ಚಿತ್ರರಂಗದ 15 ಸಾಧಕರಿಗೆ ಚಲನಚಿತ್ರ ಅಕಾಡೆಮಿ ಪ್ರಶಸ್ತಿ

 February 27, 2017 ಚಲನಚಿತ್ರ ಅಕಾಡೆಮಿ ಪ್ರಶಸ್ತಿ

ಬೆಂಗಳೂರು, ಫೆ.27– ಕನ್ನಡದ ಮೊಟ್ಟ ಮೊದಲ ಮಾತನಾಡುವ ಸತಿ ಸುಲೋಚನ ಚಿತ್ರ ನೆನಪಿನಲ್ಲಿ ನಡೆಯಲಿರುವ ಕನ್ನಡ ವಾಕ್ಚಿತ್ರ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ 15 ಸಾಧಕರಿಗೆ ಪ್ರಶಸ್ತಿ ನೀಡಿ ಸತ್ಕರಿಸ ಲಾಗುವುದು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ತಿಳಿಸಿದರು.  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶಸ್ತಿಯು 50 ಸಾವಿರ ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಕಳೆದ ಬಾರಿ 10 ಮಂದಿಯನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿತ್ತು. ಈ ಬಾರಿ 15 ಮಂದಿಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ನಗರದ ಪುಟ್ಟಣಚೆಟ್ಟಿ ಪುರಭವನದಲ್ಲಿ ಮಾ.3ರಂದು ಸಂಜೆ 6 ಗಂಟೆಗೆ ನಡೆಯಲಿರುವ ಪ್ರಶಸ್ತಿ ವಿತರಣಾ ಸಮಾರಂಭವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ ಅವರು ಉದ್ಘಾಟಿಸಲಿದ್ದು, ವಸತಿ ಸಚಿವ ಎಂ.ಕೃಷ್ಣಪ್ಪ, ಮಾಜಿ ಸಚಿವ, ನಟ ಅಂಬರೀಶ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯೆ ಡಾ.ಜಯಮಾಲಾ, ಹಿರಿಯ ಕಲಾವಿದೆ ಡಾ.ಭಾರತಿ ವಿಷ್ಣುವರ್ಧನ್, ನಟ ವಿ.ರವಿಚಂದ್ರನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಪಾಲ್ಗೊಳ್ಳಲಿದ್ದು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರಸಿಂಗ್‍ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.  ಜೆ.ಕೆ.ಶ್ರೀನಿವಾಸಮೂರ್ತಿ (ಅಭಿನಯ)- ಆರ್.ನಾಗೇಂದ್ರರಾವ್ ಪ್ರಶಸ್ತಿ, ಆದವಾನಿ ಲಕ್ಷ್ಮೀದೇವಿ(ಅಭಿನಯ)-ಎಂ.ವಿ.ರಾಜಮ್ಮ ಪ್ರಶಸ್ತಿ, ಎಂ.ಎಸ್.ಉಮೇಶ್(ಹಾಸ್ಯಪಾತ್ರ)-ಟಿ.ಎನ್.ಬಾಲಕೃಷ್ಣ ಪ್ರಶಸ್ತಿ, ಎಸ್.ದೊಡ್ಡಣ್ಣ(ಖಳಪಾತ್ರ)-ತೂಗುದೀಪ ಶ್ರೀನಿವಾಸ್ ಪ್ರಶಸ್ತಿ, ಕೆ.ವಿ.ರಾಜು(ನಿರ್ದೇಶನ)-ಬಿ.ಆರ್.ಪಂತಲು ಪ್ರಶಸ್ತಿ, ಸಿ.ಜಯರಾಮ್(ನಿರ್ಮಾಣ)- ಡಿ.ಶಂಕರಸಿಂಗ್ ಪ್ರಶಸ್ತಿ, ಕುಮಾರ್ ಶೆಟ್ಟರ್(ಪ್ರದರ್ಶನ)-ಬಿ.ಜಯಮ್ಮ ಪ್ರಶಸ್ತಿ, ಪಾಲ್ ಎಸ್.ಚಂದಾನಿ(ಹಂಚಿಕೆ)-ಎಸ್.ವೀರಸ್ವಾಮಿ ಪ್ರಶಸ್ತಿ, ಬಿ.ಕೆ.ಸುಮಿತ್ರಾ( ಸಂಗೀತ -ಗಾಯನ)-ಜಿ.ವಿ.ಐಯ್ಯರ್ ಪ್ರಶಸ್ತಿ, ಡಾ.ಬಿ.ಎಲ್.ವೇಣು(ಚಿತ್ರಸಾಹಿತ್ಯ)- ಹುಣಸೂರು ಕೃಷ್ಣಮೂರ್ತಿ ಪ್ರಶಸ್ತಿ.

ಎಸ್.ವಿ.ಶ್ರೀಕಾಂತ್ (ಛಾಯಾಗ್ರಹಣ) -ಬಿ.ಎಸ್.ರಂಗ ಪ್ರಶಸ್ತಿ, ಡಿ.ವಿ.ರಾಧಾ (ಪೋಷಕಪಾತ್ರ) – ಪಂಡರಿಬಾಯಿ ಪ್ರಶಸ್ತಿ, ದೇವಿ(ತಂತ್ರಜ್ಞಾನ) -ಎಂ.ಪಿ.ಶಂಕರ್ ಪ್ರಶಸ್ತಿ, ಎನ್.ಎಲ್.ರಾಮಣ್ಣ(ಕಾರ್ಮಿಕ ವಿಭಾಗ)-ಶಂಕರ್‍ನಾಗ್ ಪ್ರಶಸ್ತಿ, ರಾಮ್‍ಶೆಟ್ಟಿ ( ಪ್ರಾದೇಶಿಕ ಭಾಷಾ ಚಿತ್ರ)- ಕೆ.ಎನ್.ಟೈಲರ್ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ರಿಜಿಸ್ಟ್ರಾರ್ ದಿನೇಶ್ ತಿಳಿಸಿದರು.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು