ಮೊದಲ ಬಾರಿ ಮನೆ ಖರೀದಿಸುತ್ತಿದ್ದಿರಾ? ಹಾಗಿದ್ದರೆ 2.4 ಲಕ್ಷ ಸಬ್ಸಿಡಿ ಪಡೆಯಿರಿ

ಅವಾಸ್ ಯೋಜನೆ ಅಡಿಯಲ್ಲಿ ಮೊದಲ ಬಾರಿ ಮನೆ ಪಡೆಯುತ್ತಿದ್ದರೆ 2.4 ಲಕ್ಷ ಸಬ್ಸಿಡಿ ಲಾಭ ಪಡೆಯಬಹುದಾಗಿದೆ. ನಿಮ್ಮ ಆದಾಯ ವಾರ್ಷಿಕವಾಗಿ ರೂ.18 ಲಕ್ಷ ಇದ್ದರೂ ಈ ಪ್ರಯೋಜನ ಪಡೆಯಬಹುದು. Written by: Siddu | Monday, February 13, 2017, 10:05 [IST] ನಮ್ಮ ದೇಶದಲ್ಲಿ ಇಲ್ಲಿಯವರೆಗೂ ಸಾವಿರಾರು ಕುಟುಂಬಗಳು ಸ್ವಂತ ಮನೆಯಿಲ್ಲದೆ ಬೀದಿಯಲ್ಲಿವೆ. ಹೀಗಾಗಿ ಪ್ರತಿಯೊಬ್ಬರೂ ಮನೆಗಳನ್ನು ಹೊಂದಿರಬೇಕು ಎನ್ನುವುದು ಸರ್ಕಾರದ ಆಶಯವಾಗಿದ್ದು, 2022ರಲ್ಲಿ ಪ್ರತಿಯೊಬ್ಬರಿಗೂ ಮನೆ ಸಿಗುವಂತಾಗಬೇಕು ಎನ್ನುವುದು ಸರ್ಕಾರದ ಉದ್ದೇಶ. ಆ ಆಶಯಕ್ಕಾಗಿ ಕೇಂದ್ರ ಸರ್ಕಾರ "ಪ್ರಧಾನ ಮಂತ್ರಿ ಅವಾಸ ಯೋಜನೆ" (Pradhan ,Mantri Awas Yojana) ಪ್ರಾರಂಭಿಸಿದೆ. ಇದರಲ್ಲಿ ಬಡವರು, ಅತಿ ಕೆಳವರ್ಗದವರು, ಮಧ್ಯಮ ವರ್ಗದವರು, ಕಡಿಮೆ ಆದಾಯ ಹೊಂದಿರುವವರು, ನೌಕರರು ಹೀಗೆ ಎಲ್ಲರೂ ಒಳಗೊಂಡಿದ್ದಾರೆ. ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಮೊದಲ ಬಾರಿ ಮನೆ ಪಡೆಯುತ್ತಿದ್ದರೆ 2.4 ಲಕ್ಷ ಸಬ್ಸಿಡಿ ಲಾಭ ಪಡೆಯಬಹುದಾಗಿದೆ. ನಿಮ್ಮ ಆದಾಯ ವಾರ್ಷಿಕವಾಗಿ ರೂ.18 ಲಕ್ಷ ಇದ್ದರೂ ಈ ಪ್ರಯೋಜನ ನಿಮ್ಮದಾಗಿಸಬಹುದು. ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರು ಹೊಸ ಗೃಹ ಯೋಜನಾ ನೀತಿಯನ್ನು ಘೋಷಿಸಿದ್ದಾರೆ ನೋಡಿ...  1. 2022ರಲ್ಲಿ ಎಲ್ಲರಿಗೂ ಮನೆ ಪ್ರಧಾನಿ ಮೋದಿಯವರ ಆಶಯದಂತೆ ಅವಾಸ್ ಯೋಜನೆ ಅಡಿಯಲ್ಲಿ 2022ರಲ್ಲಿ ಪ್ರತಿಯೊಬ್ಬರಿಗೂ ಮನೆ ಸಿಗುವಂತಾಗಬೇಕು. ಭಾರತ ಗುಡಿಸಲು ಮುಕ್ತ, ಟೆಂಟ್ ಮುಕ್ತ ದೇಶವಾಗಬೇಕು ಎಂಬ ಗುರಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಪ್ರಧಾನಮಂತ್ರ ಅವಾಸ್ ಯೋಜನೆಗೆ ತೀವ್ರವಾದ ವೇಗವನ್ನು ಕೊಟ್ಟು ಆದಾಯದ ಮಿತಿ ಮತ್ತು ಅವಧಿಯಲ್ಲಿ ಸಡಿಲಿಕೆ ಘೋಷಿಸಿದ್ದಾರೆ. ಪ್ರಧಾನ ಮಂತ್ರಿ ಅವಾಸ ಯೋಜನೆ ಅಡಿ ಸ್ವಂತ ಮನೆ ಪಡೆಯಿರಿ 2. ಸಬ್ಸಿಡಿ ಎಷ್ಟು? ನಿಮ್ಮ ವಾರ್ಷಿಕ ಆದಾಯ ರೂ. 