ಮುಂದಿನ ವರ್ಷದಿಂದ ಕನಿಷ್ಠ ಕಲಿಕಾ ಮಟ್ಟ ಕಡ್ಡಾಯ


6 Feb, 2017

*ನವದೆಹಲಿ: ಮುಂದಿನ ಶೈಕ್ಷಣಿಕ ವರ್ಷದಿಂದ (2017–18) ಎಲ್ಲ ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಪ್ರಾಥಮಿಕ ತರಗತಿಗಳ ವಿದ್ಯಾರ್ಥಿಗಳು ವರ್ಷದ ಕೊನೆಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವಾಲಯ  ನಿಗದಿಪಡಿಸಿರುವ ಕನಿಷ್ಠ ಕಲಿಕಾ ಮಟ್ಟವನ್ನು ಹೊಂದುವುದು ಕಡ್ಡಾಯ.*

*ಶಾಲೆಗಳು, ಪೋಷಕರು ಮತ್ತು ಸಂಬಂಧಿಸಿದವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು (1ರಿಂದ 8ನೇ ತರಗತಿವರೆಗೆ) ಹೊಂದಿರಬೇಕಾದ ಕನಿಷ್ಠ ಕಲಿಕಾ ಮಟ್ಟವನ್ನು ನಿಗದಿ ಪಡಿಸಿದ್ದೇವೆ. ಇದನ್ನು ಶಿಕ್ಷಣ ಹಕ್ಕು (ಆರ್‌ಟಿಇ) ನಿಯಮಗಳ ಭಾಗವನ್ನಾಗಿ ಮಾಡುತ್ತೇವೆ. 2017–18ರಿಂದ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಹೊಸ ನಿಯಮವನ್ನು ಪಾಲಿಸುವುದು ಕಡ್ಡಾಯ' ಎಂದು ಎಚ್‌ಆರ್‌ಡಿ ಸಚಿವ ಪ್ರಕಾಶ್‌ ಜಾವಡೇಕರ್‌ ಭಾನುವಾರ ಹೇಳಿದರು.*

*ಉತ್ತಮ ಜ್ಞಾನ ಸಂಪಾದನೆಗಾಗಿ  ಗುಣಮಟ್ಟದ ಶಿಕ್ಷಣ ಪಡೆಯಲು ಇದು ವಿದ್ಯಾರ್ಥಿಗಳಿಗೆ ನೆರವಾಗಲಿದೆ. ಮಕ್ಕಳಿಗೆ ಬೋಧಿಸುವ ಶಿಕ್ಷಕರಿಗೂ ಸಹಕಾರಿಯಾಗಲಿದೆ. ಇದು ಆರ್‌ಟಿಇ ನಿಯಮದ ಭಾಗವಾಗಿರಲಿರುವುದರಿಂದ ಶೈಕ್ಷಣಿಕ ವರ್ಷದ ಕೊನೆಗೆ ಪ್ರತಿ ವಿದ್ಯಾರ್ಥಿ/ನಿ ಕನಿಷ್ಠ ಕಲಿಕಾ ಮಟ್ಟವನ್ನು ಸಾಧಿಸುವಂತೆ ಶಾಲೆಗಳು ಮಾಡಬೇಕಾಗುತ್ತದೆ' ಎಂದು ಸಚಿವಾಲಯದ ಅಧಿಕಾರಿಯೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.*

*ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು (ಎನ್‌ಸಿಇಆರ್‌ಟಿ) ಕನಿಷ್ಠ ಕಲಿಕಾ ಮಟ್ಟದ ಮಾನದಂಡ ನಿಗದಿಪಡಿಸಿದೆ. ಇದಕ್ಕಾಗಿ 118 ಪುಟಗಳ ವರದಿಯನ್ನು ಅದು ಸಿದ್ಧಪಡಿಸಿದೆ.*
*ಪರಿಸರ ಅಧ್ಯಯನ, ವಿಜ್ಞಾನ, ಗಣಿತ, ಸಮಾಜ ವಿಜ್ಞಾನ, ಹಿಂದಿ, ಇಂಗ್ಲಿಷ್‌ ಮತ್ತು ಉರ್ದು  ವಿಷಯಗಳಲ್ಲಿ 1ರಿಂದ 8ರವರೆಗಿನ ಪ್ರತಿ ತರಗತಿಗೆ ಕಲಿಕಾ ಮಟ್ಟ ನಿಗದಿಪಡಿಸಲಾಗಿದೆ.*

🌹 *ಕನಿಷ್ಠ ಕಲಿಕಾ ಮಟ್ಟ ಮಾನದಂಡ*

*ಎಂಟನೇ ತರಗತಿವರೆಗಿನ ಶಿಕ್ಷಣ ಮುಗಿಸುವ ಹೊತ್ತಿಗೆ ವಿದ್ಯಾರ್ಥಿ/ನಿಗೆ  ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಬೇಕು ಮತ್ತು ಇವು ತನ್ನ ನಿತ್ಯ ಜೀವನದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದನ್ನು ಗುರುತಿಸಬೇಕು*

*ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆ, ರಾಜ್ಯ ಮತ್ತು ಕೇಂದ್ರ ಮಟ್ಟಗಳಲ್ಲಿ ಅದರ ಕಾರ್ಯನಿರ್ವಹಣೆ ಬಗ್ಗೆ ಜ್ಞಾನ ಪಡೆದಿರಬೇಕು.

*ಲೋಕಸಭಾ ಚುನಾವಣಾ ಪ್ರಕ್ರಿಯೆ ಸೇರಿದಂತೆ ಸಾಮಾಜಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಪರಿಸರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸಮಾಜದ ವಿವಿಧ ವರ್ಗಗಳ ಕೊಡುಗೆಗಳನ್ನು ಗುರುತಿಸಬೇಕು.*

*ಎಂಟನೇ ತರಗತಿಯ ವಿದ್ಯಾರ್ಥಿಗಳು ಸಂವಿಧಾನದ ಮೌಲ್ಯಗಳನ್ನು ಗ್ರಹಿಸುವಂತೆ ಶಿಕ್ಷಕರು ಮಾಡಬೇಕು. ಅವರ ಕುಟುಂಬ ಹಾಗೂ ಸರ್ಕಾರ ನಿರ್ವಹಿಸುವ ಸಾಮಾಜಿಕ–ಆರ್ಥಿಕ ಪಾತ್ರದ ಬಗ್ಗೆಯೂ ಅವರಿಗೆ ತಿಳಿ ಹೇಳಬೇಕು.*

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು