ಡಿಎಲ್,ಎಲ್ಎಲ್ಆರ್, ವಾಹನ ನೋಂದಣಿ ಶುಲ್ಕ ಏರಿಕೆ
ನವದೆಹಲಿ. ಜ. 07 : ವಾಹನ ಚಾಲನೆ ಕಲಿಕಾ ಪರವಾನಗಿ, ಚಾಲನಾ ಪರವಾನಗಿ, ವಾಹನಗಳ ಮಾಲೀಕತ್ವ ಬದಲಾವಣೆ ಮತ್ತು ಸಾಮರ್ಥ್ಯ ಪರೀಕ್ಷಾ ಶುಲ್ಕ ಸೇರಿದಂತೆ ಪ್ರಾದೇಶಿಕ ಸಾರಿಗೆ ಕಚೇರಿಗಳು ಒದಗಿಸುವ ಎಲ್ಲ ಸೇವೆಗಳ ಶುಲ್ಕವನ್ನು ಏರಿಕೆ ಮಾಡಿ, ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಶುಲ್ಕಗಳು 2016ರ ಡಿ.29ರಿಂದ ಅನ್ವಯವಾಗಲಿವೆ.
ಕಲಿಕಾ ಪರವಾನಗಿ (ಎಲ್.ಎಲ್) ಶುಲ್ಕವನ್ನು ರೂ. 30ರಿಂದ ರೂ. 150ಕ್ಕೆ, ಚಾಲನಾ ಪರವಾನಗಿ (ಡಿ.ಎಲ್) ಶುಲ್ಕವನ್ನು ರೂ. 40ರಿಂದ ರೂ. 200ಕ್ಕೆ ಏರಿಕೆ ಮಾಡಿದೆ. ಇದರ ಮೇಲೆ ರಾಜ್ಯ ಸರ್ಕಾರಗಳು ಹೆಚ್ಚಿನ ಶುಲ್ಕ ವಿಧಿಸಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಶುಲ್ಕದ ವಿವರಗಳು :
ಚಾಲನಾ ಪರವಾನಗಿ ಪತ್ರ (ಡಿಎಲ್) – 200 ರೂ.ಕಲಿಕಾ ಪರವಾನಗಿ ಪತ್ರ (ಎಲ್ ಎಲ್ ಆರ್) – 150 ರೂ.ಎಲ್ ಎಲ್ ಆರ್ ಪರೀಕ್ಷಾ ಶುಲ್ಕ – 50 ರೂ.ಡಿಎಲ್ ಪರೀಕ್ಷಾ ಶುಲ್ಕ – 300 ರೂ.ಸ್ಮಾರ್ಟ್ ಕಾರ್ಡ್ : 200 ರೂ.ಡಿಎಲ್ ನವೀಕರಣ : 200 ರೂ.ಅಂತರರಾಷ್ಟ್ರೀಯ ಡಿಎಲ್ – 1000 ರೂ.ಅಪಾಯಕಾರಿ ಸರಕು ಸಾಗಿಸುವ ವಾಹನಗಳ ದೃಢೀಕರಣ ನವೀಕರಣ :100 ರೂ.ನವೀಕರಣ ವಿಳಂಬವಾದರೆ ಪ್ರತಿವರ್ಷಕ್ಕೆ ದಂಡ – 1,000 ರೂ.ವಾಹನ ಚಾಲನಾ ತರಬೇತಿ ಶಾಲೆಗಳ ಪರವಾನಗಿ – 10, 000 ರೂ.ವಾಹನ ಚಾಲನಾ ತರಬೇತಿ ಶಾಲೆಗಳ ಪರವಾನಗಿ ತರಬೇತಿ ಶಾಲೆಗಳ ಪರವಾನಗಿ ನಕಲುಪ್ರತಿ – 5000 ರೂ.ಪರವಾನಗಿ ವಿತರಣಾ ಸಂಸ್ಥೆಗಳ ವಿರುದ್ಧ ಮೇಲ್ಮನವಿ ಸಲ್ಲಿಸುವಿಕೆ: 500 ರೂ
Comments
Post a Comment