18 ಲಕ್ಷ ಇದ್ದು, ಮೊದಲ ಬಾರಿ ಮನೆ ಖರೀದಿಸುತ್ತಿದ್ದರೆ ಮನೆ ಸಾಲದ ಬಡ್ಡಿಯ ಭಾಗವಾಗಿ ಸರ್ಕಾರದಿಂದ ರೂ. 2.4 ಲಕ್ಷ ಸಬ್ಸಿಡಿ ಪಡೆಯಬಹುದು. 3. ಪ್ರಸ್ತುತ ಸಬ್ಸಿಡಿ ಮಾನದಂಡ? ವಾರ್ಷಿಕವಾಗಿ ಆದಾಯ ರೂ. 6 ಲಕ್ಷ ಇರುವವರು ಪ್ರಸ್ತುತ ಈ ಸಬ್ಸಿಡಿಯ ಲಾಭವನ್ನು ಪಡೆಯುತ್ತಿದ್ದಾರೆ. ಆದರೆ ಈಗ ಇದರ ಮಿತಿಯನ್ನು 6 ಲಕ್ಷದಿಂದ 18 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅಂದರೆ ಈ ಸಬ್ಸಿಡಿ ಪರಿಮಿತಿಯಲ್ಲಿ ಇದೀಗ ರೂ. 18 ಲಕ್ಷದವರೆಗೆ ಆದಾಯ ಗಳಿಸುವವರು ಫಲಾನುಭವಿಗಳು ಆಗಲಿದ್ದಾರೆ. 4. ಸಾಲದ ಅವಧಿ ಎಷ್ಟು? ಈ ಹಿಂದೆ ಸಾಲದ ಅವಧಿ 15 ವರ್ಷಗಳಾಗಿತ್ತು. ಆದರೆ ಈಗ ಇದನ್ನು 20 ವರ್ಷಗಳಿಗೆ ಹೆಚ್ಚಿಸಲಾಗಿದೆ. ಫಲಾನುಭವಿಗಳು ಇದೀಗ ಹೆಚ್ಚುವರಿ ಐದು ವರ್ಷಗಳ ಲಾಭ ಪಡೆಯಲಿದ್ದಾರೆ. 5. ಆದಾಯಕ್ಕೆ ಅನುಗುಣವಾಗಿ ಸಬ್ಸಿಡಿ ಹೌದು. ಇನ್ನುಮುಂದೆ ಫಲಾನುಭವಿಗಳು ತಮ್ಮ ಆದಾಯಕ್ಕೆ ಅನುಗುಣವಾಗಿ ಸಬ್ಸಿಡಿ ದರವನ್ನು ಪಡೆಯಲಿದ್ದಾರೆ. ವಾರ್ಷಿಕವಾಗಿ ರೂ. 6 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರು ಒಟ್ಟು ಸಾಲದ ಮೇಲೆ ಶೇ. 6.5 ಸಬ್ಸಿಡಿ ಪಡೆಯಲಿದ್ದಾರೆ. ಶೇ. 9ರ ಬಡ್ಡಿದರಕ್ಕೆ ಸಾಲ ಪಡೆದರೆ ಮೂಲ ಅಸಲು ರೂ. 6 ಲಕ್ಷಕ್ಕೆ ಶೇ. 2.5 ಬಡ್ಡಿದರ ಮಾತ್ರ ಪಾವತಿಸುತ್ತಾರೆ. 6. ವಾರ್ಷಿಕ ಆದಾಯ 18 ಲಕ್ಷ ಇದ್ದರೆ? ವಾರ್ಷಿಕವಾಗಿ ರೂ. 12 ಲಕ್ಷ ಆದಾಯ ಗಳಿಸುತ್ತಿರುವವರು ಮೂಲ ಅಸಲು ರೂ. 9 ಲಕ್ಷದ ಮೇಲೆ ಶೇ. 4ರಷ್ಟು ಬಡ್ಡಿ ಸಬ್ಸಿಡಿ ಪಡೆಯಲಿದ್ದಾರೆ. ಒಂದು ವೇಳೆ ನಿಮ್ಮ ಆದಾಯ ವಾರ್ಷಿಕವಾಗಿ ರೂ. 18 ಲಕ್ಷ ಇದ್ದರೆ ಮೂಲ ಅಸಲು ರೂ. 12 ಲಕ್ಷದ ಮೇಲೆ ಶೇ. 3ರಷ್ಟು ಸಬ್ಸಿಡಿ ಪಡೆಯಬಹುದು. 