕ್ಲಬ್‌ನ ಕ್ಲೌಡಿಯೋ ರೇನಿಯರಿ ಪುರುಷರ ಶ್ರೇಷ್ಠ ಕೋಚ್ ಪ್ರಶಸ್ತಿ ಪಡೆದಿದ್ದಾರೆ. ಮೂರನೇ ಚಾಂಪಿಯನ್‌ಸ್ ಲೀಗ್ ಪ್ರಶಸ್ತಿ ಜಯಿಸಿದ ರೊನಾಲ್ಡೋ ಇತ್ತೀಚೆಗಷ್ಟೇ ಬಾಲನ್ ಡಿ ಓರ್ ಪ್ರಶಸ್ತಿ ಪಡೆದಿದ್ದರು.
ಅವರು ಲೀಗ್‌ನ 12 ಪಂದ್ಯಗಳಲ್ಲಿ 16 ಗೋಲು ದಾಖಲಿಸಿದ್ದರು. ಹಾಗೆಯೇ ಯುರೋ ಕಪ್ ಜಯಿಸುವ ಮೂಲಕ ದೇಶಕ್ಕೆ ಮೊದಲ ಪ್ರಮುಖ ಪ್ರಶಸ್ತಿಯೊಂದು ಕೊಡಿಸಿದ್ದಾರೆ. ಅವರು ಅರ್ಜೆಂಟಿನಾದ ಲಿಯೋನೆಲ್ ಮೆಸ್ಸಿ ಹಾಗೂ ಫ್ರಾನ್ಸ್ ನ ಆ್ಯಂಟೋನಿ ಗ್ರಿಜ್‌ಮೆನ್ ಅವರನ್ನು ಹಿಂದಿಕ್ಕಿ ಪ್ರಶಸ್ತಿ ಪಡೆದರು.
Comments
Post a Comment