7. ಮೋದಿ ಘೋಷಿಸಿರುವ 2 ಸಬ್ಸಿಡಿ ಯೋಜನೆಗಳು ಡಿಸೆಂಬರ್ 31, 2016ರಂದು ನರೇಂದ್ರ ಮೋದಿಯವರು ಎರಡು ಸಬ್ಸಿಡಿಗಳನ್ನು ಘೋಷಿಸಿದ್ದಾರೆ. ಪ್ರಧಾನಮಂತ್ರ ಅವಾಸ್ ಯೋಜನೆ ಅಡಿಯಲ್ಲಿ ಮಧ್ಯಮ ವರ್ಗದ ಜನರಿಗೂ ಈ ಸೌಲಭ್ಯ ಅನ್ವಯವಾಗಲಿದೆ. 8. ರಿಯಲ್ ಎಸ್ಟೇಟ್ ಉತ್ತೇಜನ ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನು ಪ್ರೋತ್ಸಾಹಿಸಲು ಸರ್ಕಾರ ಎರಡು ಹೊಸ ಸಬ್ಸಿಡಿ ಯೋಜನೆಗಳನ್ನು ಘೋಷಣೆ ಮಾಡಿದೆ. ಸಾಲದ ಅವಧಿ 15 ವರ್ಷದಿಂದ 20 ವರ್ಷಗಳಿಗೆ ಹೆಚ್ಚಿಸಿದೆ. 9. ರೂ. 2.4 ಲಕ್ಷ ಸಬ್ಸಿಡಿ ನಿಮ್ಮದಾಗಿಸಿ ಒಟ್ಟು 20 ವರ್ಷಗಳ ಕಾಲಾವಧಿಯ ಮೂರು ಹಂತಗಳಲ್ಲಿ ವಿವಿಧ ಪ್ರಮಾಣದ ಸಬ್ಸಿಡಿಯನ್ನು ವಿಭಿನ್ನ ಆದಾಯಗಳ ಮೇಲೆ ಪಡೆಯಬಹುದಾಗಿದೆ. 2೦ ವರ್ಷಗಳ ಕಾಲಾವಧಿ ಸಾಲದ ಮೇಲೆ ಶೇ. 9ರ ಬಡ್ಡಿದರದಲ್ಲಿ ಶೇ. 3ರ ಸಬ್ಸಿಡಿ ದರದಲ್ಲಿ ಒಟ್ಟು ರೂ. 2.4 ಲಕ್ಷ ಸಬ್ಸಿಡಿ ಗಳಿಸಬಹುದು. ಅಂದರೆ ಪ್ರತಿ ತಿಂಗಳ ಕಂತುಗಳಲ್ಲಿ ಸರಾಸರಿ ರೂ. 2,200ರವರೆಗೆ ಕಡಿತವಾಗುತ್ತದೆ. 10. ಆದಾಯ ತೆರಿಗೆ ಪ್ರಯೋಜನ ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಪಡೆಯುವ ಗೃಹ ಸಾಲದ ಈ ಸಬ್ಸಿಡಿಗೆ ಆದಾಯ ತೆರಿಗೆ ಪ್ರಯೋಜನಗಳು ಸಹ ಅನ್ವಯವಾಗುತ್ತವೆ. ಫಲಾನುಭಿಗಳ ಆದಾಯ ಮತ್ತು ತೆರಿಗೆಗೆ ಅನುಗುಣವಾಗಿ ಇದು ನಿರ್ಧರಿತವಾಗುತ್ತದೆ. 11. ಕಡಿಮೆ ಆದಾಯ ಗುಂಪು(Low Income Group) ಈ ಯೋಜನೆ ಅಡಿಯಲ್ಲಿ ಕಡಿಮೆ ಆದಾಯ ಹೊಂದಿರುವ ಗುಂಪಿನವರು ಮೊದಲ ಬಾರಿ ಮನೆ ಪಡೆಯುವಾಗ ಕೂಡ ಸಬ್ಸಿಡಿ ಅನ್ವಯಿಸುತ್ತದೆ. ಈ ಗುಂಪಿನವರು ಸುಮಾರು ರೂ. 18 ಸಾವಿರದ ವರೆಗೆ ಸಬ್ಸಿಡಿ ಲಾಭ ಪಡೆಯಬಹುದಾಗಿದೆ. 'ಪ್ರಧಾನ ಮಂತ್ರಿ ಜನಧನ ಖಾತೆ' ಯಾಕೆ ತೆರೆಯಬೇಕು? 12. ಇಂಪ್ಲಿಮೆಂಟ್ ಮಾಡುವವರು ಯಾರು? ಕೇಂದ್ರ ಸರ್ಕಾರದ ಈ ಯೋಜನೆಯನ್ನು ನ್ಯಾಷನಲ್ ಹೌಸಿಂಗ್ ಬ್ಯಾಂಕ್NHB() ಮತ್ತು ಹುಡ್ಕೊ(HUDCO) ಸಂಸ್ಥೆಗಳು ಕಾರ್ಯಗತಗೊಳಿಸಲಿವೆ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು